×
Ad

ನಿಯಂತ್ರಣ ತಪ್ಪಿ ಎದೆಗೆ ಗುಂಡು

Update: 2017-07-20 19:56 IST

ಬೆಂಗಳೂರು, ಜು.20: ರಿವಾಲ್ವರ್‌ನಲ್ಲಿರುವ ಕಸ ತೆಗೆಯುವ ವೇಳೆ ನಿಯಂತ್ರಣ ತಪ್ಪಿ ಉದ್ಯೋಮಿಯೊಬ್ಬರ ಎದೆಗೆ ಗುಂಡು ತಗುಲಿರುವ ಘಟನೆ ಇಲ್ಲಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ದೊಡ್ಡನೆಕ್ಕುಂದಿ ನಿವಾಸಿ ನವೀನ್‌ರೆಡ್ಡಿ(45) ಎಂಬುವರಿಗೆ ಗುಂಡು ತಗುಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುರುವಾರ ಮಧ್ಯಾಹ್ನ ನವೀನ್‌ರೆಡ್ಡಿ ಮನೆಯಲ್ಲಿ ರಿವಾಲ್ವರ್‌ನಲ್ಲಿದ್ದ ಕಸ ತೆಗೆಯುವಾಗ ನಿಯಂತ್ರಣ ತಪ್ಪಿ ಗುಂಡು ಎದೆಗೆ ತಗುಲಿದೆ. ಬಳಿಕ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ನವೀನ್‌ನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನವೀನ್‌ರೆಡ್ಡಿ ಅವರಿಗೆ ನಷ್ಟ ಆಗಿರುವ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಎಚ್‌ಎಎಲ್ ಠಾಣಾ ಪೊಲೀಸರು, ನವೀನ್ ಸಂಬಂಧಿಕರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News