ಸೌದಿ ದೊರೆ ಸಲ್ಮಾನ್ ರ ಆದೇಶದಂತೆ ಸೌದಿ ರಾಜಕುಮಾರನ ಬಂಧನ

Update: 2017-07-21 11:03 GMT
ಸೌದಿ ದೊರೆ ಸಲ್ಮಾನ್

ರಿಯಾದ್, ಜು.21: ನಾಗರಿಕರೊಂದಿಗೆ ನಿಂದನಾತ್ಮಕ ರೀತಿಯಲ್ಲಿ ವರ್ತಿಸಿದ ವೀಡಿಯೋಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ  ಸೌದಿ ದೊರೆ ಸಲ್ಮಾನ್ ಅವರ ಆದೇಶದಂತೆ ರಾಜಕುಮಾರ ಸೌದಿ ಬಿನ್ ಅಬ್ದುಲ್ ಅಝೀಝ್ ಬಿನ್ ಮೊಸೆದ್ ಬಿನ್ ಅಬ್ದುಲ್ ಅಝೀಝ್ ಮತ್ತಾತನ ಸಹವರ್ತಿಗಳನ್ನು ಬುಧವಾರ ಬಂಧಿಸಲಾಗಿದೆ.

ಯುಟ್ಯೂಬಿನಲ್ಲಿರುವ ವೀಡಿಯೋದಲ್ಲಿ ಕಾಣಿಸುವಂತೆ ಈ ರಾಜಕುಮಾರ ವ್ಯಕ್ತಿಯೊಬ್ಬನತ್ತ ಶಸ್ತ್ರವೊಂದನ್ನು ತೋರಿಸುತ್ತಿರುವುದು ಹಾಗೂ ಇನ್ನೊಬ್ಬನಿಗೆ ಕಪಾಳ ಮೋಕ್ಷ ಮಾಡುತ್ತಿರುವುದು ಕಾಣಿಸುತ್ತದೆ. ವೀಡಿಯೋದಲ್ಲಿ ವಿಸ್ಕಿ ಬಾಟಲಿಗಳೂ ಕಾಣಿಸುತ್ತಿದ್ದು ಇದು ದೇಶದ ಮದ್ಯ ಸೇವನೆ ಹಾಗೂ ಮಾರಾಟ ನಿಷೇಧ ನಿಯಮದ ಉಲ್ಲಂಘನೆಯಾಗಿದೆ

ಅರಬಿ ಭಾಷೆಯಲ್ಲಿನ ಹ್ಯಾಶ್ ಟ್ಯಾಗ್ (ರಾಜಕುಮಾರನಿಂದ ನಾಗರಿಕರ ಮೇಲೆ ದೌರ್ಜನ್ಯ) ಜತೆಗೆ ಕಾಣಿಸಿಕೊಂಡ ವೀಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ ನಂತರದ ಬೆಳವಣಿಗೆಯಲ್ಲಿ ರಾಜಕುಮಾರನ ಬಂಧನ ವಾರಂಟ್ ಜಾರಿಯಾಗಿತ್ತು. ರಾಜಮನೆತನದ ಸವಲತ್ತುಗಳಿಗಿಂತಲೂ ಹೆಚ್ಚಾಗಿ ನಾಗರಿಕರ ಹಕ್ಕುಗಳಿಗೆ ಸೌದಿ ದೊರೆ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಈ ಬಂಧನ ನಡೆದಿದೆ.

ಅಧಿಕಾರಿಗಳಿಂದ ನಡೆದಿರಬಹುದಾದ ಅಧಿಕಾರ ದುರುಪಯೋಗ ಪ್ರಕರಣಗಳನ್ನು ತಮ್ಮ ಗಮನಕ್ಕೆ ತರುವಂತೆ ದೊರೆ ಸಲ್ಮಾನ್ ನಾಗರಿಕರನ್ನು ಕೇಳಿಕೊಂಡಿದ್ದಾರೆ.

ಸೌದಿ ರಾಜಕುಮಾರರಿಗೆ ಮಾಸಿಕ ಸಂಭಾವನೆಯ ಹೊರತಾಗಿ ವಿಶೇಷ ಸ್ಥಾನಮಾನವಿದ್ದರೂ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬಹುದು.
2013ರಲ್ಲಿ ರಾಜಕುಮಾರನೊಬ್ಬ ವ್ಯಕ್ತಿಯೊಬ್ಬನ ಮೇಲೆ ಗುಂಡಿಕ್ಕಿದ ನಂತರ ಆತನನ್ನು ಮರಣದಂಡನೆಗೆ ಗುರಿಯಾಗಿಸಲಾಗಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News