ಸೌದಿ ಅರೇಬಿಯ: ಕೋಳಿಮಾಂಸದ ಜೊತೆ ಸಾಗಿಸುತ್ತಿದ್ದ 67 ಕೆ.ಜಿ. ಕೊಕೈನ್ ವಶ

Update: 2017-07-21 11:14 GMT

ರಿಯಾದ್,ಜು. 21: ಕೋಳಿಮಾಂಸದ ಪ್ಯಾಕೆಟ್‌ಗಳ ಜೊತೆ ಮಾದಕವಸ್ತು ಕಳ್ಳಸಾಗಾಟ ನಡೆಸುವ ಯತ್ನವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ರಿಯಾದ್‌ಗೆ ಬಂದ ಕಂಟೈನರ್‌ನಲ್ಲಿ ಫ್ರೋಝನ್ ಚಿಕನ್ ಪ್ಯಾಕೆಟ್‌ನ ನಡುವೆ 67 ಕಿಲೊ ಕೊಕೈನ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ರಿಯಾದ್ ಕಿಂಗ್ ಅಬ್ದುಲ್ಲ ಇಕಾನಮಿಕ್ ಸಿಟಿಯ ಕಿಂಗ್ ಅಬ್ದುಲ್ಲ ಕಸ್ಟಮ್ಸ್ ಪೋರ್ಟ್ ಅಧಿಕಾರಿಗಳು ದೇಶದ ಮಾರುಕಟ್ಟೆಗೆ ಸಾಗಿಸಲಾಗುತ್ತಿದ್ದ ಮಾದಕವಸ್ತುವನ್ನು ಪತ್ತೆಹಚ್ಚಿದ್ದಾರೆ. ಕೋಲ್ಡ್ ಸ್ಟೋರೇಜ್ ಕಂಟೈನರ್‌ನಲ್ಲಿ ಮಾಂಸದ ಮಧ್ಯೆ ಕೊಕೈನ್ ಪ್ಯಾಕೇಟ್‌ಗಳನ್ನು ಅಡಗಿಸಿಡಲಾಗಿತ್ತು.

ಮಾಂಸದ ಪ್ಯಾಕೆಟ್‌ನ ಅದೇ ಅಳತೆಯಲ್ಲಿ ಮತ್ತುಆಕೃತಿಯಲ್ಲಿ ಮಾದಕವಸ್ತು ಪ್ಯಾಕೆಟ್‌ಗಳು ಇದ್ದವು. ಆದ್ದರಿಂದ ಕೊಕೈನ್‌ನ್ನು ಪತ್ತೆಹಚ್ಚುವುದು ಸುಲಭವಾಗಿರಲಿಲ್ಲ. ಆದರೆ ಸಂದೇಹಾಧಾರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೂಕ್ಷ್ಮ ಪರಿಶೀಲನೆ ನಡೆಸಿ ಮಾದಕವಸ್ತುವನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗಿದೆ. ದೇಶಕ್ಕೆ ನಿಷೇಧಿತ ವಸ್ತುಗಳ ಸಾಗಾಟಕ್ಕೆ ನಡೆಸುವ ಎಲ್ಲ ಯತ್ನಗಳನ್ನು ವಿಫಲಗೊಳಿಸಲಾಗುವುದು. ಇದಕ್ಕಾಗಿ. ಭೂಮಾರ್ಗ, ವಾಯು, ಸಮುದ್ರಮಾರ್ಗಗಳಲ್ಲಿ ಭಾರೀ ಕಟ್ಟೆಚ್ಚರವಹಿಸಲಾಗುತ್ತದೆ ಎಂದು ಕಸ್ಟಮ್ಸ್ ಜನರಲ್ ಡೈರಕ್ಟರ್ ಮುಹಮ್ಮದ್ ಅಲ್‌ಮೆಹ್ದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News