×
Ad

​ಸಾಧಕರೊಡನೆ ಸಂವಾದ ಕಾರ್ಯಕ್ರಮ

Update: 2017-07-22 21:19 IST

ಬೆಂಗಳೂರು, ಜು.22: ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ  ಮನುಷ್ಯನಿಗೆ ಶ್ರೇಷ್ಠ-ಕನಿಷ್ಠ ಎಂಬ ಭೇದ-ಭಾವ ಇರುವುದಿಲ್ಲ ಎಂದು ಸಂಸ್ಕೃತಿ ಚಿಂತಕ ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದ ಕಸಾಪದಲ್ಲಿ ಕರ್ನಾಟಕ ಲೇಖಕಿಯರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಆಯೋಜಿಸಿದ್ದ ಸಾಧಕರೊಡನೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಶಿಕ್ಷಣ ಮುಗಿದ ನಂತರ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆ. ಈ ನಗರದಲ್ಲಿ ಎಲ್ಲರೂ ಅಪರಿಚಿತರಾಗಿದ್ದರು. 2-3 ವರ್ಷಗಳ ಕಾಲ ಅಲೆಮಾರಿಯಾಗಿದ್ದೆ ಎಂದು ಹೇಳಿದರು.

ಬೆಂಗಳೂರಿನಂತಹ ನಗರದಲ್ಲಿ ಊಟ, ತಿಂಡಿಗೆ ಹಣವಿರಲಿಲ್ಲ. ಒಂದು ಪ್ಲೇಟ್ ಇಡ್ಲಿ ತಗೊಂಡು ನಾಲ್ಕು ಪ್ಲೇಟ್ ಸಾಂಬಾರು ತಿನ್ನುತ್ತಿದ್ದೆ. ಹತ್ತಾರು ಕಿ.ಮೀಗಳು ನಡೆದುಕೊಂಡು ಹೋಗುತ್ತಿದ್ದೆ. ಇಂತಹ ಸಂದರ್ಭದಲ್ಲಿ ಹರಿಹರ ಪ್ರಿಯ, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಅನೇಕರು ಪರಿಚಯವಾದರು. ಆದರೆ, ಎಂದೂ ನೀವು ಯಾವ ಜಾತಿ, ಧರ್ಮಕ್ಕೆ ಸೇರಿದವ ಎಂದು ಕೇಳಿದವರಲ್ಲ ಎಂದು ನೆನಪುಗಳನ್ನು ಮೆಲುಕು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News