ಹುಲಿ
Update: 2017-07-23 00:12 IST
‘‘ಆ ದಾರಿಯಲ್ಲಿ ಸಾಗಬೇಡಿ ಅಲ್ಲಿ ಹುಲಿ ಇದೆ...’’ ಎಂದು ಸಂತನಿಗೆ ಹೇಳಿದರು.
ಆದರೂ ಸಂತ ಮುಂದೆ ನಡೆದ. ಆತನ ಹಿಂದಿದ್ದ ಶಿಷ್ಯರಿಗೆ ಭಯವಾಯಿತು ‘‘ಗುರುಗಳೇ, ಆ ದಾರಿಯಲ್ಲಿ ಹುಲಿಯಿದೆಯಂತೆ...’’
‘‘ಹಾಗೆಂದು ನಾವು ನಡೆಯುವುದು ನಿಲ್ಲಿಸಲು ಸಾಧ್ಯವೇ? ನಾವು ಮುಂದೆ ಸಾಗಿದಂತೆಯೇ ಹುಲಿಯೂ ಮುಂದೆ ಸಾಗೀತು...’’ ಎಂದು ಮುಂದುವರಿದ. ಶಿಷ್ಯರು ಹಿಂಬಾಲಿಸಿದರು.