ಇಂಡಿಯನ್ ಸೋಶಿಯಲ್ ಫಾರಂ ಪ್ರಯತ್ನದಿಂದ ಭಾರತ ತಲುಪಿದ ಉತ್ತರ ಪ್ರದೇಶ ನಿವಾಸಿಯ ಮೃತದೇಹ

Update: 2017-07-23 15:18 GMT

ರಿಯಾದ್, ಜು. 23: ಸೌದಿ ಅರೇಬಿಯಾದ ಕಮೀಸ್ ಮುಷೈತ್  ನಗರದಲ್ಲಿ ಹೌಸ್ ಡ್ರೈವರ್  ಆಗಿ ದುಡಿಯುತ್ತಿದ್ದ ಉತ್ತರ ಪ್ರದೇಶದ ನಿವಾಸಿ ಮುಹಮ್ಮದ್ ಸದ್ದಾಂ ಎಂಬವರು ಸ್ವದೇಶಕ್ಕೆ ವಾಪಾಸಗಲು ಹತ್ತು ದಿವಸಗಳು ಬಾಕಿ ಇರುವಾಗಲೇ ವಿಧಿಯ ಕರೆಗೆ ಓಗೊಟ್ಟು  ಜು.5 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.

ಆಸ್ಪತ್ರೆಯಲ್ಲಿರುವ ಮೃತದೇಹದವನ್ನು ಅಂತ್ಯಕ್ರಿಯೆಗಾಗಿ ಸ್ವದೇಶಕ್ಕೆ ಕಳುಹಿಸಿಕೊಡುವ  ಹಿನ್ನೆಲೆಯಲ್ಲಿ  ಮೃತರ ವಾರಸುದಾರರು ಇದ್ದರೂ ಸೌದಿ ಕಾನೂನಿನ ಪ್ರಕಾರ ಅವರಿಗೆ ಅರಿವಿಲ್ಲದ ಕಾರಣ ಇಂಡಿಯನ್ ಎಂಬಸಿ  ಭಾರತೀಯ ರಾಯಭಾರ ಕಚೇರಿ  ಜಿದ್ದ ಇದರ ಕಾನ್ಸುಲೇಟ್ ಸದಸ್ಯರೂ  ಇಂಡಿಯನ್  ಸೋಶಿಯಲ್ ಫೋರಂನ ಕಮೀಸ್ ಮುಷೈತ್ ಘಟಕದ ಅಧ್ಯಕ್ಷರೂ  ಹಾಗೂ  ಸಾಮಾಜಿಕ ಕಾರ್ಯಕರ್ತ ಹನೀಫ್  ಮಂಜೇಶ್ವರರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿದ್ದರು.

ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಶೈತ್ ಘಟಕದ ಹನೀಫ್ ಮಂಜೇಶ್ವರ, ಸಾದಿಕ್ ಉಳ್ಳಾಲ, ತನ್ವೀರ್ ಮೈಂದಾಳ, ಫಾರೂಕ್ ಕೆ ಸಿ ರೋಡ್ ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೊಲೀಸ್ ಠಾಣೆ ಮತ್ತು ಅವರ ಕಫೀಲ್ (ವೀಸಾ ಪ್ರಾಯೋಜಕ) ರನ್ನು ಭೇಟಿ ಮಾಡಿ ದಾಖಲೆಗಳನ್ನು ಸರಿಪಡಿಸಿ ವ್ಯವಸ್ಥಿತಗೊಳಿಸಿದರು.

ಹನೀಫ್ ಮಂಜೇಶ್ವರ ಮತ್ತು ಇಂಡಿಯನ್ ಸೋಶಿಯಲ್ ಫೋರಮ್ ದಕ್ಷಿಣ ವಲಯದ ಅಧ್ಯಕ್ಷ ಸಯೀದ್ ಮೌಲವಿ ಇವರ ನೇತೃತ್ವದಲ್ಲಿ ಸೌದಿ ಮೆಡಿಕಲ್ ಸೆಂಟರ್ ಗೆ  ಮನವಿ ಸಲ್ಲಿಸಿ ಮರಣೋತ್ತರ ಪರೀಕ್ಷೆ ನಿರಾಕರಿಸಲು ನ್ಯಾಯಾಲಯಕ್ಕೆ ತಿಳಿಸಿ ಮೃತದೇಹವನ್ನು ಶೀಘ್ರವಾಗಿ ಭಾರತಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು.

ಇಂಡಿಯನ್ ಸೋಶಿಯಲ್ ಫೋರಂ ಕಮೀಸ್ ಮುಷ್ಯತ್ ಘಟಕದ ಸತತ ಪರಿಶ್ರಮದಿಂದ ಮುಹಮ್ಮದ್ ಸದ್ದಾಂ ಅವರ ಮೃತದೇಹವನ್ನು ಜು. 18ರಂದು ಅವರ ಸಹೋದರರಿಗೆ ಎಲ್ಲ ಕಡತಗಳನ್ನು ಹಸ್ತಾಂತರಿಸಿ ಲಕ್ನೋ  ವಿಮಾನ ನಿಲ್ದಾಣದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು.  

ಮುಹಮ್ಮದ್ ಸದ್ದಾಂ ನಿಧನಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಕಮೀಷ್ ಮುಷೈತ್  ಘಟಕ ಸಮಿತಿಯು ಸಂತಾಪ ಸೂಚಿಸಿದೆ. ಇಂಡಿಯನ್ ಸೋಶಿಯಲ್ ಫೋರಂನ ನೆರವಿಗೆ ಮೃತರ ಸಹೋದರ  ಹಾಗೂ ಸಂಬಂಧಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Writer - ಶಾಹುಲ್ ಹಮೀದ್ ಕಾಶಿಪಟ್ಣ

contributor

Editor - ಶಾಹುಲ್ ಹಮೀದ್ ಕಾಶಿಪಟ್ಣ

contributor

Similar News