ಯುವತಿಗೆ 11 ಬಾರಿ ಗರ್ಭಪಾತ ಆರೋಪ: ಕಾಂಗೋ ಮೂಲದ ಪ್ರಜೆಯ ಬಂಧನ
ಬೆಂಗಳೂರು, ಜು.23:ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಇಟ್ಟುಕೊಂಡು 11 ಬಾರಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಕಾಂಗೋ ಮೂಲದ ಪ್ರಜೆಯೊಬ್ಬನನ್ನು ಇಲ್ಲಿನ ಸುದ್ದುಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಎಂಎಸ್ ಪಾಳ್ಯದಲ್ಲಿ ವಾಸವಾಗಿದ್ದ ಕಾಂಗೋ ಮೂಲದ ಗುಲಾರ್ ಬಡಿಬಾಂಗ್ ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವತಿಯೊಂದಿಗೆ ಹಲವು ದಿನಗಳಿಂದ ದೈಹಿಕ ಸಂಪರ್ಕ ಹೊಂದಿದ್ದ ಆರೋಪಿ ಗುಲಾರ್ ಬಡಿಬಾಂಗ್, 11 ಬಾರಿ ಗರ್ಭಪಾತ ಮಾಡಿಸಿದ್ದ ಎನ್ನಲಾಗಿದೆ.ಬಳಿಕ ವೇಶ್ಯಾವಾಟಿಕೆ ದಂಧೆ ನಡೆಸುವಂತೆ ಒತ್ತಡ ಹಾಕುತ್ತಿದ್ದ ಎಂದು ತಿಳಿದುಬಂದಿದೆ.
ಇದೇ ವಿಚಾರವಾಗಿ ಯುವತಿ ಮತ್ತು ಆರೋಪಿ ನಡುವೆ ಎರಡು ದಿನಗಳ ಹಿಂದೆ ಜಗಳವಾಗಿದ್ದು, ಗುಲಾರ್ ಬಡಿಬಾಂಗ್ ದೌರ್ಜನ್ಯದಿಂದ ಬೇಸತ್ತು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಮೂಲಗಳು ತಿಳಿಸಿವೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.