ಕನ್ನಡಿ
Update: 2017-07-24 00:13 IST
ಆತ ಸಂತನಲ್ಲಿ ಬಂದು ಹೇಳಿದ ‘‘ಗುರುಗಳೇ, ನನ್ನ ಮನೆಯಲ್ಲಿ ಎರಡು ನೀಳ್ಗನ್ನಡಿಗಳಿವೆ. ಒಂದರಲ್ಲಿ ನನ್ನ ಮುಖ ಸುಂದರವಾಗಿ ಕಾಣುತ್ತದೆ. ಇನ್ನೊಂದರಲ್ಲಿ ಕೆಟ್ಟದಾಗಿ ಕಾಣುತ್ತದೆ. ನಾನೇನು ಮಾಡಲಿ?’’
ಸಂತ ಉತ್ತರಿಸಿದ ‘‘ನೋಡು, ಕೆಟ್ಟದಾಗಿ ನಿನ್ನನ್ನು ತೋರಿಸುತ್ತಿರುವ ಕನ್ನಡಿಯೇ ನಿಜವಾದುದು. ಅದನ್ನು ಇಟ್ಟುಕೋ. ಮತ್ತು ನಿನ್ನನ್ನು ಸುಂದರವಾಗಿ ತೋರಿಸುತ್ತಿರುವ ಕನ್ನಡಿಯನ್ನು ತಕ್ಷಣವೇ ಒಡೆದು ಹಾಕು...’’