ಈಶ್ವರಪ್ಪ ಪಿಎ ಕಿಡ್ನಾಪ್ ಪ್ರಕರಣ: ಬಿಎಸ್‌ವೈ ಪಿಎ ಜಾಮೀನಿಗೆ ಆಕ್ಷೇಪ
Update: 2017-07-24 21:32 IST
ಬೆಂಗಳೂರು, ಜು.24: ಈಶ್ವರಪ್ಪ ಪಿಎ ವಿನಯ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಬಿಎಸ್‌ವೈ ಪಿಎ ಸಂತೋಷ್ ಜಾಮೀನು ಅರ್ಜಿ ಕುರಿತಂತೆ ಸೆಷನ್ಸ್ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ ನಡೆಯಿತು.
ಈ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ನಾಗಪ್ಪ ಸಂತೋಷ್‌ಗೆ ನಿರೀಕ್ಷಣಾ ಜಾಮೀನು ನೀಡದಂತೆ ವಾದ ಮಂಡಿಸಿದರು. ಪೊಲೀಸ್ ವಿಚಾರಣೆ ವೇಳೆ ವಿನಯ್ ಅಪಹರಣ ಯತ್ನ ಪ್ರಕರಣದ ಪ್ರಮುಖ ಆರೋಪಿ ರಾಜೇಂದ್ರ ನೀಡಿರುವ ಹೇಳಿಕೆ ಆಧಾರದ ಮೇಲೆ ನಾಗಪ್ಪವಾದ ಮಂಡಿಸಿದರು.
ಈಶ್ವರಪ್ಪ ಅವರಿಗೆ ಸಂಬಂಧಿಸಿದ ವೀಡಿಯೋ ಪಡೆಯಲು ಯಡಿಯೂರಪ್ಪ ಪಿಎ ಸಂತೋಷ್, ಈಶ್ವರಪ್ಪ ಪಿಎ ವಿನಯ್‌ನನ್ನು ಕಿಡ್ಯಾಪ್ ಮಾಡಿಸಿದ್ದರು. ಹೀಗಾಗಿ ಸಂತೋಷ್‌ಗೆ ಜಾಮೀನು ನೀಡದಂತೆ ನಾಗಪ್ಪಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ.