×
Ad

ಓಲಾ ಕ್ಯಾಬ್ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

Update: 2017-07-24 21:34 IST

ಬೆಂಗಳೂರು, ಜು.24: ಓಲಾ ಕ್ಯಾಬ್‌ನಲ್ಲಿ ಲಹರಿ ರೆಕಾರ್ಡಿಂಗ್ ಹಕ್ಕು ಸ್ವಾಮ್ಯ ಹೊಂದಿರುವ ಬಾಹುಬಲಿ ಚಿತ್ರದ ಗೀತೆಗಳನ್ನು ಹಾಕಿದ ಆರೋಪ ಸಂಬಂಧ ಓಲಾ ಕ್ಯಾಬ್ ಸೇವೆಗಳ ಒಡೆತನದ ಕಂಪೆನಿಯಾದ ಎಎನ್‌ಟಿ ಟೆಕ್ನಾಲಜೀಸ್ ಪ್ರೈ.ಲಿ ವಿರುದ್ಧದ ಜೀವನ್ ಭೀಮಾನಗರ ಠಾಣೆಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.

ತಮ್ಮ ವಿರುದ್ಧ ಪ್ರಕರಣ ರದ್ದುಪಡಿಸುವಂತೆ ಕೋರಿ ಎಎನ್‌ಟಿ ಟೆಕ್ನಾಲಜೀಸ್ ಪ್ರೈ.ಲಿ. ಸಂಸ್ಥೆಯ ಮುಖ್ಯ ಕಾರ್ಯಕಾರಿಯ ಅಧಿಕಾರಿ ಭವೀಷ್ ಅಗರ್‌ವಾಲ್ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಅರವಿಂದ ಕುಮಾರ್ ಅವರಿದ್ದ ಪೀಠ ತಡೆಯಾಜ್ಞೆ ನೀಡಿತು. ಜತೆಗೆ, ಜೀವನ್ ಭೀಮಾನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಲಹರಿ ರೆಕಾರ್ಡಿಂಗ್ ಕಂಪನಿಗೆ ನೋಟಿಸ್ ಜಾರಿ ಮಾಡಿದೆ. ಅನುಮತಿ ಪಡೆದುಕೊಳ್ಳದೆ ಕ್ಯಾಬ್‌ನಲ್ಲಿ ಚಿತ್ರ ಗೀತೆಗಳನ್ನು ಹಾಕಿದ್ದಾರೆ ಎಂದು ಲಹರಿ ಅವರು ದೂರು ದಾಖಲಿಸಿದ್ದರು. ಹೀಗಾಗಿ, ಪ್ರಕರಣದಲ್ಲಿ ತಮ್ಮದೇನು ತಪ್ಪಿಲ್ಲ ಎಂದು ತಿಳಿಸಿ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News