ಬಿಸಿಯೂಟ ವ್ಯವಸ್ಥೆಗೆ ಶಿಕ್ಷಕರೇಕೆ?

Update: 2017-07-25 18:49 GMT

ಮಾನ್ಯರೆ,

ಶಾಲಾ ಮಕ್ಕಳ ಬಿಸಿಯೂಟ ವ್ಯವಸ್ಥೆಗೆ ಅಕ್ಕಿ, ಬೇಳೆ, ಎಣ್ಣೆ, ಹಾಲು, ಮೊಟ್ಟೆ, ಉಪ್ಪುಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಸರಕಾರವೇ ರವಾನಿಸುತ್ತದೆ. ಆದರೆ ಊಟಕ್ಕೆ ಬೇಕಾದ ಸಂಬಾರ ಪದಾರ್ಥ, ತರಕಾರಿ ಹಾಗೂ ಸಿಲಿಂಡರ್ ಜವಾಬ್ದಾರಿಯನ್ನು ಶಾಲೆಯ ಶಿಕ್ಷಕರಿಗೆ ವಹಿಸಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಸಂಬಾರ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದರಿಂದ ಸರಕಾರ ಮಕ್ಕಳ ಲೆಕ್ಕದಲ್ಲಿ ಅಲ್ಪಪ್ರಮಾಣದಲ್ಲಿ ನೀಡುವ ಹಣದಿಂದ ತರಕಾರಿ ಮತ್ತು ಸಂಬಾರ ಪದಾರ್ಥಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಅಡುಗೆಗೆ ಸಾಮಗ್ರಿ ಹೊಂದಿಸುವುದೇ ಕೆಲಸವಾಗುತ್ತದೆ. ಆದ್ದರಿಂದ ಸರಕಾರ ಈ ಸಮಸ್ಯೆಯ ಬಗ್ಗೆ ಗಮನ ನೀಡಿ ಬಿಸಿಯೂಟದ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ, ಶಿಕ್ಷಕರು ಪಾಠ ಮಾಡಲು ಅನುಕೂಲ ಮಾಡಿಕೊಡಲಿ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News