ನಿರ್ಜೀವ ಕೆರೆಗಳ ಡಿನೋಟಿಫೈ ಇಲ್ಲ: ಟಿ.ಬಿ.ಜಯಚಂದ್ರ

Update: 2017-07-26 16:27 GMT

ಬೆಂಗಳೂರು, ಜು.26: ನಿರ್ಜೀವ ಕೆರೆಗಳನ್ನು ಡಿ-ನೋಟಿಫೈ ಮಾಡುವ ವಿಚಾರ ಸರಕಾರದ ಮುಂದಿಲ್ಲ. ಆ ರೀತಿ ಮಾಡುವುದಕ್ಕೆ ಬರುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಖಚಿತ ಪಡಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ನಿರ್ಜೀವ ಕೆರೆಗಳನ್ನು ಡಿ-ನೋಟಿಫೈ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಡಿನೋಟಿಫೈ ಮಾಡುವ ಕುರಿತು ಸರಕಾರ ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.

ಎರಡು ಇಲಾಖೆಯ ನಡುವೆ ಡಿನೋಟಿಫೈ ಕುರಿತು ಚರ್ಚೆಯಾಗಿದೆ. ಇದನ್ನೇ ಸರಕಾರದ ನಿಲುವೆಂದು ಹೇಳಲಾಗುವುದಿಲ್ಲ. ನಗರ ವ್ಯಾಪ್ತಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಕೆರೆಗಳು ಬರಲಿದ್ದು, ಅವುಗಳ ಸಮಗ್ರ ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News