ಮಸಾಜ್ ಸೆಂಟರ್ ನೋಂದಣಿ ಕಡ್ಡಾಯ

Update: 2017-07-26 16:37 GMT

ಬೆಂಗಳೂರು, ಜು.26: ಅನಧಿಕೃತವಾಗಿ ನಡೆಸಲಾಗುತ್ತಿರುವ ಮಸಾಜ್ ಸೆಂಟರ್‌ಗಳು ಕೂಡಲೇ ತಮ್ಮ ವ್ಯಾಪ್ತಿಗೊಳಪಡುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಲ್ಲಿ ನಿಯಮಾನುಸಾರ ನೋಂದಾವಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಆಯುಷ್ ಇಲಾಖೆ ಆದೇಶಿಸಿದೆ.

ರಾಜ್ಯದಲ್ಲಿ ಅನೇಕ ಮಸಾಜ್ ಸೆಂಟರ್‌ಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ (ಕೆ.ಪಿ.ಎಂ.ಇ.) ಆಕ್ಟ್ 2007 ನಿಯಮ 2009 ರನ್ವಯ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದ್ದರೂ, ನೋಂದಾವಣಿ ಮಾಡಿಕೊಳ್ಳದೇ ನಡೆಸುತ್ತಿರುವುದು ತಿಳಿದು ಬಂದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News