50ನೆ ಟೆಸ್ಟ್ ಪಂದ್ಯ ಆಡಲು ರವಿಚಂದ್ರನ್ ಅಶ್ವಿನ್ ಸಜ್ಜು

Update: 2017-07-26 18:39 GMT

ಗಾಲೆ, ಜು.26: ಭಾರತ ಕ್ರಿಕೆಟ್‌ನ ತಂಡದ ಹಿರಿಯ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಶ್ರೀಲಂಕಾ ವಿರುದ್ಧ ಗುರುವಾರ ಮೊದಲ ಟೆಸ್ಟ್ ಪಂದ್ಯವನ್ನಾಡಲು ಕಣಕ್ಕಿಳಿಯುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ. ಚೆನ್ನೈನ ಬೌಲರ್‌ಗೆ ಇದು 50ನೆ ಟೆಸ್ಟ್ ಪಂದ್ಯವಾಗಿದೆ.

   2011ರಲ್ಲಿ ಹೊಸದಿಲ್ಲಿಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಅಶ್ವಿನ್ ತನ್ನ 45ನೆ ಪಂದ್ಯದಲ್ಲಿ ಅತ್ಯಂತ ವೇಗವಾಗಿ 250 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ಸ್ಪಿನ್ನರ್ ಎನಿಸಿಕೊಂಡಿದ್ದರು. ಅಶ್ವಿನ್ ಪ್ರಸ್ತುತ 49 ಪಂದ್ಯಗಳಲ್ಲಿ 275 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 30ರ ಹರೆಯದ ಅಶ್ವಿನ್‌ಗೆ ಅತ್ಯಂತ ವೇಗವಾಗಿ 300 ವಿಕೆಟ್ ಪಡೆದ ಸಾಧನೆ ಮಾಡುವ ಅವಕಾಶವಿದೆ. ಈ ಸಾಧನೆಗೆ ಅವರಿಗೆ ಕೇವಲ 25 ವಿಕೆಟ್‌ಗಳ ಅಗತ್ಯವಿದೆ. ಈ ಸಾಧನೆಯು ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಹೆಸರಲ್ಲಿದೆ. ಲಿಲ್ಲಿ 56 ಟೆಸ್ಟ್ ಗಳಲ್ಲಿ 300 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News