ಕೌಶಲ್ಯ ವಿಕಾಸ ಯೋಜನೆಗೆ ಚಾಲನೆ

Update: 2017-07-27 13:51 GMT

ಬೆಂಗಳೂರು, ಜು.27: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ ಗುರುತಿಸುಕೆ ಕಲಿಕಾ ಯೋಜನೆ(ಆರ್‌ಪಿಎಲ್)ಗೆ ಹೈ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಶಾಸಕ ಎಲ್.ಎ.ರವಿ ಸುಬ್ರಮಣ್ಯ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಎಲ್.ಎ.ರವಿಸುಬ್ರಮಣ್ಯ, ಪ್ರಧಾನಿ ಮೋದಿಯ ಕನಸಿನ ಯೋಜನೆಗಳಲ್ಲಿ ಇದು ಒಂದಾಗಿದ್ದು, ಹಂತ ಹಂತವಾಗಿ ಇದನ್ನು ಪೂರ್ಣಗೊಳಿಸಲಾಗುತ್ತದೆ. ಉದ್ಯೋಗ ಸೃಷ್ಟಿ ಮಾಡುವ ಪ್ರಕ್ರಿಯೆಯಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸುತ್ತೇವೆ. ಈ ಮೂಲಕ ನೂರಾರು ಯುವ ಜನರು ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಜೀವನಾವಶ್ಯಕ, ವೃತ್ತಿ ಅವಶ್ಯಕ ಕೌಶಲ್ಯಗಳು ಮತ್ತು ತಂತ್ರಜ್ಞಾನವನ್ನು ಈ ಯೋಜನೆಯ ಮೂಲಕ ಕಲಿಸಿಕೊಡಲಾಗುತ್ತದೆ. ಇದರಿಂದ ದೇಶದ ಸುಧಾರಣೆಯೂ ಆಗಲಿದೆ. ಈ ಮೂಲಕ ನಿರುದ್ಯೋಗ ಇಲ್ಲವಾಗಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಅದಕ್ಕಾಗಿ ಈ ಯೋಜನೆ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಆರೆಂಜ್‌ಟೆಕ್ ಸಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಎ.ವಿಶ್ವೇಶ್ ಮಾತನಾಡಿ, ಯುವಜನರಿಗೆ ಕೌಶಲ್ಯಗಳನ್ನು ಕಲಿಸಿ, ಜೀವನಾವಶ್ಯಕ ಮತ್ತು ಸ್ವಾವಲಂಬಿಗಳಾಗಿ ಮಾಡಲುಅವಶ್ಯಕವಾದ ಪ್ರಮುಖ ಕೌಶಲಗಳನ್ನು ತರಬೇತಿ ನೀಡುವ ಮಹತ್ತರ ಜವಾಬ್ದಾರಿಯನ್ನು ನಾವು ಹೊತ್ತಿದ್ದೇವೆ. ಹೌಸ್‌ಕೀಪಿಂಗ್ ಮತ್ತು ಪಾನ್ ಟ್ರೀ ಊಟ ತಿಂಡಿ ಉಪಚಾರ ಕ್ಷೇತ್ರದಲ್ಲಿ ಸುಮಾರು 2000 ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಯುವಕರನ್ನು ಸಮರ್ಥರನ್ನಾಗಿಸಿ ತರಬೇತಿ ನೀಡುವ ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವ ಮತ್ತು ಹೊಸ ಉದ್ಯೋಗ ಅವಕಾಶ ಸೃಷ್ಟಿ ಮಾಡುವ ಭರವಸೆಯನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯಆಧುನಿಕ ಕಲಾ ತಂತ್ರಜ್ಞಾನ ಮತ್ತು ಉಪಕರಣಗಳೊಂದಿಗೆ ಈ ಪ್ರಕಾರದಲ್ಲಿ ತರಬೇತಿಗೊಳಿಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು.

www.orangetechsolutions.com ವಾರದ ಕೊನೆಯಲ್ಲಿ ತರಬೇತಿಗಳು ನಡೆಯಲಿದ್ದು, ತರಬೇತಿಯಲ್ಲಿ ಭಾಗವಹಿಸಲಿ ಚ್ಛಿಸುವವರು 784, ಔಟ್ ರಿಂಗ್ ರೋಡ್, 2ನೆ ಹಂತ, ಬನಶಂಕರಿ 3 ನೆ ಹಂತ, ಬೆಂಗಳೂರು-560 085 ಇಲ್ಲಿಗೆ ಸಂಪರ್ಕಿಸಬಹುದು. ಅಥವಾ 80659 01777, 80659 02777, 80659 03777 ಸಂಖ್ಯೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News