‘ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ ಅನನ್ಯ’

Update: 2017-07-27 15:03 GMT

ಬೆಂಗಳೂರು, ಜು. 27: ದೇಶದ ಜಿಡಿಪಿಗೆ ಪ್ರವಾಸೋದ್ಯಮ ಮತ್ತು ಪ್ರಯಾಣ ವಲಯದ ಕೊಡುಗೆ 2025ರ ವೇಳೆಗೆ 275.2 ಬಿಲಿಯನ್ ಡಾಲರ್‌ಗೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಆರಿನ್ ಕ್ಯಾಪಿಟಲ್‌ನ ಸಹ ಸಂಸ್ಥಾಪಕ ಹಾಗೂ ಟ್ರಿಪ್ ಫ್ಯಾಕ್ಟರಿಯ ಹೂಡಿಕೆದಾರ ಟಿ.ವಿ.ಮೋಹನ್‌ದಾಸ್ ಪೈ ಹೇಳಿದ್ದಾರೆ.

ಗುರುವಾರ ಇಲ್ಲಿನ ರಾಜಾಜಿನಗರದಲ್ಲಿ ಆನ್‌ಲೈನ್ ಟ್ರಾವೆಲ್ ಕಂಪೆನಿ, ಟ್ರಿಪ್ ಫ್ಯಾಕ್ಟರಿ ವಿಶೇಷ ಹಾಲಿಡೇ ಸ್ಟೋರ್ಸ್‌ಗೆ ಚಾಲನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾಸೋದ್ಯಮದಿಂದ ಆದಾಯ ವೃದ್ಧಿಸುವುದಲ್ಲದೆ, ಪ್ರಗತಿಗೆ ವಿಫುಲ ಅವಕಾಶಗಳನ್ನು ಕಲ್ಪಿಸಲಿದೆ ಎಂದರು.

ಸ್ಟೋರ್‌ನ ಸಿಇಓ ಅಮಿತ್ ಅಗರ್‌ವಾಲ್, ರಜಾದಿನ ಎನ್ನುವುದು ಹೊಸ ಅಗತ್ಯ. ಪ್ರತಿಯೊಬ್ಬರೂ ರಜಾ ದಿನವನ್ನು ತಮ್ಮದೆ ಆದ ರೀತಿಯಲ್ಲಿ ಆನಂದಿಸಲು ಬಯಸುತ್ತಾರೆ. ತಂತ್ರಜ್ಞಾನ ಆಧರಿತ ಸ್ಟೋರ್‌ಗಳಿರುವುದರಿಂದ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆ ದೊರೆಯುತ್ತದೆ ಎಂದರು.
www. tripfactory.com ಈ ವೇಳೆ ಸಂಸ್ಥಾಪಕ ವಿನಯ್ ಗುಪ್ತಾ ಹಾಜರಿದ್ದರು. ಹೆಚ್ಚಿನ ವಿವರಗಳಿಗೆ ಅಮಿತ್ ಕುಮಾರ್ ಸಿಂಗ್-72692 13217, 99018 15574 ಅಥವಾ ಸಂಪರ್ಕಿಬದಾಗಿದೆ ಎಂದು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News