ಈ ಬಗ್ಗೆ ಸಿನೆಮಾ ಮಾಡುವ ಧೈರ್ಯ ತೋರಿಸಲಿ

Update: 2017-07-27 18:47 GMT

ಮಾನ್ಯರೆ,

ಈಗ ಬಿಡುಗಡೆಯಾಗುತ್ತಿರುವ ‘‘ಇಂದು ಸರ್ಕಾರ್’’ ಎಂಬ ವಿವಾದಿತ ಹಿಂದಿ ಚಲನಚಿತ್ರವನ್ನು ಮಧುರ್ ಭಂಡಾರ್ಕರ್ ನಿರ್ದೇಶಿಸಿದ್ದಾರೆ. ಅದು 1975ರ ತುರ್ತು ಪರಿಸ್ಥಿತಿ ಹಾಗೂ ಇಂದಿರಾ ಗಾಂಧಿ ಮತ್ತು ಸಂಜಯ ಗಾಂಧಿಯವರ ಖಾಸಗಿ ಜೀವನ ಆಧಾರಿತವಾಗಿದ್ದು, ಅದನ್ನು ಅಮಿತ್ ಶಾರ ಆದೇಶದಂತೆ ಇದೇ ವರ್ಷ ನವೆಂಬರಿನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿ ನಿರ್ಮಿಸಲಾಗಿದೆಯೆಂಬ ಸುದ್ದಿಯಿದೆ.

ಆದರೆ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಕಾಲಕ್ಕಿಂತ ಈಗಿನ ಮೋದಿಯವರ ಅಘೋಷಿತ ತುರ್ತುಪರಿಸ್ಥಿತಿ ಹೆಚ್ಚು ಕರಾಳವಾಗಿದೆ ಎಂದು ಸ್ವತಃ ಬಿಜೆಪಿಯ ಅಡ್ವಾಣಿಯವರೇ ಹೇಳಿರುವರು. ಈಗಿನ ಅಘೋಷಿತ ತುರ್ತು ಪರಿಸ್ಥಿತಿಯ ಬಗ್ಗೆ ಮತ್ತು ಮೋದಿಯ ನೋಟು ರದ್ದತಿಯಿಂದ ದೇಶದ ಜನರು ಪಟ್ಟ ಅಪಾರ ಬವಣೆ, ಬ್ಯಾಂಕ್ ಸರತಿಯಲ್ಲಿ ಸತ್ತ ಜನರು, ಕೆಲಸ ಕಳೆದುಕೊಂಡು ಬೀದಿಗೆ ಬಿದ್ದ 15 ಲಕ್ಷ ಬಡವರ ಕಂಬನಿ, ಕೇಸರಿ ಗೋ-ರಾಕ್ಷಸರು ನಡು ಬೀದಿಯಲ್ಲಿ ಮಾಡಿದ ಅಮಾನವೀಯ ಕೊಲೆಗಳು, ಇವೆಲ್ಲವನ್ನೂ ಸೇರಿಸಿ ಒಂದು ಅತ್ಯುತ್ತಮ ಟ್ರ್ಯಾಜಿಕ್ ಸಿನೆಮಾ ನಿರ್ಮಿಸಿದರೆ ಅದಕ್ಕೆ ಆಸ್ಕರ್ ಪ್ರಶಸ್ತಿ ಸಿಗುವುದು ಖಚಿತ. ನಿರ್ದೇಶಕ ಮಧುರ್ ಭಂಡಾರ್ಕರ್‌ರಿಗೆ ತನ್ನ ಭಂಡತನವನ್ನು ಮೋದಿಯವರ ಸಿನೆಮಾದಲ್ಲಿ ತೋರಿಸುವಷ್ಟು ಧೈರ್ಯವಿದೆಯೇ?

Writer - -ಆರ್.ಬಿ.ಶೇಣವ, ಮಂಗಳೂರು

contributor

Editor - -ಆರ್.ಬಿ.ಶೇಣವ, ಮಂಗಳೂರು

contributor

Similar News