ಬೇಜವಾಬ್ದಾರಿತನದಿಂದ ಟ್ರಾಫಿಕ್ ಜಾಮ್..!?

Update: 2017-07-27 18:48 GMT

ಮಾನ್ಯರೆ,

ಬೆಂಗಳೂರು ‘ಟ್ರಾಫಿಕ್ ಜಾಮ್ ನಗರಿ’ ಯಾಗಿ ಪರಿವರ್ತನೆಗೊಂಡು ಎಷ್ಟೋ ವರ್ಷಗಳಾಯಿತು. ಇದೀಗ ಸರದಿ ಮಂಗಳೂರು ಎನ್ನುವಂತಿದೆ. ‘ವಾಸಕ್ಕೆ ಯೋಗ್ಯ ನಗರಿ’ ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ಮಂಗಳೂರು ನಗರದಲ್ಲಿ ದಿನೇ ದಿನೇ ಟ್ರಾಫಿಕ್ ಕಿರಿಕಿರಿ ಹೆಚ್ಚಾಗುತ್ತಿದೆ. ನಗರದ ಪಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್, ಪಂಪ್‌ವೆಲ್‌ನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ, ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಡೀಲ್ ಬಳಿ ಟ್ರಾಫಿಕ್ ಜಾಮ್ ವಿಪರೀತವಾಗಿದೆ.
ಪಡೀಲ್ ಬಳಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ. ಈ ಭಾಗದಲ್ಲಿ ಬರುವ ಮಂಗಳೂರು- ಬಿ.ಸಿ.ರೋಡ್ ಮಧ್ಯೆ ಚತುಷ್ಪಥ ರಸ್ತೆ ನಿರ್ಮಾಣಗೊಂಡು 1 ವರ್ಷ ಕಳೆದಿದೆ. ಚತುಷ್ಪಥ ರಸ್ತೆಯನ್ನು ಇನ್ನೂ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಕೂಡಾ ಇರುವುದಿಲ್ಲ. ಹೀಗಾಗಿ ದಿನನಿತ್ಯ ಟ್ರಾಫಿಕ್ ನಲ್ಲಿ ಒದ್ದಾಡುವುದರ ಜೊತೆಗೆ ವಾಹನ ಸವಾರರ ಗುದ್ದಾಟ ಸಹ ನೋಡಬೇಕಾಗುತ್ತದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಟ್ರಾಫಿಕ್ ಜಾಮ್ ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.

Writer - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News