ಮೊದಲ ಟೆಸ್ಟ್ : ಭಾರತಕ್ಕೆ 309 ರನ್ ಗಳ ಮುನ್ನಡೆ

Update: 2017-07-28 09:26 GMT

ಗಾಲೆ, ಜು.28: ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತ 309 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಪಂದ್ಯದ ಮೂರನೆ ದಿನವಾಗಿರುವ ಶುಕ್ರವಾರ ಶ್ರೀಲಂಕಾ 78.3 ಓವರ್ ಗಳಲ್ಲಿ 291 ರನ್ ಗಳಿಗೆ ಮೊದಲ ಇನಿಂಗ್ಸ್ ಮುಗಿಸಿದೆ.  ಶ್ರೀಲಂಕಾ ಪರ ಮಾಜಿ ನಾಯಕ  ಆ್ಯಂಜೆಲೊ ಮ್ಯಾಥ್ಯೂಸ್ (82) ಮತ್ತು ದಿಲ್ರುವಾನ್ ಪೆರೆರಾ(ಔಟಾಗದೆ 92) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಭಾರತದ ರವೀಂದ್ರ ಜಡೇಜ 67ಕ್ಕೆ 3, ಶಮಿ 45ಕ್ಕೆ 2, ಉಮೇಶ್ ಯಾದವ್, ಆರ್.ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

ಎರಡನೆ ಇನಿಂಗ್ಸ್ ಆರಂಭಿಸಿದ ಭಾರತ 16.5 ಓವರ್ ಗಳಲ್ಲಿ 56 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದೆ. ಶಿಖರ್ ಧವನ್ (14) ಮತ್ತು ಚೆತೇಶ್ವರ ಪೂಜಾರ (15)  ಔಟಾಗಿದ್ದಾರೆ. ಅಭಿನವ್ ಮುಕುಂದ್ 27 ರನ್ ಗಳಿಸಿ ಔಟಾಗದೆ ಕ್ರೀಸ್ ನಲ್ಲಿದ್ದಾರೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News