×
Ad

‘ಆಧಾರ್‌ಕಾರ್ಡ್’ ದುರ್ಬಳಕೆ: ದೂರು ದಾಖಲು

Update: 2017-07-28 21:58 IST

ಬೆಂಗಳೂರು, ಜು.28: ಆಧಾರ್ ಕಾರ್ಡ್‌ಗೆ ನೀಡಲಾದ ಸಾರ್ವಜನಿಕ ಮಾಹಿತಿ ದುರ್ಬಳಕೆಯಾಗುತ್ತಿದೆ ಎಂದು ಆಧಾರ್ ಕಂಪೆನಿಯ ಉಪನಿರ್ದೇಶಕ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೇಶದಲ್ಲಿ ಎಲ್ಲ ರೀತಿಯ ವ್ಯವಹಾರಗಳಿಗೂ ಆಧಾರ್‌ಕಾರ್ಡ್ ಕಡ್ಡಾಯ ಮಾಡಲಾಗುತ್ತಿದೆ. ಆದರೆ, ಭಾರತೀಯ ಆಧಾರ್ ಸಂಸ್ಥೆ ಅಧಿಕೃತವಾಗಿ ಬಿಡುಗಡೆ ಮಾಡಿರುವ ವೆಬ್‌ಸೈಟ್ ಮೂಲಕ ಕ್ವಾರ್ಥ್ ಟೆಕ್ನಾಲಜೀಸ್ ಸಂಸ್ಥೆ ಯಾವುದೇ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕರ ಮಾಹಿತಿ ಸಂಗ್ರಹಿಸುತ್ತಿದೆ. ಅನಧಿಕೃತವಾಗಿ ಈ ಸಂಸ್ಥೆ ಸಾರ್ವಜನಿಕರ ಮಾಹಿತಿ ಸಂಗ್ರಹಿಸುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಲೆನಿನ್ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News