ಬ್ರಿಟಿಷರ ವಿರುದ್ಧ ಹೋರಾಡದಿರಲು ಚಂದ್ರಶೇಖರ್‌ ಆಝಾದ್‌ಗೆ ಹಣದ ಆಮಿಷ ಒಡ್ಡಿದ್ದ ಸಾವರ್ಕರ್

Update: 2017-07-31 05:21 GMT

ಆಝಾದ್ ಜನಿವಾರ ಧರಿಸಿ ನಿಗದಿತವಾಗಿ ವ್ಯಾಯಾಮ ಮಾಡುತ್ತಿದ್ದ ಒಬ್ಬ ಕುಸ್ತಿಪಟುವಾಗಿದ್ದರು. ಆದರೆ ಅವರ ಹಣೆಯ ಮೇಲೆ ‘‘ತಿಲಕ’’ ಇಟ್ಟಿರುವ ಒಂದೇ ಒಂದು ಚಿತ್ರವೂ ಇಲ್ಲ. ಎಡಪಂಥೀಯರು ಹಣೆಯ ಮೇಲೆ ತಿಲಕ ಇಡಬಾರದೆಂದೇನೂ ಇಲ್ಲ; ಇಟ್ಟರೆ ತಪ್ಪೂ ಇಲ್ಲ. ಆದರೆ ಕೆಲವು ಆಚರಣೆಗಳನ್ನು ಐತಿಹಾಸಿಕ ವ್ಯಕ್ತಿಗಳ ಮೇಲೆ ಹೇರಬಾರದು.

ಜುಲೈ 23 ಭಾರತದ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಶ್ರೇಷ್ಠನಾಯಕರಲ್ಲಿ ಒಬ್ಬರಾದ ಚಂದ್ರಶೇಖರ ಆಝಾದ್‌ರವರ 111ನೆ ಜನ್ಮದಿನ. ಆಝಾದ್ ಭಾರತದ ಪ್ರಮುಖ ಕ್ರಾಂತಿಕಾರಿ ಹಾಗೂ ಸಾಮ್ರಾಜ್ಯಶಾಹಿ ವಿರೋಧಿಯಾದ ಸಂಘಟನೆಯಾಗಿರುವ ಹಿಂದೂಸ್ಥಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಆರ್ಮಿ (ಎಚ್‌ಎಸ್‌ಆರ್‌ಎ) ಯನ್ನು ಮುನ್ನೆಡೆಸಿದವರು. ಆ ಮೊದಲು ಸಂಘಟನೆಯ ಹೆಸರು ಎಚ್‌ಆರ್‌ಎ ಆಗಿದ್ದಾಗ ರಾಮ್‌ಪ್ರಸಾದ್‌ಬಿಸ್ಮಿಲ್ ಅದರ ಮುಖ್ಯಸ್ಥರಾಗಿದ್ದರು.

ಎಚ್‌ಆರ್‌ಎಯ (ಹಿಂದೂಸ್ಥಾನ್ ರಿಪಬ್ಲಿಕ್ ಆರ್ಮಿ) ಉಜ್ವಲ ನಾಯಕರಾಗಿದ್ದ ರಾಮ್‌ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ, ರೋಶನ್‌ಸಿಂಗ್‌ಮತ್ತು ರಾಜೇಂದ್ರಲಹರಿಯವರು ಬಂಧಿಸಲ್ಪಟ್ಟ ಬಳಿಕ, ಆಝಾದ್ ಆ ಸಂಘಟನೆಯ ನಾಯಕತ್ವ ವನ್ನು ವಹಿಸಿಕೊಂಡರು. ಬಂಧಿಸಲ್ಪಟ್ಟ ಎಲ್ಲ ನಾಲ್ವರನ್ನೂ ಬೇರೆ ಬೇರೆ ಸ್ಥಳಗಳಲ್ಲಿ ನೇಣಿಗೆ ಹಾಕಲಾಯಿತು. ಹೀಗೆ ಎಚ್‌ಆರ್‌ಎಯ ಬೆನ್ನುಮೂಳೆಯನ್ನು ಮುರಿಯಲಾಯಿತು.

ಆದರೂ ಆಝಾದ್‌ರವರು ಭಗತ್‌ಸಿಂಗ್, ಸುಖದೇವ್ ಮತ್ತು ರಾಜ್‌ಗುರು ಅವರೊಂದಿಗೆ ಸೇರಿ ಬ್ರಿಟಿಷ್ ಆಳ್ವಿಕೆಯನ್ನು ಕಿತ್ತೊಗೆಯಲು ಬದ್ಧವಾದ ಒಂದು ಸಮಾಜವಾದಿ ಸಂಘಟನೆಯಾಗಿ ಹಿಂದೂಸ್ಥಾನ್ ರಿಪಬ್ಲಿಕ್ ಆರ್ಮಿಯನ್ನು ಪುನರ್ನಿರ್ಮಾಣ ಮಾಡಿದರು.

  ಓರ್ವ ಎಡಪಂಥೀಯನಾದರೂ ಆಝಾದ್‌ಎಂದೂ ಪವಿತ್ರವಾದ ಧಾರ್ಮಿಕ ದಾರವನ್ನು (ಜನಿವಾರ ಧರಿಸುವುದನ್ನು) ಬಿಡಲಿಲ್ಲ. ಮಧ್ಯಪ್ರದೇಶದಲ್ಲಿ ಜನಿಸಿದವರಾದರೂ, ಅವರು ಉತ್ತರಪ್ರದೇಶದ ಉನಾವೊ ಎಂಬಲ್ಲಿನ ಬದರ್ಕಾದ ಕನ್ಯಾಕುಬ್ಜ ಬ್ರಾಹ್ಮಣರಾಗಿದ್ದರು. ಬಿಂದಾತಿವಾರಿ, ಮಂಗಲ್‌ಪಾಂಡೆ ಮತ್ತು ಇತರ ಅನೇಕ ಸ್ವಾತಂತ್ರ ಹೋರಾಟಗಾರರನ್ನು ದೇಶಕ್ಕೆ ನೀಡಿದ ಅವಧ್ ಪ್ರಾಂತಕ್ಕೆ ಸೇರಿದವರು ಆಝಾದ್. ಅವಧ್‌ದ ಬ್ರಾಹ್ಮಣರಲ್ಲಿ ಮೂರ್ತಿಪೂಜೆ ಮಾಡುವವರು ಮತ್ತು ಮೂರ್ತಿ ಭಂಜಕರು ಇಬ್ಬರೂ ಇದ್ದರು. ಅವರು ಯಥಾಸ್ಥಿತಿವಾದಿಗಳೂ ಜತೆಗೆ ಮಹಾ ಕ್ರಾಂತಿಕಾರಿಗಳೂ ಆಗಿದ್ದರು. ನಿಜವಾಗಿ ಅವರು ಬ್ರಾಹ್ಮಣನೀತಿ ಎಂದರೆ ಜಾತಿ ಅಥವಾ ಧರ್ಮ ಆಧಾರಿತ ಸ್ವಜನಪಕ್ಷಪಾತಕ್ಕಿಂತ ಪ್ರತಿಭೆ ಮುಖ್ಯ, ನ್ಯಾಯಕ್ಕಾಗಿ ಹೋರಾಟ ಒಂದು ದೈವಿಕ ಕರ್ತವ್ಯ, ಸಾಮಾಜಿಕ ಜವಾಬ್ದಾರಿಯೂ ಒಂದು ಮುಖ್ಯ ವೌಲ್ಯ ಮತ್ತು ಇತರ ಧರ್ಮಗಳ ಬಗ್ಗೆ ಸಹನೆ/ಸಮಗ್ರತೆ ಒಂದು ನೈತಿಕ ಕರ್ತವ್ಯ ಎಂದು ತಿಳಿದಿದ್ದರು.

 ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಸೇರಿದ ಶಕ್ತಿಗಳು ಇಂದು ಹಿಂದುತ್ವ ರೀತಿಯ ತಿಲಕವನ್ನು ಹಣೆಯ ಮೇಲಿಟ್ಟು ಆಝಾದ್‌ರ ಖೋಟಾ ಚಿತ್ರಗಳನ್ನು ಸೃಷ್ಟಿಸುತ್ತಿರುವುದರಿಂದ ಮೇಲೆ ಹೇಳಿದ ಅವರ ಈ ಎಲ್ಲ ಗುಣವಿಶೇಷಗಳನ್ನು ನೆನಪು ಮಾಡಿಕೊಳ್ಳುವ ಅಗತ್ಯವಿದೆ.

 ಆಝಾದ್ ಜನಿವಾರ ಧರಿಸಿ ನಿಗದಿತವಾಗಿ ವ್ಯಾಯಾಮ ಮಾಡುತ್ತಿದ್ದ ಒಬ್ಬ ಕುಸ್ತಿಪಟುವಾಗಿದ್ದರು. ಆದರೆ ಅವರ ಹಣೆಯ ಮೇಲೆ ‘‘ತಿಲಕ’’ ಇಟ್ಟಿರುವ ಒಂದೇ ಒಂದು ಚಿತ್ರವೂ ಇಲ್ಲ. ಎಡಪಂಥೀಯರು ಹಣೆಯ ಮೇಲೆ ತಿಲಕ ಇಡಬಾರದೆಂದೇನೂ ಇಲ್ಲ; ಇಟ್ಟರೆ ತಪ್ಪೂ ಇಲ್ಲ. ಆದರೆ ಕೆಲವು ಆಚರಣೆಗಳನ್ನು ಐತಿಹಾಸಿಕ ವ್ಯಕ್ತಿಗಳ ಮೇಲೆ ಹೇರಬಾರದು.

ಆ ಮೊದಲು, 1980ರ ದಶಕದಲ್ಲಿ ಖಲಿಸ್ತಾನಿಗಳು ಭಗವತ್‌ಸಿಂಗ್‌ರನ್ನು ಕೇವಲ ಒಬ್ಬ ಸಿಖ್ ಹೀರೋ ಎಂದು ತಮ್ಮ ನಾಯಕನನ್ನಾಗಿ ಹೀರೋ ಆಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಭಾರತದ ಸ್ವಾತಂತ್ರ ಹೋರಾಟದ ಒಬ್ಬ ಹುತಾತ್ಮನಾಗುವ ಮೊದಲು ತಾನು ಬರೆದ ಲೇಖನವೊಂದರಲ್ಲಿ ಭಗತ್‌ಸಿಂಗ್ ತಾನು ನಾಸ್ತಿಕನೆಂದು ಬಹಿರಂಗವಾಗಿಯೇ ಪ್ರಕಟಿಸಿದ್ದರು.

  ಅದೇ ರೀತಿಯಾಗಿ, ಆಝಾದ್‌ರನ್ನು ತಮ್ಮವನನ್ನಾಗಿ ಮಾಡಿಕೊಳ್ಳುವ ಹಿಂದುತ್ವದ ಪ್ರಯತ್ನಗಳು ಕೂಡ ಸೋಲುತ್ತವೆ. ವಿಶೇಷವಾಗಿ ಯಾಕೆಂದರೆ ಆರೆಸ್ಸೆಸ್ ಮತ್ತು ಹಿಂದೂಮಹಾಸಭಾದ ಬಗ್ಗೆ ಆಝಾದ್ ಅವರಿಗಿದ್ದ ದ್ವೇಷ, ಜಿಗುಪ್ಸೆ ಸ್ಪಷ್ಟವಾಗಿ ದಾಖಲಾಗಿದೆ. ಆರೆಸ್ಸೆಸ್ ಸ್ಥಾಪಕ ಹಾಗೂ ಎಚ್‌ಆರ್‌ಎಯ ಓರ್ವ ಮಾಜಿ ಸದಸ್ಯರಾಗಿದ್ದ ಹೆಡ್ಗೆವಾರ್ ಬ್ರಿಟಿಷರ ಓರ್ವ ಮಾಹಿತಿದಾರರಾಗಿದ್ದರು ಎಂಬುದು ಆಝಾದ್‌ರಿಗೆ ಗೊತ್ತಿತ್ತು. ರಾಮ್‌ಪ್ರಸಾದ್ ಬಿಸ್ಮಿಲ್ ಮತ್ತು ಎಚ್‌ಆರ್‌ಎಯ ಇತರ ಕಾಮ್ರೇಡ್‌ಗಳ ಬಗ್ಗೆ ಹೆಡ್ಗೆವಾರ್ ಮಾಹಿತಿ ನೀಡಿದ್ದರೆಂದು ಭಗತ್‌ಸಿಂಗ್ ಮತ್ತು ಆಝಾದ್‌ಗೆ ಅನುಮಾನವಿತ್ತು.ಎಚ್‌ಎಸ್‌ಆರ್‌ಎಯ ನಾಯಕರು ಆರೆಸ್ಸೆಸ್ ಸದಸ್ಯರನ್ನು ‘‘ ಟೋಡಿ ಬಚ್ಚಾ ’’ ಗಳು ಅಥವಾ ಬ್ರಿಟಿಷರ ಚೇಲ (ಪಯರ್‌ಲಿಂಗ್) ಗಳು ಎಂದು ಕರೆಯುತ್ತಿದ್ದರು.

ಲಾಲಾಲಜಪತ್‌ರಾಯ್ ಅವರ ಸಾವಿಗೆ ಪ್ರತೀಕಾರವಾಗಿ ಆಝಾದ್ ಮತ್ತು ಭಗತ್ ಜತೆ ಸೇರಿ ಲಾಹೋರ್‌ನ ಬ್ರಿಟಿಷ್ ಅಧಿಕಾರಿ ಸಾಂಡರ್ಸ್‌ನ ರಾಜಕೀಯ ಹತ್ಯೆಯನ್ನು ಯೋಜಿಸಿದರು ಮತ್ತು ಕಾರ್ಯಗತಗೊಳಿಸಿದರು.

ಭಗತ್‌ಸಿಂಗ್ ಬಂಧನದ ಬಳಿಕ ತನ್ನ ಕಾಮ್ರೇಡ್‌ಗಳ ಪರ ವಕೀಲಿಗಾಗಿ ಆಝಾದ್‌ವಂತಿಗೆ ಹಣ ಕೂಡಿಸುತ್ತಿದ್ದರು. ಆಗ ಎಚ್‌ಎಸ್‌ಆರ್‌ಎಯ ಭಾಗವಾಗಿದ್ದ ಯಶ್‌ಪಾಲರನ್ನು ಆಝಾದ್, ಹಿಂದೂಮಹಾಸಭಾದ ಸಾವರ್ಕರ್ ಬಳಿಗೆ ಕಳುಹಿಸಿದರು.

ಆಝಾದ್ ಮತ್ತು ಎಚ್‌ಎಸ್‌ಆರ್‌ಎಯ ಹೋರಾಟಗಾರರು ಬ್ರಿಟಿಷರ ವಿರುದ್ಧ ತಮ್ಮ ಹೋರಾಟವನ್ನು ನಿಲ್ಲಿಸಬೇಕು ಮತ್ತು ಜಿನ್ನಾ ಹಾಗೂ ಇತರ ಮುಸ್ಲಿಮರ ರಾಜಕೀಯ ಹತ್ಯೆ ನಡೆಸಬೇಕು ಎಂಬ ಶರತ್ತಿಗೆ ಒಪ್ಪುವುದಾದಲ್ಲಿ 50 ಸಾವಿರ ರೂಪಾಯಿ ನೀಡಲು ಸಾವರ್ಕರ್ ಒಪ್ಪಿದರೆಂದು ಯಶ್‌ಪಾಲ್ ತನ್ನ ಜೀವನಚರಿತ್ರೆ ‘‘ಸಿಂಘಾವಲೋಕನ್ ’’ ದಲ್ಲಿ ಬರೆಯುತ್ತಾರೆ !

ಇದನ್ನೂ ಓದಿ: ಸಾವರ್ಕರ್ ದ್ವಿತೀಯ ವಿಶ್ವಾಸದ್ರೋಹ.

   ಭಗತ್‌ಸಿಂಗ್ ಹುತಾತ್ಮರಾದ ಬಳಿಕ ಸಾವರ್ಕರ್ ಸಹೋದರ ,ದುರ್ಗಾಬಾಬಿ ಮತ್ತು ಆಕೆಯ ಮಗನನ್ನು ಹೇಗೆ ತ್ಯಜಿಸಿದರು. ‘‘ ಫೈಟರ್ ಫಾರ್ ಫ್ರೀಡಮ್ ರೈಟರ್ ಫಾರ್ ಜಸ್ಟೀಸ್ ’’ ಎಂಬ ತನ್ನ ಇನ್ನೊಂದು ಪುಸ್ತಕದ 72ನೆ ಪುಟದಲ್ಲಿ ಯಶ್‌ಪಾಲ್ ಹೀಗೆ ಬರೆದಿದ್ದಾರೆ. ‘‘ ಸಾವರ್ಕರ್ ನನ್ನ ವಿನಂತಿಯನ್ನು ನಿರಾಕರಿಸಲಿಲ್ಲ, ಆದರೆ ತನ್ನದೇ ಆದ ದೃಷ್ಟಿಕೋನ ಮತ್ತು ಉದ್ದೇಶವನ್ನು ವಿವರಿಸುತ್ತ ಅವರು ಹೇಳಿದರು, ವಿದೇಶಿಯರ ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸುವುದು ನಮ್ಮ ಗುರಿ. ದೇಶವನ್ನು ಸ್ವತಂತ್ರಗೊಳಿಸುವುದರ ಉದ್ದೇಶ ನಾವು ಒಂದು ರಾಷ್ಟ್ರವಾಗುವ ದಿಕ್ಕಿನಲ್ಲಿ ಮುಂದೆ ಸಾಗುವುದು ......... ನೀವು ಅವರನ್ನು (ಜಿನ್ನಾ) ಮುಗಿಸಿಬಿಡುವ ಜವಾಬ್ದಾರಿ ತೆಗೆದುಕೊಂಡಲ್ಲಿ ಆಗ ಸ್ವಾತಂತ್ರದ ಹಾದಿಯಲ್ಲಿರುವ ಅತ್ಯಂತ ದೊಡ್ಡ ಒಂದು ತಡೆಯನ್ನು ಕಿತ್ತೆಸೆದಂತಾಗುತ್ತದೆ. ಮತ್ತು ಅದಕ್ಕೆ 50 ಸಾವಿರ ರೂಪಾಯಿ ಪಾವತಿಸಲು ನಾನು ಏರ್ಪಾಡು ಮಾಡಬಲ್ಲೆ ’’

   ಸಾವರ್ಕರ್ ಪ್ರಸ್ತಾಪವನ್ನು ಹೇಳಿದಾಗ ಆಝಾದ್‌ರು ಸಾವರ್ಕರ್‌ಗೆ ಶಪಿಸಿ ಹೀಗೆ ಹೇಳಿದರು. ‘‘ ಈ ಮನುಷ್ಯ ನಮ್ಮನ್ನು ಸ್ವಾತಂತ್ರ ಹೋರಾಟಗಾರರೆಂದು ಪರಿಗಣಿಸುತ್ತಿಲ್ಲ, ಬದಲಾಗಿ ನಾವು ಸುಪಾರಿ ಹಂತಕರೆಂದು ತಿಳಿದಿದ್ದಾರೆ. ಅವರು ಬ್ರಿಟಿಷರ ಜತೆ ಸೇರಿಕೊಂಡು ಒಳಸಂಚು (ಕೊಲ್ಯೂಡ್) ನಡೆಸುತ್ತಿದ್ದಾರೆ. ನಮ್ಮ ಹೋರಾಟ ಬ್ರಿಟಿಷರ ವಿರುದ್ಧ, ನಾವ್ಯಾಕೆ ಮುಸ್ಲಿಮರನ್ನು ಕೊಲ್ಲಬೇಕು ? ನಮಗೆ ಅವರ ದುಡ್ಡು ಬೇಕಾಗಿಲ್ಲವೆಂದು ಹೇಳು’’ (ಅಮರೇಶ್ ಮಿಶ್ರಾ ಓರ್ವ ಲೇಖಕರು ಮತ್ತು ಇಲ್ಲಿ ವ್ಯಕ್ತ ಪಡಿಸಲಾಗಿರುವ ಅಭಿಪ್ರಾಯಗಳು ಅವರ ಸ್ವಂತ ಅಭಿಪ್ರಾಯಗಳು ಮಾತ್ರ. ಜನತಾಕ ರಿಪೋರ್ಟರ್ ಅವರ ಅಭಿಪ್ರಾಯಗಳನ್ನು ಅನುಮೋದಿಸುವುದಿಲ್ಲ).

Writer - ಅಮರೇಶ್ ಮಿಶ್ರಾ

contributor

Editor - ಅಮರೇಶ್ ಮಿಶ್ರಾ

contributor

Similar News