ಶಂಕಿತ ಆರೋಪಿಗಳು ಬಳ್ಳಾರಿ ಕೋರ್ಟ್‌ಗೆ ಹಾಜರು
Update: 2017-07-31 20:47 IST
ಬಳ್ಳಾರಿ, ಜು.31: ಬಳ್ಳಾರಿಯ ನ್ಯಾಯಾಲಯಕ್ಕೆ ಉಗ್ರರೊಂದಿಗೆ ಸಂಬಂಧ ಹೊಂದಿದ್ದಾರೆನ್ನುವ ಮೂವರು ಶಂಕಿತ ಆರೋಪಿಗಳನ್ನು ಸೋಮವಾರ ಪೊಲೀಸರ ಬಿಗಿ ಭದ್ರತೆಯಲ್ಲಿ ಹಾಜರುಪಡಿಸಲಾಯಿತು. ಅಹಮ್ಮದಾಬಾದ್‌ನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅನುಮಾನಿತ ಆರೋಪಿಗಳಾದ ಅಸಾದುಲ್ಲಾ, ರಾಜುದ್ದೀನ್, ಶಕೀಲ್ ಅಹಮ್ಮದ್ ಎಂಬುವವರನ್ನು ಸೋಮವಾರ ಮಧ್ಯಾಹ್ನ ಬಳ್ಳಾರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಅಲ್ಲದೆ, ರಾಜ್ಯ ಹೈಕೋರ್ಟ್‌ನ ಸೂಚನೆಯ ಮೇರೆಗೆ ಈ ಮೂವರು ಶಂಕಿತ ಆರೋಪಿಗಳನ್ನು ಗುಜರಾತ್ ಪೊಲೀಸರು ಹಾಗೂ ರಾಜ್ಯ ಪೊಲೀಸರ ಬಿಗಿ ಭದ್ರತೆಯಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಕರೆತರಲಾಗಿತ್ತು.