ರಂಭಾಪುರಿ ಶ್ರೀಗಳ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
Update: 2017-07-31 20:49 IST
ಬೆಂಗಳೂರು, ಜು.31: ಮಾತೆ ಮಹಾದೇವಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ರಂಭಾಪುರಿ ಮಠದ ಪೀಠಾಧಿಪತಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ವಿರುದ್ಧ ಬಿ.ಎಸ್.ಗೌಡ ಎಂಬುವರು ದೂರು ನೀಡಿದ್ದಾರೆ.
ನಾಲ್ಕು ದಿನಗಳ ಹಿಂದೆ ರಂಭಾಪುರಿ ಶ್ರೀಗಳಾದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಅವರು ಮಾತೆ ಮಹಾದೇವಿ ವಿರುದ್ಧ ಒಂದು ಪತ್ರ ಬಿಡುಗಡೆ ಮಾಡಿ, ಮಾತೆಯ ಬಾಲ್ಯದ ಬಗ್ಗೆ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ಮಾತೆ ಮಹಾದೇವಿ ಅವರು ಎಲ್ಲರಿಗೂ ತಾಯಿ ಸ್ಥಾನದಲ್ಲಿದ್ದಾರೆ. ಆದರೆ, ಅವರ ತೇಜೋವಧೆ ಸರಿಯಲ್ಲ. ಹೀಗಾಗಿ ರಂಭಾಪುರಿ ಶ್ರೀಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿ.ಎಸ್.ಗೌಡ ಪತ್ರದಲ್ಲಿ ಒತ್ತಾಯಿಸಿದ್ದಾರೆ.