ಶಾಸಕ ಅನಿಲ್ ಲಾಡ್ ವಿರುದ್ಧ ಕಿಡಿಕಾರಿದ ಹೈಕೋರ್ಟ್
Update: 2017-07-31 21:51 IST
ಬೆಂಗಳೂರು, ಜು.31: ಕೆನರಾ ಮಿನರಲ್ಸ್ ಲಿಮಿಟೆಡ್‌ನ ಆಸ್ತಿಯನ್ನು ಹರಾಜಿಗೆ ಹಾಕಬಾರದೆಂದು ಶಾಸಕ ಅನಿಲ್ ಲಾಡ್ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ಅನಿಲ್ ಲಾಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠವು ಉತ್ಪಾದಕವಲ್ಲದ ಕಂಪೆನಿಗಳ ಆಸ್ತಿಯನ್ನು ಹರಾಜಿಗೆ ಹಾಕದಿರುವುದರಿಂದಲೇ ಸಾಲ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಿಸಿ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಅಲ್ಲದೆ, ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಅನಿಲ್ ಲಾಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.