ಗಂಗಾಧರ ಶೆಟ್ಟಿ

Update: 2017-07-31 17:19 GMT

ಬಂಟ್ವಾಳ, ಜು. 31: ತೆಂಕುತಿಟ್ಟು ಯಕ್ಷಗಾನದ ರಾಜ ವೇಷಧಾರಿ, ಶ್ರೀ ಬಪ್ಪನಾಡು ಮೇಳದ ಹಿರಿಯ ಕಲಾವಿದ ಬೆಳ್ತಂಗಡಿ ತಾಲೂಕಿನ ನಾವೂರ ನಿವಾಸಿ ಗಂಗಾಧರ ಶೆಟ್ಟಿ (48) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಚಿಕ್ಕಮೇಳದ ತಿರುಗಾಟದಲ್ಲೂ ಪಾಲ್ಗೊಳ್ಳುತ್ತಿದ್ದ ಅವರು ಸೋಮವಾರ ಮುಂಜಾನೆ ವಾಮದಪದವಿನಲ್ಲಿ ವಾಸ್ತವ್ಯದ ಕೊಠಡಿಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ಅವರನ್ನು ಬಿ.ಸಿ.ರೋಡ್‌ನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಸೂರಿಕುಮೇರು ಗೋವಿಂದ ಭಟ್ ಅವರಿಂದ ಯಕ್ಷಗಾನ ತರಬೇತಿ ಪಡೆದಿದ್ದ ಅವರು, ಕದ್ರಿ, ಮಂಗಳಾದೇವಿ, ಕುಂಟಾರು, ಪುತ್ತೂರು ಹಾಗೂ ಬಪ್ಪನಾಡು ಮತ್ತಿತರ ಮೇಳಗಳಲ್ಲಿ ಸುಮಾರು 23 ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ. ಕೋಟಿ ಚೆನ್ನಯ ಪ್ರಸಂಗದ ಕೋಟಿ, ಪೆರುಮಾಳ ಬಲ್ಲಾಳ, ದೇವೇಂದ್ರ, ದಾರಿಕಾಸುರ. ವಿಷ್ಣು, ಮಧು ಮತ್ತಿತರ ಪಾತ್ರಗಳಿಂದ ಜನಪ್ರಿಯರು. ಕಳೆದ ಐದು ವರ್ಷಗಳಿಂದ ಬಪ್ಪನಾಡು ಮೇಳದಲ್ಲಿ ವೃತ್ತಿಪರ ಕಲಾವಿದರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ