ವಧು ಸಿಗದೆ ಕಂಗಾಲಾಗಿ ಫೇಸ್ಬುಕ್ ಮೊರೆ ಹೋದವನಿಗೆ ಸಿಕ್ಕಿತು ಭರ್ಜರಿ ಪ್ರತಿಕ್ರಿಯೆ!

Update: 2017-08-02 10:01 GMT

ತಿರುವನಂತಪುರಂ, ಆ.2: ವಿವಾಹವಾಗಲು ವೈವಾಹಿಕ ವೆಬ್ ತಾಣಗಳು ಹಾಗೂ ಸಂಬಂಧಿಕರ ಸಹಾಯ ಪಡೆದರೂ ಯಾವುದೇ ಸಫಲತೆ ದೊರೆಯದ ಕೇರಳದ ಯುವಕನೊಬ್ಬ ಇದೀಗ ಬಾಳ ಸಂಗಾತಿಯನ್ನು ಪಡೆಯಲು ‘‘ಫೇಸ್ಬುಕ್ ಮ್ಯಾಟ್ರಿಮೊನಿ’’ ಮೊರೆ ಹೋಗಿದ್ದಾನೆ. ಆತನಿಗೆ ಭರ್ಜರಿ ಪ್ರತಿಕ್ರಿಯೆಯೂ ಸಿಕ್ಕಿದೆ.

ಮಲಪ್ಪುರಂ ಜಿಲ್ಲೆಯ ಮಂಜೇರಿ ಎಂಬಲ್ಲಿನ ನಿವಾಸಿ, ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ 34 ವರ್ಷದ ರಂಜೀಶ್ ಅವರು ಫೇಸ್ ಬುಕ್ ಪೋಸ್ಟ್ ಒಂದರ ಮುಖಾಂತರ ತಮಗೆ ಅನುರೂಪಳಾದ ವಧು ಬೇಕೆಂಬ ಕೋರಿಕೆ ಮುಂದಿಟ್ಟಿದ್ದಾರೆ.

‘ನನಗಿನ್ನೂ ಮದುವೆಯಾಗಿಲ್ಲ. ಸೂಕ್ತ ಸಂಗಾತಿಗಾಗಿ ಹುಡುಕುತ್ತಿದ್ದೇನೆ. ನಿಮಗೆ ಯಾರಾದರೂ ಗೊತ್ತಿದ್ದರೆ ನನಗೆ ತಿಳಿಸಿ, ನನಗೆ 34 ವರ್ಷ. ಹುಡುಗಿಯನ್ನು ನೋಡಿ ನನಗೆ ಒಪ್ಪಿಗೆಯಾಗಬೇಕು. ನನಗೆ ಬೇರೆ ಬೇಡಿಕೆಗಳಿಲ್ಲ, ವೃತ್ತಿ: ಛಾಯಾಗ್ರಾಹಕ, ಜಾತಿ ಹಿಂದು, ಹುಡುಗಿಯ ಜಾತಿ ಯಾವುದಾದರೂ ಅಭ್ಯಂತರವಿಲ್ಲ.’ ಎಂದು ಅವರ ಫೇಸ್ಬುಕ್ ಪೋಸ್ಟ್ ಹೇಳುತ್ತದೆ, ಅದರ ಜತೆ ತಮ್ಮ ಹೆತ್ತವರು ಹಾಗೂ ಮನೆ ಕೂಡ ಕಾಣಿಸುವಂತೆ ಅವರು ಸೆಲ್ಫೀ ಒಂದನ್ನೂ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ವೈರಲ್ ಆಗಿದ್ದು 3,800ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ‘‘ಕೆಲವರು ತಮಾಷೆಗೆಂದು ಕರೆ ಮಾಡಿದರೆ ಇನ್ನು ಹಲವರು ಭಾರತದ ಹೊರತಾಗಿ ಆಸ್ಟ್ರೇಲಿಯಾ, ಬಹ್ರೈನ್, ಸೌದಿ ಅರೇಬಿಯಾ ಹಾಗೂ ಅಮೆರಿಕಾದಿಂದಲೂ ಕರೆ ಮಾಡಿ ವಿಚಾರಿಸಿದ್ದಾರೆ. ನನ್ನನ್ನು ಸಂಪರ್ಕಿಸಿದವರಿಗೆ ನನ್ನ ವಾಟ್ಸ್ ಆ್ಯಪ್ ನಂಬರ್ ನೀಡಿ ಹುಡುಗಿಯರ ಫೋಟೋ ಮತ್ತಿತರ ಮಾಹಿತಿ ನೀಡುವಂತೆ ಕೇಳಿದ್ದೇನೆ’’ ಎನ್ನುತ್ತಾರೆ ರಂಜಿಶ್.

ಕಳೆದ ಏಳು ವರ್ಷಗಳಿಂದ ರಂಜಿಶ್ ವಧುವಿನ ಹುಡುಕಾಟದಲ್ಲಿದ್ದಾರೆಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News