ಈ ಎರಡು ದೇಶಗಳಿಗಿಂತ ದೊಡ್ಡ ಗಾತ್ರದ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಸಿಕ್ಕಿದ್ದು ಎಲ್ಲಿ ಗೊತ್ತೇ ?

Update: 2017-08-02 12:58 GMT

ಲಂಡನ್, ಆ.2: 1980ರ ದಶಕದಲ್ಲಿ ಸಂಶೋಧಕರು ಅತಿ ದೊಡ್ಡ ತ್ಯಾಜ್ಯದ ರಾಶಿಯನ್ನು ಉತ್ತರ ಪೆಸಿಫಿಕ್ ನಲ್ಲಿ ಹವಾಯಿ ಹಾಗೂ ಕ್ಯಾಲಿಫೋರ್ನಿಯಾ ನಡುವೆ ಪತ್ತೆ ಹಚ್ಚಿದ್ದರು. ಇದನ್ನು ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ಎಂದು ಹೆಸರಿಸಲಾಗಿತ್ತು. ಆದರೆ ಈಗ ಸಂಶೋಧಕರು ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಹೊಸ ತ್ಯಾಜ್ಯದ ರಾಶಿ ಪತ್ತೆ ಹಚ್ಚಿದ್ದು ಇದರ ಗಾತ್ರ ಟೆಕ್ಸಾಸ್ ನಗರಕ್ಕಿಂತ ಒಂದೂವರೆ ಪಟ್ಟು ಹೆಚ್ಚಿದೆ.

ಆರು ತಿಂಗಳ ನೌಕಾ ಪಯಣದಲ್ಲಿದ್ದ ಸಂಶೋಧಕರ ಮತ್ತು ಸ್ವಯಂಸೇವಕರ ತಂಡವು ಈ ಹೊಸ ತ್ಯಾಜ್ಯ ರಾಶಿಯನ್ನು ಪತ್ತೆ ಹಚ್ಚಿದ್ದು ಇವು ಸಣ್ಣ ಪ್ಲಾಸ್ಟಿಕ್ ಚೂರುಗಳಾಗಿದ್ದವು ಹಾಗು ಸಾಗರದಿಂದ ಅದನ್ನು ಹೊರತೆಗೆಯುವುದು ಕಷ್ಟವಾಗಿದೆ.

ಕ್ಯಾಪ್ಟನ್ ಚಾರ್ಲ್ಸ್ ಮೂರ್ ಅವರ ನೇತೃತ್ವದ ಈ ನೌಕಾಯಾತ್ರೆಯು ಚಿಲಿ ಹಾಗೂ ಈಸ್ಟರ್ ದ್ವೀಪದ ದುರ್ಗಮ ಪ್ರದೇಶಗಳಿಗೆ ಓಆರ್‌ವಿ ಅಲ್ಗುಇಟಾದಲ್ಲಿ ಪಯಣಿಸಿತ್ತು.

ಈಗ ಹೊಸದಾಗಿ ಕಂಡು ಹಿಡಿಯಲಾದ ಪ್ಲಾಸ್ಟಿಕ್ ತ್ಯಾಜ್ಯ ರಾಶಿಯು ಒಂದು ಮಿಲಿಯನ್ ಚದರ ಕಿಲೋಮೀಟರ್ ನಷ್ಟು ದೊಡ್ಡದಾಗಿರಬಹುದೆಂದು ಸಂಶೋಧಕರು ಅಂದಾಜಿಸಿದ್ದಾರೆ. ಇಂತಹ ಒಂದು ತ್ಯಾಜ್ಯವನ್ನು ಈ ಹಿಂದೆ ಡಾ ಮಾರ್ಕಸ್ ಎರಿಕ್ಸನ್ ಅವರ ನೇತೃತ್ವದ ಸಂಶೋಧಕರ ತಂಡ 2011ರಲ್ಲಿ ಪತ್ತೆ ಹಚ್ಚಿತ್ತು.

ಇತ್ತೀಚೆಗೆ ಪತ್ತೆಯಾದ ತ್ಯಾಜ್ಯವನ್ನು ಪ್ರಯೋಗಾಲಯದಲ್ಲಿ ಇನ್ನಷ್ಟೇ ಪರಿಶೀಲಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News