ಬ್ಯಾಂಕ್ ಗಳೇ ನಿಮ್ಮನ್ನು ದೋಚುತ್ತಿವೆ!

Update: 2017-08-03 10:01 GMT

ಹೊಸದಿಲ್ಲಿ, ಆ.3: ವಹಿವಾಟು, ಉಳಿತಾಯ, ಸಾಲಗಳು ಹೀಗೆ ವಿವಿಧ ವ್ಯವಹಾರಗಳಿಗೆ ದೇಶದ ಜನರು ಬ್ಯಾಂಕ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ದುಡಿದ ಹಣದ ಉಳಿತಾಯಕ್ಕಾಗಿ, ಆರ್ಥಿಕ ಸಂಕಷ್ಟದ ಸಮಯದಲ್ಲಿ ನೆರವಾಗಲಿದೆ ಎನ್ನುವ ಉದ್ದೇಶದಿಂದ ಜನಸಾಮಾನ್ಯರು ಬ್ಯಾಂಕ್ ಗಳ ಗ್ರಾಹಕರಾಗಿದ್ದರೆ, ಬ್ಯಾಂಕ್ ಗಳು ಮಾತ್ರ ವಿವಿಧ ಚಾರ್ಜ್, ಪೆನಾಲ್ಟಿ ಇತ್ಯಾದಿ ಹೆಸರಿನಲ್ಲಿ ಗ್ರಾಹಕರನ್ನು ದೋಚುತ್ತಿವೆ.

ಬ್ಯಾಂಕ್ ಗಳು ವಿಧಿಸುವ ದಂಡಗಳು, ಕೆಲವು ನಿಬಂಧನೆಗಳು ನಮಗೆ ತೀರಾ ಸಾಮಾನ್ಯವಾಗಿ ಕಂಡರೂ ಅವುಗಳು ಬಹುದೊಡ್ಡ ಮಟ್ಟದ ಹಣ ಲೂಟಿಯೇ ಆಗಿದೆ. ಹೀಗೆ ಗ್ರಾಹಕರ ಹಣ ಹೊಡೆಯಲು ಬ್ಯಾಂಕ್ ಗಳು ಅನುಸರಿಸುವ ವಿಧಾನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಥರ್ಡ್ ಪಾರ್ಟಿ ಟ್ರಾನ್ಸಾಕ್ಷನ್: ದಿನಂಪ್ರತಿ 25  ಸಾವಿರ ರೂ,ಗಳಿಗೆ ಮೇಲ್ಪಟ್ಟ ಥರ್ಡ್ ಪಾರ್ಟಿ ಟ್ರಾನ್ಯಾಕ್ಷನ್ ಗಾಗಿ ಬ್ಯಾಂಕ್ ಗಳು 150 ರೂ.ಗೂ ಹೆಚ್ಚು ತೆರಿಗೆ ವಿಧಿಸುತ್ತದೆ. ಆದರೆ ಈ ಬಗ್ಗೆ ಹೆಚ್ಚಿನವರಿಗೆ ಅರಿವೇ ಇಲ್ಲ.

ನಗದು ವಿತ್ ಡ್ರಾ: ಇತರ ಬ್ಯಾಂಕ್ ಗಳ ಎಟಿಎಂಗಳಿಂದ ತಿಂಗಳಲ್ಲಿ 3 ಅಥವಾ 5 ಬಾರಿ ವಿತ್ ಡ್ರಾ ಮಾಡಿದ ನಂತರ ಎಲ್ಲಾ ಟ್ರಾನ್ಸಾಕ್ಷನ್ ಗಳಿಗೆ 20 ರೂ. ಚಾರ್ಜ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಟಿಎಂಗಳ ಮೊರೆ ಹೋಗುವ ಗ್ರಾಹಕರು ತಮ್ಮ ಅವಶ್ಯಕತೆಗನುಗುಣವಾಗಿ 5ಕ್ಕೂ ಹೆಚ್ಚು ಬಾರಿ ವಿತ್ ಡ್ರಾ ಮಾಡಬೇಕಾಗಿ ಬರುವುದರಿಂದ ಹಾಗೂ ಇದು ದೇಶದ ಎಲ್ಲಾ ಗ್ರಾಹಕರ ಮೇಲೂ ಅನ್ವಯವಾಗುವುದರಿಂದ 20 ರೂ. ಹೆಸರಲ್ಲಿ ದೊಡ್ಡ ಪ್ರಮಾಣದ ಲೂಟಿಯೇ ನಡೆಯುತ್ತಿದೆ ಎನ್ನಬಹುದು.

ಬ್ಯಾಲೆನ್ಸ್ ಪರಿಶೀಲನೆ: ಫೋಟೊ, ಸಹಿ ಹಾಗೂ ಬ್ಯಾಲೆನ್ಸ್ ಪರಿಶೀಲನೆಗೂ ಗ್ರಾಹಕರು 150 ರೂ.ಗೂ ಹೆಚ್ಚು ತೆರಿಗೆ ಪಾವತಿಸಬೇಕು. ತಮ್ಮ ಗ್ರಾಹಕರ ಸೇವೆಗೆ ತೆರಿಗೆ ವಿಧಿಸುವ ಕ್ರಮ ಲೂಟಿಯಲ್ಲದೆ ಮತ್ತೇನು..?

ಟ್ರಾನ್ಸಾಕ್ಷನ್: ತಿಂಗಳೊಂದಕ್ಕೆ 3 ಅಥವಾ 4 ಬಾರಿ ಟ್ರಾನ್ಸಾಕ್ಷನ್ ಉಚಿತವಾಗಿದ್ದು, ನಂತರ 50ರಿಂದ 150 ರೂ.ವರೆಗೆ ಪ್ರತಿ ಟ್ರಾನ್ಸಾಕ್ಷನ್ ಗೂ ತೆರಿಗೆ ಪಾವತಿಸಬೇಕು…!

ಚೆಕ್ ಬುಕ್ ನಲ್ಲೂ ದರೋಡೆ: ಉಳಿತಾಯ ಖಾತೆಗೆ ಆರು ತಿಂಗಳಿಗೆ ಕೇವಲ 25 ಚೆಕ್ ಹಾಳೆಗಳನ್ನು ನೀಡಲಾಗುತ್ತದೆ. ನಂತರ  ಪ್ರತಿ ಚೆಕ್ ಪುಸ್ತಕಕ್ಕೂ 75  ರೂ. ಪಾವತಿಸಬೇಕು.

ಎಸ್ಸೆಮ್ಮೆಸ್ ಅಲರ್ಟ್: ತ್ರೈಮಾಸಿಕ ಅವಧಿಗೆ 25 ಸಾವಿರ ರೂ. ಬ್ಯಾಲೆನ್ಸ್ ಇರುವ ಡೆಬಿಟ್ ಕಾರ್ಡ್ ಖಾತೆಗಳ ಗ್ರಾಹಕರಿಗೆ ಬರುವ ಎಸ್ಸೆಮ್ಮೆಸ್ ಗಳಿಗೆ ತ್ರೈಮಾಸಿಕ ಅವಧಿಗೆ 15  ರೂ. ಚಾರ್ಜ್.

ಕನಿಷ್ಟ ಬ್ಯಾಲೆನ್ಸ್: ಎಲ್ಲಾ ಖಾತೆಗಳಲ್ಲು ತಿಂಗಳಿಗೆ ಕನಿಷ್ಟ ಸರಾಸರಿ ಬ್ಯಾಲೆನ್ಸ್ ಇರಬೇಕು ಎಂಬ ನಿಯಮ.

ದಂಡ: ಉಳಿತಾಯ ಖಾತೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ ಇರದಿದ್ದರೆ ಗ್ರಾಹಕರಿಗೆ ದಂಡ ಹಾಗೂ ತೆರಿಗೆ ವಿಧಿಸಲಾಗುತ್ತದೆ. ಬ್ಯಾಂಕ್ ಗಳಿಗೆ ಅನುಗುಣವಾಗಿ ಈ ದಂಡದ ಪ್ರಮಾಣದಲ್ಲಿ ವ್ಯತ್ಯಾಸಗಳಿರುತ್ತವೆ.

ಮಾಸಿಕ ಬ್ಯಾಲೆನ್ಸ್: ಬ್ಯಾಂಕ್ ಇರುವ ಪ್ರದೇಶಕ್ಕನುಗುಣವಾಗಿ ಬದಲಾಗುವ ಮಾಸಿಕ ಬ್ಯಾಲೆನ್ಸ್ ಹಾಗೂ ಚಾರ್ಜ್ ಗಳು.

ಎಟಿಎಂನಿಂದ ನಗದು ವಿತ್ ಡ್ರಾ: ಮೆಟ್ರೋ ನಗರಗಳಲ್ಲಿ ಎಸ್ ಬಿಐ ಎಟಿಎಂಗಳಿಂದ ತಿಂಗಳಿಗೆ ಕೇವಲ 3 ಬಾರಿ ಉಚಿತ ವಿತ್ ಡ್ರಾ ಅವಕಾಶ. ನಂತರ ಪ್ರತಿ ವಿತ್ ಡ್ರಾ ಮೇಲೆ 10 ರೂ. ವಸೂಲಿ.

ಅನಿಯಮಿತ ವಿತ್ ಡ್ರಾ ಮೇಲಿನ ಷರತ್ತು: ಎಸ್ ಬಿಐ ಎಟಿಎಂನಿಂದ ಎಸ್ ಬಿಐ ಗ್ರಾಹಕರು ಅನಿಯಮಿತವಾಗಿ ವಿತ್ ಡ್ರಾ ಮಾಡಲು ಅವಕಾಶವಿದೆ. ಆದರೆ 1 ಲಕ್ಷ ರೂ. ಕನಿಷ್ಟ ಬ್ಯಾಲೆನ್ಸ್ ಇರಬೇಕೆಂಬ ನಿಯಮವೂ ಇದೆ.

ಲಾಕರ್ ಚಾರ್ಜ್ ಗಳು: ಸಣ್ಣ ಲಾಕರ್ ಗಳಿಗೆ 1500 ರೂ. ಹಾಗೂ ತೆರಿಗೆಯನ್ನು ವಿಧಿಸುವ ಬ್ಯಾಂಕ್ ಗಳು ಬೃಹತ್ ಲಾಕರ್ ಗಳಿಗೆ 9000 ರೂ. ಮತ್ತು ತೆರಿಗೆ ವಿಧಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News