ಪೂಜಾರ , ರಹಾನೆ ಶತಕ ; ಭಾರತ 344/3

Update: 2017-08-03 12:26 GMT

  ಕೊಲಂಬೊ, ಆ.3: ಶ್ರೀಲಂಕಾ ವಿರುದ್ಧದ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಶತಕಗಳ ನೆರವಿನಲ್ಲಿ ಮೊದಲ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 344 ರನ್ ಗಳಿಸಿದೆ.

   128(225ಎ,10ಬೌ, 1ಸಿ) ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು 103 ರನ್(168ಎ, 12ಬೌ) ಗಳಿಸಿರುವ ರಹಾನೆ  ಔಟಾಗದೆ ಕ್ರೀಸ್‌ನಲ್ಲಿದ್ದಾರೆ.

50ನೆ ಟೆಸ್ಟ್ ಆಡುತ್ತಿರುವ ಪೂಜಾರ 164 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 13ನೆ ಶತಕ ದಾಖಲಿಸಿದರು. ಇದರೊಂದಿಗೆ ಅವರು ಟೆಸ್ಟ್‌ನಲ್ಲಿ ವೇಗವಾಗಿ 4 ,000 ರನ್ ಪೂರ್ಣಗೊಳಿಸಿದ್ದಾರೆ.

ರಹಾನೆ 39ನೆ ಟೆಸ್ಟ್‌ನಲ್ಲಿ 151 ಎಸೆತಗಳಲ್ಲಿ 12 ಬೌಂಡರಿ ಸಹಾಯದಿಂದ 9ನೆ ಶತಕ ಪೂರ್ಣಗೊಳಿಸಿದರು.

 ರಹಾನೆ ಮತ್ತು ಪೂಜಾರ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 211 ರನ್ ದಾಖಲಿಸಿ ಬ್ಯಾಟಿಂಗ್‌ನ್ನು ಎರಡನೆ ದಿನಕ್ಕೆ ಕಾಯ್ದಿರಿಸಿದ್ದಾರೆ.

ಆರಂಭಿಕ ದಾಂಡಿಗರಾದ ಲೋಕೇಶ್ ರಾಹುಲ್ 57 ರನ್ ಮತ್ತು ಶಿಖರ್ ಧವನ್ 35 ರನ್, ನಾಯಕ ವಿರಾಟ್ ಕೊಹ್ಲಿ 13 ರನ್ ಗಳಿಸಿ ಔಟಾದರು.

ಶ್ರೀಲಂಕಾದ ರಂಗನ್ ಹೆರಾತ್ ಮತ್ತು ದಿಲ್ರುವಾನ್ ಪೆರೆರಾ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News