×
Ad

ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ತಾ.ಪಂ. ಅಧ್ಯಕ್ಷ ನಟೇಶ್ ಕರೆ

Update: 2017-08-03 19:55 IST

ಗುಂಡ್ಲುಪೇಟೆ, ಆ.3: ಸ್ವಚ್ಚತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ತಾ.ಪಂ.ಅಧ್ಯಕ್ಷ ಹೆಚ್.ಎನ್.ನಟೇಶ್ ತಿಳಿಸಿದರು.
 
ಸ್ವಚ್ಚಭಾರತ್ ಅಭಿಯಾನದಡಿ ತಾಲೂಕಿನ ಕಾಡಂಚಿನ ಗ್ರಾಮಗಳಾದ ಸಿದ್ದಯ್ಯನಪುರ ಗ್ರಾಮದಲ್ಲಿ ನಡೆದ ಬಯಲು ಶೌಚಮುಕ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿಯೇ ಸಿದ್ದಯ್ಯನಪುರ ಹಾಗೂ ಮೇಲುಕಾಮನಹಳ್ಳಿ ಗ್ರಾಮಗಳು ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮಗಳಾಗಿ ಘೋಷಣೆಯಾಗಿದ್ದು, ಸಂತೋಷದ ವಿಷಯ. ಇದೇ ರೀತಿ ತಾಲೂಕಿನ ಎಲ್ಲಾ ಗ್ರಾಮಗಳೂ ಕೂಡ ಮನೆಮನೆಯಲ್ಲೂ ಸರ್ಕಾರದ ಸಹಾಯದನ ಪಡೆದು ಶೌಚಾಲಯ ನಿರ್ಮೀಸಿಕೊಳ್ಳುವಂತೆ ಸಲಹೆ ನಿಡಿಡದರು. ಇತ್ತೀಚಿನ ದಿನಗಳಲಿ ಆರೋಗ್ಯದ ಮೇಲೆ ಪೂರ್ಣ ಪ್ರಮಾಣದ ನಿಗಾವಹಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಪ್ರತೀ ಮನೆಯಲ್ಲೂ ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬರೀ ಗ್ರಾ.ಪಂ.ಪಿ.ಡಿ.ಓ.ಮತ್ತು ನೋಡಲ್ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ ಸಾರ್ವಜನಿಕರು ಜನಪ್ರತಿನಿಧಿಗಳ ಇಚ್ಚಾಶಕ್ತಿಯಿಂದ ಮಾತ್ರ ಸಾಧ್ಯವಾಗಲಿದೆ ಎಂದರು.

ಜಿ.ಪಂ.ಸದಸ್ಯ ಬಿ.ಕೆ.ಬೊಮ್ಮಯ್ಯ ಮಾತನಾಡಿ, ಹಂಗಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿ ಸೇರಿದಂತೆ ಸುತ್ತಾಮುತ್ತಾ ಗ್ರಾಮದಲ್ಲೂ ಕೂಡ ಶೀಘ್ರವಾಗಿ ಶೌಚಾಲಯ ನಿರ್ಮಿಸಿಕೊಂಡರೆ ಜಿಲ್ಲೆಯಲ್ಲಿಯೇ ಬಯಲು ಮುಕ್ತ ಗ್ರಾಮಗಳ ಪ್ರಶಸ್ತಿ ಪಡೆಯಬಹುದು ಇಡೀ ಜಿಲ್ಲೆಯು ಅಕ್ಟೋಬರ್ 2 ರ ಒಳಗಾಗಿ ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮಗಳಾಗಿ ಘೋಷಣೆಯಗಲು ನಾವೆಲ್ಲ ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಶಾಮಿಲ್, ಗ್ರಾ.ಪಂ.ಪಿ.ಡಿ.ಓ.ಕುಮಾರಸ್ವಾಮಿ, ಗ್ರಾ.ಪಂ.ಅಧ್ಯಕ್ಷ ಮಂಗಳಮ್ಮ, ಉಪಾಧ್ಯಕ್ಷ ಸಾಕಮ್ಮ, ಕರಿಬಸವನಾಯಕ್ ಬಸವರಾಜು ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News