×
Ad

ಹತ್ತು ದಿನದಲ್ಲಿ ಪರಿಗಣಿಸಲು ಕೇಂದ್ರಕ್ಕೆ ನಿರ್ದೇಶಿಸಿದ ಹೈಕೋರ್ಟ್

Update: 2017-08-03 21:24 IST

ಬೆಂಗಳೂರು, ಆ.3: ಬೆಂಗಳೂರು ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 4 ಹಾಗೂ ರಾಷ್ಟ್ರೀಯ ಹೆದ್ದಾರಿ 7ರ 74 ಕಿಮೀ ರಸ್ತೆಯನ್ನು ಡಿ.ನೋಟಿಫೈ ಮಾಡಿ ನಗರದ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿನ ಬಾರ್‌ಗಳ ಪರವಾನಿಗೆ ನವೀಕರಿಸಲು ರಾಜ್ಯ ಸರಕಾರ ಸಲ್ಲಿಸಿರುವ ಮನವಿಯನ್ನು 10 ದಿನಗಳಲ್ಲಿ ಪರಿಗಣಿಸುವಂತೆ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.

ಎನ್‌ಎಚ್ 4 ಹಾಗೂ ಎನ್‌ಎಚ್ 7 ಅನ್ನು ಡಿನೋಟಿಫೈ ಮಾಡದ ಹಿನ್ನಲೆಯಲ್ಲಿ ತಮ್ಮ ಮದ್ಯ ಮಾರಾಟ ಪರವಾನಿಗೆಯನ್ನು ನವೀಕರಿಸದ ಅಬಕಾರಿ ಇಲಾಖೆಯ ಕ್ರಮ ಪ್ರಶ್ನಿಸಿ ನಗರದ ರೆಸಿಡೆನ್ಸಿ ರಸ್ತೆೆ, ಎಂಜಿ ರಸ್ತೆೆ ಹಾಗೂ ಬ್ರಿಗೇಡ್ ರಸ್ತೆೆಗಳಲ್ಲಿನ ಬಾರ್ ಹಾಗೂ ರೆಸ್ಟೋರೆಂಟ್‌ಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ಗುರುವಾರ ಈ ನಿರ್ದೇಶನ ನೀಡಿದೆ.

 ರಾಜ್ಯ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಪ್ರಮಾಣ ಪತ್ರ ಸಲ್ಲಿಸಿ, ಎಂಜಿ ರಸ್ತೆೆ , ಬ್ರಿಗೇಡ್ ರಸ್ತೆೆ ರಾಷ್ಟ್ರೀಯ ಹೆದ್ದಾರಿಯನ್ನು ಬೈಪಾಸ್‌ಗಳೆಂದು ಘೋಷಣೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಪತ್ರ ಬರೆದು ಈ ರಸ್ತೆೆಗಳನ್ನು ಇನ್ನು ಮುಂದೆ ರಾಜ್ಯ ಸರಕಾರವೇ ಅಭಿವೃದ್ಧಿಪಡಿಸುವ ಬಗ್ಗೆ ಭರವಸೆ ನೀಡುವಂತೆ ಸೂಚಿಸಿತ್ತು. ಹೀಗಾಗಿ ಭರವಸೆ ನೀಡಿ ಕಳೆದ 31 ರಂದು ಪತ್ರ ಬರೆಯಲಾಗಿದೆ. ಆದರೆ ಕೇಂದ್ರ ಸರಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಜ್ಜನ್ ಪೂವಯ್ಯ ವಾದ ಮಂಡಿಸಿ, ನಗರದ ಮಧ್ಯ ಭಾಗದಲ್ಲಿರುವ ರಸ್ತೆೆಗಳನ್ನು ರಾಜ್ಯ ಸರಕಾರವೇ ಅಭಿವೃದ್ಧಿ ಮಾಡುತ್ತಿದ್ದು, ಡಿನೋಟಿಫೈ ಮಾಡುವ ಅವಶ್ಯಕತೆ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಬಾರ್‌ಗಳ ಪರವಾನಿಗೆ ನವೀಕರಣ ಮಾಡದ ಹಿನ್ನಲೆಯಲ್ಲಿ ಬಾರ್‌ಗಳಲ್ಲಿ ಕೆಲಸ ಮಾಡುವ ನೂರಾರು ಉದ್ಯೋಗಿಗಳಿಗೆ ಬಹಳಷ್ಟು ಸಮಸ್ಯೆೆಯಾಗಿದೆ. ಹೀಗಾಗಿ ಶೀಘ್ರವಾಗಿ ಡಿನೋಟಿಫೈ ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಎಎಜಿ ಪೊನ್ನಣ್ಣ ಅವರು, ಸುಪ್ರೀಂಕೋರ್ಟ್ ಆದೇಶದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್‌ಗಳು ಬಂದ್ ಆಗುತ್ತಿವೆ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಾಯಮೂರ್ತಿಗಳು ಬೇರೆ ಬೇರೆ ಜಿಲ್ಲೆೆಗಳಲ್ಲಿ ಹಾದುಹೋಗುವ ರಸ್ತೆೆಗಳನ್ನು ಸ್ಥಳೀಯ ಸಂಸ್ಥೆೆಗಳ ಮೂಲಕ ಡಿನೋಟಿಫೈ ಮಾಡಲಾಗಿದೆ. ಹಾಗೂ ಒಂದು ವೇಳೆ ನ್ಯಾಯಪೀಠ ಪರವಾನಿಗೆ ನವೀಕರಿಸಲು ಅಬಕಾರಿ ಇಲಾಖೆಗೆ ಸೂಚಿಸಿದರೆ ರಾಜ್ಯ ಕೇಂದ್ರ ಸರಕಾರಗಳ ನಿಲುವು ಏನು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೂನ್ನಣ್ಣ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ತೆಗೆದುಕೊಂಡಿದ್ದೇವೆ. ಆದರೆ, ಕೇಂದ್ರ ಸರಕಾರದ ನಿಲುವಿನ ಬಗ್ಗೆ ಗೊತ್ತಿಲ್ಲ ಎಂದರು. ಇದೇ ವೇಳೆ ಕೇಂದ್ರ ಸರಕಾರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ ಅವರು, ಈಗಾಗಲೇ ರಾಜ್ಯ ಸರಕಾರ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹೀಗಾಗಿ ಕಾಲಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ವಾದ ಪ್ರತಿ ವಾದ ಆಲಿಸಿದ ನ್ಯಾಯಪೀಠ, ಬಾರ್‌ಗಳಿಗೆ ಪರವಾನಿಗೆ ನೀಡದಿರುವುದರಿಂದ ಅಲ್ಲಿ ಕೆಲಸ ಮಾಡುವರಿಗೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ 10 ದಿನಗಳಲ್ಲಿ ರಾಜ್ಯ ಸರಕಾರ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿ ಅರ್ಜಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News