ಎಂಬಿಎ ವಿದ್ಯಾರ್ಥಿಗಳ ಪ್ರವೇಶ ಶುಲ್ಕ 20ಸಾವಿರ ರೂ.ನಿಗದಿ
Update: 2017-08-03 21:39 IST
ಬೆಂಗಳೂರು, ಆ.3: ಎಂಬಿಎ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವಿದ್ಯಾರ್ಥಿಗಳಿಗೆ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ನಿಗದಿ ಪಡಿಸಲಾಗಿದ್ದ ವಾರ್ಷಿಕ 20ಸಾವಿರ ರೂ. ಶುಲ್ಕದಷ್ಟೇ 2017-18ನೆ ಸಾಲಿನ ಶೈಕ್ಷಣಿಕ ಸಾಲಿನಲ್ಲೂ ಮುಂದುವರೆಸುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಎಂಬಿಎ ಕೋರ್ಸ್‌ನ್ನು ಹೊರತು ಪಡಿಸಿದಂತೆ ಉಳಿದ ಕೋರ್ಸ್‌ಗಳಿಗೆ ಅರ್ಜಿ ಶುಲ್ಕ-50ರೂ., ಪ್ರವೇಶ ಶುಲ್ಕ 100ರೂ., ಪಾಠ ಶುಲ್ಕ 1000ರೂ., ಪ್ರಯೋಗಾಲಯ ಶುಲ್ಕ 300ರೂ., ಸ್ನಾತಕೋತ್ತರ ವಿಭಾಗ ಅಭಿವೃದ್ಧಿ ಶುಲ್ಕ 1000ರೂ. ಸೇರಿದಂತೆ ಕಾಲೇಜಿನ ನೋಂದಣಿ ಶುಲ್ಕವನ್ನು ಆಯಾ ವಿಶ್ವವಿದ್ಯಾಲಯಗಳು ನಿಗದಿ ಪಡಿಸಿದ ಶುಲ್ಕವಷ್ಟನ್ನೇ ವಿದ್ಯಾರ್ಥಿಗಳಿಂದ ಪಡೆಯಬೇಕೆಂದು ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಶಿಕ್ಷಣ ಇಲಾಖೆ ಆದೇಶಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.