×
Ad

10 ಕೆಎಎಸ್ ಅಧಿಕಾರಿಗಳ ವರ್ಗಾವಣೆ

Update: 2017-08-04 19:23 IST

ಬೆಂಗಳೂರು, ಆ. 4: ಆಡಳಿತಾತ್ಮಕ ಹಿತದೃಷ್ಟಿಯಿಂದ ಹತ್ತು ಮಂದಿ ಕೆಎಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ತಕ್ಷಣದಿಂದಲೇ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಎ.ಬಿ.ಬಸವರಾಜು- ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ, ಎಂ.ಸತೀಶ್ ಕುಮಾರ್ -ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಉಪ ಕಾರ್ಯದರ್ಶಿ ಬೆಂಗಳೂರು, ಶಾಂತಾ ಎಲ್.ಹುಲ್ಮನಿ -ಅಪರ ಜಿಲ್ಲಾಧಿಕಾರಿ ಹಾವೇರಿ, ಎಂ.ಕೆ.ಜಗದೀಶ್ - ಬೆಂ. ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ.

ರಂಗನಾಥ್ -ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿ, ಆರ್.ಲೋಕನಾಥ್ -ಬಿಡಿಎ ಉಪ ಕಾರ್ಯದರ್ಶಿ, ಬಸವರಾಜು ಆರ್.ಸೋಮಣ್ಣನವರ್ -ತುಮಕೂರು- ದಾವಣಗೆರೆ ರೈಲ್ವೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ, ಮಂಗಳ ಎಸ್.ಎಂ. - ಬೆಂಗಳೂರು ಕೆಐಎಡಿಬಿ ಸಹಾಯಕ ಆಯುಕ್ತ.

ಟಿ.ವಿ.ಪ್ರಕಾಶ್ -ಹೂವಿನಹಡಗಲಿ ಸಿಂಗಟಲೂರು ಏತನೀರಾವರಿ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಜಿ.ನಜ್ಮಾ-ಹರಪ್ಪನಹಳ್ಳಿ ಉಪವಿಭಾಗಾಧಿಕಾರಿ ಸ್ಥಾನಕ್ಕೆ ತಕ್ಷಣವೇ ನಿಯೋಜನೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News