×
Ad

ಬ್ಯಾಂಕ್ ಸಾಲದ ಮಾಹಿತಿಗಾಗಿ ಕನ್ನಡದ ‘ಮನಿಟ್ಯಾಪ್ ಆ್ಯಪ್’ ಬಿಡುಗಡೆ

Update: 2017-08-04 19:32 IST

ಬೆಂಗಳೂರು, ಆ.4: ಬ್ಯಾಂಕ್‌ನಿಂದ ಸಾಲ ಪಡೆಯಲು ನೆರವಾಗುವ ಮನಿಟ್ಯಾಪ್ ಆ್ಯಪ್ ಈಗ ಕನ್ನಡ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಕಳೆದ ವರ್ಷ ಈ ಆ್ಯಪ್‌ನ್ನು ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಕನ್ನಡಗರಿಗೆ ಸುಲಭವಾಗಿ ಸಾಲ ಸೌಲಭ್ಯ ಸೇವೆ ಲಭ್ಯವಾಗಲು ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಲಭ್ಯವಿರುವ ಸಾಲದ ಯೋಜನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಕನ್ನಡ ಭಾಷೆಯ ಆಯ್ಕೆಯನ್ನು ನೀಡಲಾಗಿದೆ ಎಂದು ಮನಿಟ್ಯಾಪ್ ಸೆಕೊಯ ಇಂಡಿಯಾ ಸಂಸ್ಥೆ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಸಹ ಸಂಸ್ಥಾಪಕ ಅನುಜ್ ಕಕ್ಕೆರ್, ಗ್ರಾಹಕರು ಬ್ಯಾಂಕ್‌ನಿಂದ ಸಾಲ ಪಡೆಯುವಾಗ ಕಿರಿಕಿರಿಯಾಗಬಾರದು ಎಂದು ಹೊಸ ಆಯ್ಕೆಗಳನ್ನು ನೀಡಲಾಗಿದೆ. ಸಣ್ಣ ವ್ಯಾಪಾರಿಗಳು ಹಾಗೂ ವೃತ್ತಿಪರರಿಗೆ ತ್ವರಿತ ಸಾಲದ ಅಗತ್ಯವಿರುತ್ತದೆ. ಇಂತಹ ಸಮಯದಲ್ಲಿ ಅವರು ಕನ್ನಡದಲ್ಲೇ ಸೂಕ್ತ ಮಾಹಿತಿ ಪಡೆಯಬಹುದು. ಇದುವರೆಗೆ ಆ್ಯಪ್ ಬಳಕೆ ಮಾಡಿ ಗ್ರಾಹಕರು ಸುಮಾರು 20ಕೋಟಿ ರೂ.ಬ್ಯಾಂಕ್ ಸಾಲ ಪಡೆದಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News