×
Ad

ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ್ದು ಕಾಂಗ್ರೆಸ್: ಡಾ. ಎಲ್ ಹನುಮಂತಯ್ಯ

Update: 2017-08-04 19:37 IST

ಚಿಕ್ಕಮಗಳೂರು, ಆ.4: ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ್ದ ಕಾಂಗ್ರೆಸ್, ನಮ್ಮ ದೇಶ ಕಟ್ಟುವ ಕೆಲಸವನ್ನು ಅಚ್ಚುಕಟ್ಟಾಗಿ ನಡೆಸುತ್ತಾ ಬಂದಿರುವುದು ಇಡೀ ದೇಶದ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷ ಕಟ್ಟುವುದೆಂದರೆ ದೇಶ ಕಟ್ಟುವ ಕೆಲಸವೂ ಹೌದು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಡಾ. ಎಲ್ ಹನುಮಂತಯ್ಯ ಹೇಳಿದರು.

ಅವರು ನಗರದ ಜಿಲ್ಲಾ ಕಾಂಗ್ರೆಸ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಿದ್ದರು. ಯುವಜನರಿಗೆ ಈ ವಿಷಯ ಮನವರಿಕೆಯಾಗಲು ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಬೇಕು. ಈ ದೇಶದಲ್ಲಿ ಕಾಂಗ್ರೆಸ್ ಸಾಧನೆ ಜತೆಗೆ ರಾಜ್ಯ ಸರ್ಕಾರದ ಜನಪರ ಕೆಲಸಗಳನ್ನು ತಿಳಿಸಬೇಕು. ಆಮೂಲಕ ಈ ರಾಜ್ಯದಲ್ಲಿ ಈ ದೇಶದಲ್ಲಿ ಇನ್ನೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕರೆನೀಡಿದರು.

ಕಾರ್ಕಳದ ಮಾಜಿ ಶಾಸಕ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಸ್ತುವಾರಿಗ ಕೆ.ಗೋಪಾಲ ಭಂಡಾರಿ ಮಾತನಾಡಿ, ಈ ಜಿಲ್ಲೆಗೂ ನನಗೂ 4 ದಶಕದ ಅವಿನಾಭಾವ ಸಂಭಂದ ನನಗೆ ಗೊತ್ತು. ಈ ಜಿಲ್ಲೆಯ ಜನ ಕಾಂಗ್ರೆಸ್ ಪರವಾಗಿದ್ದಾರೆ. ಆದರೆ ಕೆಲ ಕಾಲ ಭಜರಂಗಿಗಳು ಹಾಗೂ ಆರ್‌ಎಸ್‌ಎಸ್ ಹಿಡಿತಕ್ಕೆ ಸಿಕ್ಕಿದ ಕಾರಣ ನಮಗೆ ಹಿನ್ನಡೆಯಾಗಿದೆ. ಅವರಿಂದ ಬಿಡಿಸಿಕೊಳ್ಳುವ ಕೆಲಸ ನಮ್ಮದಾಗಬೇಕು. ಅದಕ್ಕಾಗಿ ನಾವು ಸದಾ ಸಿದ್ದರಿದ್ದೇವೆ. ಪಕ್ಷದ ಜವಾಬ್ದಾರಿ ಪದಾಧಿಕಾರಿಗಳು ಯಾವುದೇ ಕಾರಣ ಹೇಳಿ ಪಕ್ಷ ಕಟ್ಟುವ ಕೆಲಸದಿಂದ ಹಿಂದೆ ಉಳಿಯಬಾರದು, ಅಂಥವರ ವಿರುದ್ದ ಕ್ರಮಕ್ಕಿಂತ ಅವರಿಗೆ ಪಕ್ಷ ನಮಸ್ಕಾರ ಹೇಳುತ್ತದೆ ಎಂದು ನುಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್ ವಿಜಯ್‌ಕುಮಾರ್ ಮಾತನಾಡಿದರು.

ಸಭೆಯಲ್ಲಿ ಜಿಲ್ಲೆಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಎಂ.ಎಲ್ ಮೂರ್ತಿ, ಕಾರ್ಯದರ್ಶಿಗಳಾದ ಕೆ.ಎಂ.ನಾಗರಾಜು, ಶ್ರೀಮತಿ ಸವಿತಾ ರಮೇಶ್ ಹಾಗೂ ಅನಿವಾಸಿ ಭಾರತೀಯರ ಸಂಘದ ಅಧ್ಯಕ್ಷೆ ಶ್ರೀಮತಿ ಆರತಿ ಕೃಷ್ಣ ಅವರನ್ನು ಅಭಿನಂಧಿಸಲಾಯಿತು.

ಈ ಸಮಯದಲ್ಲಿ ಕೆಪಿಸಿಸಿ ಕಾರ್ಯದರ್ಶಿ ತಾರಾನಾಥ್ ಶೆಟ್ಟಿ, ನವೀನ್ ಡಿಸೋಜ, ಅರಣ್ಯ ವಿಹಾರದಾಮಗಳ ಆಧ್ಯಕ್ಷ ಎ.ಎನ್.ಮಹೇಶ್, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಬಿ.ಎಲ್.ರಾಂದಾಸ್, ಉಪಾದ್ಯಕ್ಷ ಕೆ.ಎಸ್.ಶಾಂತೇಗೌಡ, ಮಾಜಿ ಎಂಎಲ್‌ಸಿ ಗಾಯಿತ್ರಿ ಶಾಂತೇಗೌಡ, ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಸಿದ್ದಾರ್ಥ, ಶಾಸಕ ಶ್ರೀನಿವಾಸ್, ಸಿಡಿಎ ಅಧ್ಯಕ್ಷ ಹನೀಫ್, ನಗರಸಭಾ ಸದಸ್ಯ ರೂಬೆನ್ ಮೊಸಸ್, ಕಾಂಗ್ರೆಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಮಹಮದ್, ವಕ್ತಾರ ಶಿವಾನಂದ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News