7 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಆ.4: ರಾಜ್ಯ ಸರಕಾರವು 7 ಐಎಎಸ್ ಹಾಗೂ 4 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರವು ಆದೇಶ ಹೊರಡಿಸಿದೆ.
ಸಂದೀಪ್‌ದವೆ -ಮಹಾನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಎಂ.ಲಕ್ಷ್ಮಿನಾರಾಯಣ -ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಮಾಜಕಲ್ಯಾಣ ಇಲಾಖೆ, ಪಿ.ಮಣಿವಣ್ಣನ್ -ಕಾರ್ಯದರ್ಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮುಖ್ಯ ಯೋಜನಾ ಅಧಿಕಾರಿ, ಕೆ-ಶಿಪ್. ಮುನಿಶ್‌ವೌದ್ಗಿಲ್ -ಆಯುಕ್ತರು, ಸರ್ವೆ, ಭೂ ದಾಖಲೆಗಳ ಇಲಾಖೆ, ಹೇಮಲತಾ -ಕಾರ್ಯದರ್ಶಿ, ಸಹಕಾರ ಇಲಾಖೆ, ವಿ.ಪಿ.ಇಕ್ಕೇರಿ -ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ, ಜೆ.ಮಂಜುಳಾ -ಜಿಲ್ಲಾಧಿಕಾರಿ, ಯಾದಗಿರಿ.
ಕೆಎಎಸ್: ಎಚ್.ಬಸವರಾಜೇಂದ್ರ -ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಕೊಡಗು, ಕೆ.ಎಂ.ಜಾನಕಿ -ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಹಾಸನ, ಶಿವಾನಂದ ಕಪಾಶಿ -ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಉಡುಪಿ, ಆರ್.ಲತಾ-ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ, ಜಿಲ್ಲಾ ಪಂಚಾಯತ್, ರಾಮನಗರ ಇಲ್ಲಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.