ಮುಖ್ಯಮಂತ್ರಿಯಿಂದ ನಗರ ಪ್ರದಕ್ಷಿಣೆ
ಬೆಂಗಳೂರು, ಆ.4: ಮುಖ್ಯಮಂತ್ರಿ ಸಿದ್ದರಾಮಯ್ಯ ಆ.5ರಂದು ಬೆಳಗ್ಗೆ 10 ಗಂಟೆಗೆ ನಗರ ಪ್ರದಕ್ಷಿಣೆ ಕೈಗೊಳ್ಳಲಿದ್ದು, ಪ್ರಗತಿಯಲ್ಲಿರುವ ಹಲವಾರು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ.
ಗೃಹ ಕಚೇರಿ ಕೃಷ್ಣಾದಿಂದ ಆರಂಭಿಸಲಿರುವ ನಗರ ಪ್ರದಕ್ಷಿಣೆ ಎಂ.ಜಿ.ರಸ್ತೆಯಲ್ಲಿರುವ ದಕ್ಷಿಣ ಪರೇಡ್ ಚರ್ಚ್ ವೃತ್ತದಲ್ಲಿ ಪಾದಚಾರಿ ಮಾರ್ಗದ ಮೇಲ್ದರ್ಜೆ ಕಾಮಗಾರಿ, ಚರ್ಚ್‌ಸ್ಟ್ರೀಟ್‌ನಲ್ಲಿ ಟೆಂಡರ್‌ಶ್ಯೂರ್ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಲಿದ್ದಾರೆ. ಆನಂತರ, ಪಾಸ್‌ಪೋರ್ಟ್ ಪ್ರಾದೇಶಿಕ ಕಚೇರಿ ಬಳಿಯಿರುವ ರಾಜೇಂದ್ರನಗರ ಸ್ಲಂನಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನು ಮುಖ್ಯಮಂತ್ರಿ ವಿತರಿಸಲಿದ್ದಾರೆ. ಮೇಸ್ತ್ರಿಪಾಳ್ಯ ಕೆರೆ ಉದ್ಯಾನವನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಿದ್ದಾರೆ.
ದಾಲ್ಮಿಯಾ ಜಂಕ್ಷನ್ ಬಳಿ ಮೇಲ್ಸೆತುವೆ ಹಾಗೂ ಎಸ್‌ಡಬ್ಲುಡಿ ಕಾಮಗಾರಿಯನ್ನು ವೀಕ್ಷಿಸಲಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿಯು ಎಸ್‌ಡಬ್ಲುಡಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ, ಕನಕಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಪರಿಶೀಲನೆ ನಡೆಸಲಿದ್ದಾರೆ.