ಬರದ ಕೆನ್ನಾಲಿಗೆಗೆ ಸಿಲುಕಿರುವ ಅಡಿಕೆ ತೋಟಗಳು

Update: 2017-08-04 18:40 GMT
Editor : ಹರೀಶ್

ನಾಯಕನಹಟ್ಟಿ, ಆ.4: ಈ ಬಾರಿ ಬರದ ಕೆನ್ನಾಲಿಗೆಗೆ ಸಿಲುಕಿರುವ ಅಡಿಕೆ ತೋಟಗಳನ್ನು ಉಳಿಸಿಕೊಳ್ಳುವುದೇ ದುಸ್ಸಾಹಸವಾಗಿದ್ದು, ಇನ್ನು ಈಗ ಮಳೆ ಬರದಿದ್ದರೆ ತಾಲೂಕಿನಲ್ಲಿ ಜಲಾಯುದ್ಧ ಶುರುವಾಗುವ ಭೀತಿ ಎದುರಾಗಿದೆ.

ತಾಲೂಕಿನ ಉಬ್ರಾಣಿ ಭಾಗವನ್ನು ಹೊರತುಪಡಿಸಿದರೆ ಇನ್ನು ಉಳಿದ ಬಹುತೇಕ ಭಾಗಗಳಲ್ಲಿ ಕೆರೆ, ಕಟ್ಟೆ, ಬಾವಿ ಹಾಗೂ ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ಬತ್ತಿಹೋಗಿವೆ. ಅನೇಕ ಹೋಬಳಿಗಳಲ್ಲಿ ತಳುಕು ದೊಡ್ಡ ಉಳ್ಳಾರ್ತಿ ಹೋಬಳಿ ಸೆರಿದಂತೆ ಹಲವು ಭಾಗಗಳಲ್ಲಿ ಈಗಾಗಲೇ ಅಡಿಕೆ ತೋಟಗಳು ಬತ್ತಿ ಹೋಗುತ್ತಿವೆ ಇನ್ನು ಕೆಲವು ಕಡೆಗಳಲ್ಲಿ ಟ್ಯಾಂಕರ್ ನೀರನ್ನು ತರಲಾಗುತ್ತಿದೆ.

ಇನ್ನು ಇಪ್ಪತ್ತು ದಿವಸಗಳಲ್ಲಿ ಮಳೆ ಬಾರದಿದ್ದಲ್ಲಿ ಸಂಪೂರ್ಣವಾಗಿ ಅಡಿಕೆ ತೋಟಗಳು ನೆಲಕಚ್ಚಲಿವೆ ರೈತರು ಟ್ಯಾಂಕರ್‌ಗಳ ಮೂಲಕ ತಮ್ಮ ಅಡಿಕೆ ತೋಟಗಳಿಗೆ ನೀರನ್ನು ತರಲಾಗುತ್ತಿದ್ದು, ಒಂದು ಟ್ಯಾಂಕರ್‌ಗೆ ಕನಿಷ್ಟವೆಂದರು 3ರಿಂದ 4 ಸಾವಿರ ರೂ. ನೀಡಿ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ ಇದರಿಂದ ತೋಟಗಳನ್ನು ಉಳಿಸಿಕೊಳ್ಳಬಹುದು ಹೊರತು ಇದರಿಂದ ತುಂಬಾ ತೊಂದರೆಯಾಗಲಿದೆ.

 ಅಂತರ್‌ಜಲಮಟ್ಟ ಕುಸಿತ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಕಸರತ್ತು ಮಾಡುತ್ತಿರುವ ರೈತರು ಬೋರ್‌ವೆಲ್ ಮೊರೆಹೋಗಿದ್ದು, 900ಕ್ಕೂ ಹೆಚ್ಚು ಅಡಿ ಕೊರೆಸಿದರು ನೀರು ಸಿಗಿತ್ತಿಲ್ಲ ಒಂದು ವೇಳೆ ನೀರು ಸಿಕ್ಕರು ಕೆಲವೇ ದೀನಗಳು ಮಾತ್ರ ನೀರು ಬರುತ್ತಿದೆ. ಕುಡಿಯುವ ನೀರಿಗೆ ಗ್ರಾಮಗಳಲ್ಲಿ ತಾತ್ವಾರ ಶುರುವಾಗಿದ್ದು, ನೀರಿಗಾಗಿ ಪರದಾಡುವಂತಾಗಿದೆ ರಾಜ್ಯದಲ್ಲಿಯೇ ಅತಿಹೆಚ್ಚು ಅಡಿಕೆ ಬೆಳೆಯುವ ಪ್ರದೇಶವೆಂದು ಖ್ಯಾತಿ ಪಡೆದಿದ್ದು, ಸುಮಾರು 20 ಸಾವಿರ 976 ಹೆಕ್ಟರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ಭಾಗದ ರೈತರು ಅಡಿಕೆ ಬೆಳೆಗೆ ಅವಲಂಬಿತರಾಗಿದ್ದು, ಒಂದು ವೇಳೆ ಬರದ ಹೊಡೆತಕ್ಕೆ ಸಿಲುಕಿದ ತೋಟಗಳು ಒಣಗಿ ಹೋದರೆ ರೈತರು ಬೀದಿಪಾಲಾಗುವಂತಹ ಸ್ಥಿತಿಯಿದೆ.

ಸರಕಾರ ತಾಲೂಕಿನ ಮೇಲೆ ಹೆಚ್ಚು ನಿಗಾ ವಹಿಸಬೇಕು ಎಂಬುದು ರೈತರ ಆಶಯವಾಗಿದೆ. ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಇದರಿಂದ ಮಳೆಗಾಲ ಬರುವವರೆಗೆ ತೋಟಗಳನ್ನು ಉಳಿಸಿಕೊಳ್ಳಬಹುದು. ಈಗಿನ ಉಷ್ಣಾಂಶದ ಏರುಪೇರಿನಿಂದ ಇಳುವರಿಯಲ್ಲಿ ಬಾರಿ ಕುಸಿತವಾಗಲಿದ್ದು ತೋಟದ ಮೇಲೆ ಪರಿಣಾಮ ಬೀಳಲಿದೆ. ಇನ್ನು ಉಳಿದ ಎಲ್ಲ ಭಾಗಗಳಲ್ಲಿ ತೋಟಗಳ ಪರಿಸ್ಥಿತಿ ವಿಕೋಪಕ್ಕೆ ಸಿಲುಕಿವೆ ಎನ್ನುತ್ತಾರೆ ಗಜ್ಜುಗನಹಳ್ಳಿಯ ಲೋಕೇಶ್.

 ಸ್ಥಿತಿವಂತರು ಟ್ಯಾಂಕರ್ ಮೂಲಕ ನೀರು ತರುತ್ತಿದ್ದಾರೆ ಆದರೆ ಬಡವರ ಪರಿಸ್ಥಿತಿ ಹೇಳತೀರದು, ಇಳುವರಿ ಕಡಿಮೆಯಾಗಿದೆ, ಬ್ಯಾಂಕ್‌ಗಳಲ್ಲಿ ಸಾಲ ಮಾಡಲಾಗಿದೆ, ಅಡಿಕೆ ರೇಟ್ ಇದೆ ಆದರೆ ರೈತರ ಬಳಿ ಇಲ್ಲ ಎಂದು ತೋಟದ ಮಹಿಳೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

Writer - ಹರೀಶ್

contributor

Editor - ಹರೀಶ್

contributor

Similar News