​ನನಗೆ 13 ವರ್ಷವಾಗಿದ್ದಾಗ ನನ್ನ ಮಗಳು ಹುಟ್ಟಿದ್ದಳು:ಸಯ್ಮಾ

Update: 2017-08-05 07:33 GMT

ನನಗೆ ನನ್ನ ಬಾಲ್ಯದ ಬಗ್ಗೆ ಹೆಚ್ಚು ನೆನಪಿಲ್ಲ. ಮಗುವಾಗಿದ್ದಾಗ ನನಗೇನಾಯಿತು ಎಂದು ನೆನಪಿಸಿಕೊಳ್ಳಲು ನನಗಿಷ್ಟವಿಲ್ಲ. ನನ್ನ ಗಾಯಗಳನ್ನು ತೆರೆದಾಗ ಅದು ನನ್ನ ಹೃದಯಕ್ಕೆ ತೀವ್ರ ನೋವನ್ನುಂಟು ಮಾಡುತ್ತದೆ. ನನ್ನ ಮೇಲೆಯೇ ನನಗೆ ಅನುಕಂಪ ಹುಟ್ಟುತ್ತದೆ. ಒಬ್ಬಂಟಿಯಾಗಿದ್ದ ಆ ಪುಟ್ಟ ಹುಡುಗಿಯ ಮೇಲೆ ನನಗೆ ಕರುಣೆಯುಕ್ಕಿ ಬರುತ್ತದೆ. ಜನರು ನನ್ನ ಬಾಲ್ಯವನ್ನು ಕೊಂದೇ ಬಿಟ್ಟಿದ್ದರು. ಅವರು ನನ್ನನ್ನು ಅದೆಷ್ಟು ಚೂರು ಚೂರು ಮಾಡಿದ್ದರೆಂದರೆ ಆ ಚೂರುಗಳನ್ನು ಒಂದುಗೂಡಿಸಲು ನನಗಿನ್ನೂ ಸಾಧ್ಯವಾಗಿಲ್ಲ.

ನನಗಾಗ 12 ವರ್ಷ ವಯಸ್ಸು. ನಾನು ಬಟ್ಟೆ ಹಾಕುತ್ತಿದ್ದಾಗ ನನ್ನನ್ನು ಎಲ್ಲಗಾದರೂ ಆಟವಾಡಲು ಹೋಗಲು ಕೊಂಡೊಯ್ಯವರೆಂದು ತಿಳಿದಿದ್ದೆ. ನಾನು ಶಾಲೆಯ ಪಿಕ್ನಿಕ್ ಬಗ್ಗೆ ಯೋಚಿಸುತ್ತಿದ್ದಾಗ ನನ್ನ ಕುಟುಂಬ ನನಗೆ ಮದುವೆ ಮಾಡಿ ಬಿಟ್ಟಿತು. ನನಗೆ ವರದಕ್ಷಿಣೆಯೆಂದರೇನೆಂದು ತಿಳಿಯದೇ ಇದ್ದರೂ ಪ್ರತಿ ದಿನ ವರದಕ್ಷಿಣೆಗಾಗಿ ನನಗೆ ಹೊಡೆಯಲಾಗುತ್ತಿತ್ತು. ವರದಕ್ಷಿಣೆ ಎಲ್ಲಿ ಸಿಗುವುದೆಂದು ನಾನು ನನ್ನ ಗಂಡನಲ್ಲಿ ಕೇಳಿದ್ದೆ. ಅದಕ್ಕಾಗ ನನಗೆ  ಚೆನ್ನಾಗಿ ಹೊಡೆಯಲಾಗಿತ್ತು.  ಅವರಿಗೆ ಕೇವಲ ಹಣ ಬೇಕಾಗಿತ್ತು ಅದರೆ ನನ್ನ ಕುಟುಂಬ ಅವರಿಗೆ  ಏನೂ ಕೊಡುವ ಸ್ಥಿತಿಯಲ್ಲಿರಲಿಲ್ಲ.

ನನಗೆ 13 ವರ್ಷವಾಗಿದ್ದಾಗ ನನ್ನ ಮಗಳು ಹುಟ್ಟಿದ್ದಳು. ಅವರೆಲ್ಲಿ ವರದಕ್ಷಿಣೆಗಾಗಿ ಆಕೆಯನ್ನು ನನ್ನಿಂದ ಸೆಳೆಯುವರೋ ಎಂದು ಆಕೆಯನ್ನು ಬೊಂಬೆಯಂತೆ ನಾನು ಹಿಡಿದುಕೊಳ್ಳುತ್ತಿದ್ದೆ. ಅದು ನನ್ನ ಬಾಲ್ಯ ಮತ್ತು ತಾಯ್ತನವಾಗಿತ್ತು. ನನ್ನ ಮೆಚ್ಚಿನ ಶಿಕ್ಷಕಿಯೊಬ್ಬರು ನನ್ನ ಮಗಳಿಗೆ `ಜೊಯಿಟ' ಎಂಬ ಹೆಸರಿಟ್ಟರು. ನನ್ನ ಮಗಳು ನನಗೆ ಜಯ ತರುವಳೆಂದು ಅವರು ನನಗೆ ಹೇಳಿದರು. ಆಕೆಯ ಹೆಸರಿನ ಅರ್ಥ ಅದೇ ಆಗಿತ್ತು.

ಆದರೆ ಅದು ಅಷ್ಟು ಸುಲಭದಲ್ಲಿ ಆಗಲಿಲ್ಲ, ನನ್ನನ್ನು ಮನೆಯಿಂದ ಹೊರದಬ್ಬಲಾಯಿತು. ನನಗೆ ಎಲ್ಲಿ ಹೋಗಲೂ ಸ್ಥಳವಿರಲಿಲ್ಲ. ಒಂದೇ ಒಂದು ರಾತ್ರಿ ಕಳೆಯಲು ಈ 13 ವರ್ಷದ ತಾಯಿ ಮತ್ತಾಕೆಯ ಮಗುವಿಗೆ ಎಲ್ಲೂ ಸ್ಥಳವಿರಲಿಲ್ಲ. ನನಗೇ ಗೊತ್ತಿಲ್ಲದ ಜನರಿಂದ ನನಗೆ ಸಹಾಯ ದೊರಕಿತ್ತು. ಜೀವನ ಎಷ್ಟು ವಿಚಿತ್ರವೆಂಬುದು ಸಣ್ಣ ಪ್ರಾಯದಲ್ಲಿಯೇ ನನಗೆ ತಿಳಿಯಿತು. ನಾನು  ಅತಿಯಾಗಿ ಪ್ರೀತಿಸಿದ ಜನರು ನನಗೆ ಪರಕೀಯರಾಗಿದ್ದರು. ಅಸ್ತಿತ್ವದಲ್ಲಿರಲು ನನ್ನ ಹೋರಾಟವಾಗಿರಲಿಲ್ಲ. ಪ್ರೀತಿಯಿಲ್ಲದ ಜಗತ್ತಿನಲ್ಲಿ ನನ್ನ ಹೃದಯ ತುಂಬಾ ಪ್ರೀತಿಯೊಂದಿಗೆ ನನ್ನ ಮಗಳನ್ನು  ಹಿಡಿದುಕೊಂಡು ನಾನು ಹೋರಾಡುತ್ತಿದ್ದೆ. ಅಪ್ಪಟ ಪ್ರೀತಿಯೆಂದರೇನೆಂದು ನನಗೆ ತಿಳಿದೇ ಇರಲಿಲ್ಲ. ಪ್ರೀತಿಸಿದಾಗ ಹೇಗನಿಸುತ್ತದೆ ಎಂಬುದೂ ನನಗೆ ತಿಳಿದಿರಲಿಲ್ಲ. ನನ್ನ ಮಗಳು ನನ್ನನ್ನು ಬಿಗಿದಪ್ಪಿಕೊಂಡಾಗ ನಾನು ಆಕೆಗಾಗಿ ಜಯಿಸುತ್ತೇನೆ ಎಂದು ಹೇಳಿಕೊಂಡೆ ಹಾಗೂ ನನ್ನ ಪುತ್ರಿಯ ಬಾಲ್ಯವನ್ನು ರಕ್ಷಿಸಲು ಗೆಲ್ಲುತ್ತೇನೆಂದುಕೊಂಡೆ.

ಶೀಘ್ರದಲ್ಲಿಯೇ ನನ್ನ ವಿಶ್ವವಿದ್ಯಾಲಯ ಶಿಕ್ಷಣ ಮುಗಿಸಲಿದ್ದೇನೆ. ನನ್ನ ಮಗಳು ಜೊಯಿಟಾ ಶಾಲೆಯಲ್ಲಿದ್ದಾಳೆ. ಇದು ನನ್ನ ಜಗತ್ತು. ಈ ಕೊಠಡಿಯ ಪ್ರತಿಯೊಂದು ಮೂಲೆಯನ್ನೂ ನಾನು ಮತ್ತು ನನ್ನ ಮಗಳು ಸಿಂಗರಿಸಿದ್ದೇವೆ. ಇದು ನಮ್ಮ ಪಾರ್ಲರ್ ಅದಕ್ಕೆ ಜೊಯಿಟಾ ಬ್ಯೂಟಿ ಪಾರ್ಲರ್ ಎಂದು ಹೆಸರಿಟ್ಟಿದ್ದೇವೆ. ನಾನು ಕೆಲಸ ಮಾಡುತ್ತೇನ, ನಗುತ್ತೇನೆ ಮತ್ತು ಕನಸು ಕಾಣುತ್ತೇನೆ. ನಾನೇಕೆ ನನ್ನ ಜೀವನವನ್ನು ಹೊಸದಾಗಿ ಆರಂಭಿಸುತ್ತಿದ್ದೇನೆಂದು ಜನರು ನನ್ನಲ್ಲಿ ಕೇಳುತ್ತಾರೆ.

ಹೊಸತೆಂದರೆ ಏನು ಎಂದು ನಾನು ಅವರಲ್ಲಿ ಕೇಳುತ್ತೇನೆ. ಹೊಸತೆಂದರೆ ಹೊಸ ಪುರುಷ, ಹೊಸ ಸಂಬಂಧ ಎಂದು ಅವರು ಹೇಳುತ್ತಾರೆ. ನಾನು ತುಂಬಾ ನಗುತ್ತೇನೆ. ನಾನು ಹತ್ತು ವರ್ಷಗಳ ಕಾಲ ನನ್ನ ಪುಟ್ಟ ಮಗುವಿನೊಂದಿಗೆ ಹೋರಾಡಿದ್ದೇನೆ. ನನ್ನ ಜೀವನಕ್ಕೆ ಹೊಸ ಅರ್ಥ ನೀಡಲು ನನಗೆ ಹೊಸ ಪುರುಷ ಬೇಕೇನು ? ಇಲ್ಲ ನನಗೆ ಬೇಕಾಗಿಲ್ಲ. ನನ್ನ ಗಾಯ ಆರದೇ ಇದ್ದರೆ, ಪ್ರಾಯಶಃ ಒಂದು ದಿನ ನಾನು ಪ್ರೀತಿಯಲ್ಲಿ ನಂಬಿಕೆಯಿರುವ ಯಾರನ್ನಾದರೂ ಕಂಡು ಹಿಡಿಯುತ್ತೇನೆ.

- ಸಯ್ಮಾ (23)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News