ಐಟಿ ದಾಳಿ ವೇಳೆ ಮಾನವ ಹಕ್ಕು ಉಲ್ಲಂಘನೆ: ಮಾನವ ಹಕ್ಕು ಆಯೋಗಕ್ಕೆ ದೂರು
Update: 2017-08-05 22:02 IST
ಬೆಂಗಳೂರು, ಆ.5: ಆದಾಯ ಇಲಾಖೆಯ ಅಧಿಕಾರಿಗಳು ಇಂಧನ ಸಚಿವ ಡಿ.ಕೆ.ಶಿವವಕುಮಾರ್ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡುವ ವೇಳೆ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಾಗಿದೆ.
ಮಾನವ ಹಕ್ಕು ರಾಷ್ಟ್ರೀಯ ಸಮಿತಿ ಸದಸ್ಯರು ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾರಿಗೆ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಕೇಂದ್ರ ಮಾನವ ಹಕ್ಕು ಆಯೋಗ, ಪ್ರಧಾನಮಂತ್ರಿ ಕಚೇರಿ, ಕೇಂದ್ರ ಐಟಿ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಗೆ ಕಳುಹಿಸಲಾಗಿದೆ.
ಸತತವಾಗಿ 3-4ದಿನ ಐಟಿ ದಾಳಿ ನಡೆಸಲಾಗಿದೆ. ಐಟಿ ದಾಳಿ ಸಮಯದಲ್ಲಿ ಪ್ರಾಥಮಿಕ ಚಿಕಿತ್ಸಾ ವೈದ್ಯರ ಬಳಕೆ ಮಾಡಿಲ್ಲ. ಮನೆಯ ಬಳಿ ಆಂಬುಲೆನ್ಸ್ ನಿಯೋಜಿಸಿರಲಿಲ್ಲ. ಐಟಿ ದಾಳಿ ವೇಳೆ ಕುಟುಂಬ ಸದಸ್ಯರ ಮಾನಸಿಕ ಖಿನ್ನತೆ ಮತ್ತು ತೇಜೋವಧೆ ಮಾಡಲಾಗಿದೆ ಎಂದು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಐಟಿ ಅಧಿಕಾರಿಗಳ ವಿರುದ್ಧ ಕ ್ರಮಕ್ಕೆ ದೂರಿನಲ್ಲಿ ಆಗ್ರಹಿಸಲಾಗಿದೆ.