ಬಿಜೆಪಿ ಆಮಿಷಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ: ಶಕ್ತಿ ಸಿನ್ಹಾ ಘೋಯೆಲ್
Update: 2017-08-05 22:35 IST
ಬೆಂಗಳೂರು, ಆ. 5: ಕಾಂಗ್ರೆಸ್ ಪಕ್ಷದ 44 ಮಂದಿ ಶಾಸಕರು ಹಾಗೂ ಗುಜರಾತಿನಲ್ಲೆ ಇರುವ 5 ಮಂದಿ ಸೇರಿದಂತೆ ನಾವ್ಯಾರೂ ಬಿಜೆಪಿ ಆಮಿಷಕ್ಕೆ ಒಗಾಗಿಲ್ಲ ಎಂದು ಎಐಸಿಸಿ ವಕ್ತಾರ ಹಾಗೂ ಗುಜರಾತ್ ಶಾಸಕ ಶಕ್ತಿ ಸಿನ್ಹಾ ಘೋಯೆಲ್ ಸ್ಪಷ್ಟಣೆ ನೀಡಿದ್ದಾರೆ.
ಶನಿವಾರ ರಾಜಭವನದಲ್ಲಿ ಗುಜರಾತ್‌ನ 44 ಮಂದಿ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲ ವಜುಭಾಯಿ ವಾಲಾ ಅವರ ಆಶೀರ್ವಾದ ಪಡೆಯಲು ಆಗಮಿಸಿದ್ದೆವು ಎಂದರು.
ಸಂವಿಧಾನದಲ್ಲಿ ರಾಜ್ಯಪಾಲರ ಹುದ್ದೆ ದೊಡ್ಡದು. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಹೀಗಾಗಿ ಅವರೊಂದಿಗೆ ಮಾತುಕಥೆ ನಡೆಸಿದ್ದೇವೆ. ಅವರು ಎಲ್ಲರ ಜತೆ ಅತ್ಯಂತ ಪ್ರೀತಿಯಿಂದ ಮಾತನಾಡಿದ್ದಾರೆ ಎಂದು ಶಕ್ತಿ ಸಿನ್ಹಾ ಘೋಯೆಲ್ ತಿಳಿಸಿದರು.