ದುಷ್ಕರ್ಮಿಗಳಿಂದ ಹಣ್ಣಿನ ವ್ಯಾಪಾರಿಯ ಹತ್ಯೆ
Update: 2017-08-05 23:13 IST
ಬೆಂಗಳೂರು, ಆ.5: ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ ಹಣ್ಣಿನ ವ್ಯಾಪಾರಿಯನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಲಘಟ್ಟಪುರದ ಬಿಡಿಎ ಲೇಔಟ್‌ನಲ್ಲಿ ನಡೆದಿದೆ.
ಮೃತನನ್ನು ಆವಲಹಳ್ಳಿಯ ರಹಮತ್‌ವುಲ್ಲಾ(32) ಎಂದು ಗುರುತಿಸಲಾಗಿದೆ. ಹಣ್ಣಿನ ವ್ಯಾಪಾರ ಮಾಡುತ್ತಿದ್ದ ರೆಹಮತ್‌ವುಲ್ಲಾ ರಾತ್ರಿ 10ರ ವೇಳೆ ಇಬ್ಬರು ಸ್ನೇಹಿತರ ಜೊತೆ ಬಿಡಿಎ ಲೇಔಟ್‌ನ ಖಾಲಿ ನಿವೇಶನಗಳ ಬಳಿ ಪಾರ್ಟಿ ಮಾಡಲು ಹೋಗಿದ್ದರು.
ಈ ವೇಳೆ ಮಚ್ಚಿಡಿದು ಅಲ್ಲಿಗೆ ಬಂದ ಐವರು ದುಷ್ಕರ್ಮಿಗಳು ರಹಮತ್‌ವುಲ್ಲನ ಕತ್ತು, ಎಡಗಾಲು ಇನ್ನಿತರ ಭಾಗಗಳಿಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಮೊಕದ್ದಮೆ ದಾಖಲಿಸಿಕೊಂಡಿರುವ ತಲಘಟ್ಟಪುರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.