ಭೈರವಿ ಕೆಂಪೇಗೌಡರು ಸಿದ್ಧಿ -ಸಾಧನೆ(1857-1937)

Update: 2017-08-05 18:32 GMT

ಹಿರಿಯ ವಿದ್ವಾಂಸ ಡಾ. ಕೆ. ಶ್ರೀಕಂಠಯ್ಯನವರ ಭಾರತೀಯ ಸಂಗೀತ ಮುಕುಟ ಮಣಿಗಳು ಎಂಬ ಕೃತಿಯಿಂದ ಆಯ್ದ ಭಾಗವಿದು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ‘ಸಾಹಿತ್ಯ ಮಂದಿರ’ ಪ್ರಕಾಶನ ಸಂಸ್ಥೆಯು ಈ ಕೃತಿಯನ್ನು ಪ್ರಕಟಿಸಿದೆ.

ಕೆಂಪೇಗೌಡರು ಚೆನ್ನಪಟ್ಟಣ ತಾಲೂಕು ನಾಗವಾರ ಗ್ರಾಮದ ಧನಿಕ ಮನೆತನದವರು. ಇವರಿಗೆ ಲಗ್ನವಾಗಿ ಗಂಡು ಮಗು ಸಹ ಆಗಿತ್ತು. ಸ್ವಲ್ಪ ಕಾಲದಲ್ಲಿಯೇ ಹೆಂಡತಿ-ಮಗು ತೀರಿ ಹೋದದ್ದರಿಂದ ಇವರು ವೈರಾಗ್ಯ ಹೊಂದಿ ಸ್ವ ಸ್ಥಳವನ್ನು ಬಿಟ್ಟು ಗೊತ್ತುಗುರಿಯಿಲ್ಲದೆ ಹೊರಟರು. ಬಾಲ್ಯದಿಂದಲೂ ಸಂಗೀತದಲ್ಲಿ ಅಭಿರುಚಿ, ಆಸಕ್ತಿ ಇದ್ದುದರಿಂದ ತಮ್ಮ ಪಾಲಿಗೆ ಬಂದ ಆಸ್ತಿಯಲ್ಲಿ ಸಹಸ್ರಾರು ರೂಪಾಯಿಗಳಷ್ಟು ಗುರು ದಕ್ಷಿಣೆ ನೀಡಿ ಘನತೆವೆತ್ತ ಪಟ್ಣಂ ಸುಬ್ರಮಣ್ಯ ಅಯ್ಯರ್ ಅವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭ ಮಾಡಿದರು. ಸುಮಾರು ಎಂಬತ್ತು ವರ್ಷಗಳ ಕಾಲ (1857-1937) ಬದುಕಿ ಬಾಳಿದ ಈ ಮಹಾನ್ ಗಾಯಕನ ಬಾಳ ಪುಟಗಳು ರೋಮಾಂಚಕಾರಿಯಾಗಿವೆ.

‘‘ತ್ಯಾಗರಾಜರ ದಿವ್ಯ ಸನ್ನಿಧಿಯಲ್ಲಿ, ವಿದ್ಯೆ ಕಲಿಸಿದ ಗುರುಗಳ ಪದತಲದಲ್ಲಿ, ಕರ್ನಾಟಕ ಸಂಗೀತದ ಮುಕುಟಮಣಿಗಳೆನಿಸಿದ ವಯಲಿನ್ ವಿದ್ವಾನ್ ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್, ಮೃದಂಗ ವಿದ್ವಾನ್ ನಾರಾಯಣಸ್ವಾಮಿ ಅಪ್ಪಾ ಅವರ ಪ್ರತಿಷ್ಠಿತ ಪಕ್ಕವಾದ್ಯದೊಂದಿಗೆ ಕಛೇರಿ ನಡೆಸಿ, ಭೈರವಿ ರಾಗವನ್ನು ಹಾಡಿ ‘ಭಲೇ’ ಅನ್ನಿಸಿಕೊಂಡು ‘ಭೈರವಿ ರಾಗ ಗೌಡರಿಗಾಗಿ ಹುಟ್ಟಿತೋ’ ಅನ್ನುವಂತೆ ಈ ರಾಗದಲ್ಲಿ ಸಿದ್ಧಿಪಡೆದ ಕೆಂಪೇಗೌಡರಿಗೆ ಭೈರವಿ ಕೆಂಪೇಗೌಡ ಎಂಬ ಹೆಸರು ಅನ್ವರ್ಥವಾದುದು’’ ಎಂದು ಗುರುಗಳಾದ ಪಟ್ಣಂ ಸುಬ್ರಮಣ್ಯ ಅಯ್ಯರ್ ಅವರಿಂದ ಪ್ರಶಂಸೆಗೆ ಒಳಗಾದ ಕೆಂಪೇ ಗೌಡರು ಕರ್ನಾಟಕ ಸಂಗೀತದ ಅನರ್ಘ್ಯ ರತ್ನಗಳಲ್ಲಿ ಒಂದಾಗಿ ಬೆಳಗಿದರೂ, ಅವರ ಹೆಸರು ಇತರ ಮಹಾನ್ ಗಾಯಕರಂತೆ ಬೆಳಕಿಗೆ ಬಾರದೆ ಹೋದದ್ದು ದುರ್ದೈವ.

    ಪಟ್ಣಂ ಸುಬ್ರಮಣ್ಯ ಅಯ್ಯರ್

ಕೆಂಪೇಗೌಡರು ಚೆನ್ನಪಟ್ಟಣ ತಾಲೂಕು ನಾಗವಾರ ಗ್ರಾಮದ ಧನಿಕ ಮನೆತನದವರು. ಇವರಿಗೆ ಲಗ್ನವಾಗಿ ಗಂಡು ಮಗು ಸಹಾ ಆಗಿತ್ತು. ಸ್ವಲ್ಪ ಕಾಲದಲ್ಲಿಯೇ ಹೆಂಡತಿ-ಮಗು ತೀರಿ ಹೋದದ್ದರಿಂದ ಇವರು ವೈರಾಗ್ಯ ಹೊಂದಿ ಸ್ವಸ್ಥಳವನ್ನು ಬಿಟ್ಟು ಗೊತ್ತುಗುರಿಯಿಲ್ಲದೆ ಹೊರಟರು.

ಬಾಲ್ಯದಿಂದಲೂ ಸಂಗೀತದಲ್ಲಿ ಅಭಿರುಚಿ, ಆಸಕ್ತಿ ಇದ್ದುದರಿಂದ ತಮ್ಮ ಪಾಲಿಗೆ ಬಂದ ಆಸ್ತಿಯಲ್ಲಿ ಸಹಸ್ರಾರು ರೂಪಾಯಿಗಳಷ್ಟು ಗುರು ದಕ್ಷಿಣೆ ನೀಡಿ ಘನತೆವೆತ್ತ ಪಟ್ಣಂ ಸುಬ್ರಮಣ್ಯ ಅಯ್ಯರ್ ಅವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭ ಮಾಡಿದರು. ಸುಮಾರು ಎಂಬತ್ತು ವರ್ಷಗಳ ಕಾಲ (1857-1937) ಬದುಕಿ ಬಾಳಿದ ಈ ಮಹಾನ್ ಗಾಯಕನ ಬಾಳ ಪುಟಗಳು ರೋಮಾಂಚ ಕಾರಿಯಾಗಿವೆ.

ಕೆಂಪೇಗೌಡರ ಶಿಷ್ಯವೃತ್ತಿ, ಪಟ್ಣಂ ಸುಬ್ರ ಮಣ್ಯ ಅಯ್ಯರ್ ಅವರಲ್ಲಿ ಅಖಂಡವಾಗಿ ಸಾಗುತ್ತಿದ್ದಾಗ ಒಂದು ರಾತ್ರಿ ಗುರುಗಳ ಕೋಪವನ್ನು ಕೆರಳಿಸು ವಂತಹ ಒಂದು ಘಟನೆ ನಡೆಯಿತು. ತಿರುವಾಂಕೂರಿನ ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಎಂಬ ಹೆಸರಾಂತ ಪಿಟೀಲು ವಿದ್ವಾಂಸರು ತಿರುವಯ್ಯಾರಿಗೆ ಬಂದಾಗ ಪಟ್ನಂ ಅವರ ಮನೆಯ ಮಹಡಿ ಮೇಲೆ ಕಛೇರಿ ಏರ್ಪ ಟ್ಟಿತ್ತು. ಅಂದು ರಾತ್ರಿ ಗುರುಗಳ ಹಾಡುಗಾರಿಕೆ, ಕೃಷ್ಣಯ್ಯರ್ ಅವರ ಪಿಟೀಲು, ಘನ ವಿದ್ವಾಂಸರೆಲ್ಲಾ ಸೇರಿದ್ದಾರೆ. ಊಟ ತಿಂಡಿಗಳ ಪರಿವೆಯೇ ಇಲ್ಲದೆ ಕಛೇರಿ ಸಾಗಿತ್ತು.

ಭೈರವಿ ರಾಗದ ‘ಚಿಂತಯಮಾಕಂದಮೂಲಕಂದಂ ಚೇತ; ಶ್ರೀ ಸೋಮಸ್ಕಂದಂ’ ಎಂಬ ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಯಿಂದ ಕಛೇರಿ ಪ್ರಾರಂಭವಾಗಿ, ಗುರುಗಳು ಚರಣದ ಅನುಪಲ್ಲವಿಯನ್ನೇ ಸುಮಾರು ಒಂದು, ಒಂದೂವರೆ ಗಂಟೆಗಳ ಕಾಲ ಹಾಡಿದರು. ಕೆಂಪೇಗೌಡರು ಗುರುಗಳ ಹಾಡುಗಾರಿಕೆಯನ್ನೂ ಕೃಷ್ಣಯ್ಯರ್ ಅವರ ಪಿಟೀಲು ವಾದನವನ್ನೂ ಹೊರ ಬಾಗಿಲ ಬಳಿ ಕುಳಿತು ಕೇಳುತ್ತಾ ಆನಂದಭರಿತರಾಗಿ ತಲೆದೂಗುತ್ತಿದ್ದರು. ರಾತ್ರಿ ಬಹಳ ಹೊತ್ತಾಗಿತ್ತು. ಗುರುಪತ್ನಿಯವರಿಗೆ ಬಂದ ಅತಿಥಿಗಳಾ ದಿಯಾಗಿ ಯಾರೂ ಊಟಕ್ಕೆ ಏಳಲಿಲ್ಲವಲ್ಲಾ ಎಂದು ಚಿಂತೆಯಾಗಿ, ಕೆಂಪುವನ್ನು ಕರೆದು (ಅದು ಅವರು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ‘ಊಟ ಮುಗಿಸಿ ಸಂಗೀತ ಮುಂದುವರಿಸಬಹುದು ಅಂತ ನಿಮ್ಮ ಗುರುಗಳಿಗೆ ಗುಟ್ಟಾಗಿ ಹೇಳಪ್ಪ’ ಎಂದು ಹೇಳಿ ಕಳುಹಿಸಿದರು.

ಕಛೇರಿ ನಡೆಯುತ್ತಿದ್ದ ವೇಳೆಯಲ್ಲಿ ಗುರುಗಳ ಹತ್ತಿರ ಸಲೀಸಾಗಿ ಮಾತನಾಡಬಲ್ಲವನೆಂದರೆ ಕೆಂಪಣ್ಣ ಒಬ್ಬನೇ. ಕೆಂಪಣ್ಣ ಮಹಡಿ ಮೇಲೆ ಹೋಗಿ ಗುರುಗಳು ಕೃಷ್ಣಯ್ಯರ್ ಅವರಿಗೆ ನುಡಿಸಲು ಬಿಟ್ಟ ಸಮಯ ನೋಡಿ ‘‘ಗುರುಗಳ ಕಿವಿಯಲ್ಲಿ ಗುರುಗಳೇ ಊಟ ಸಿದ್ಧವಾಗಿದೆಯಂತೆ. ದಯಮಾಡಿಸಬೇಕೂ ಅಂತ ತಾಯಿಯವರು ಹೇಳಿದ್ದಾರೆ.... ತಾವು ಊಟ ಮಾಡಿ ಬರೋವರೆಗೂ ಸೇರಿರುವ ಜನರನ್ನು ಸುಮ್ಮನೆ ಕೂರಿಸುವ ಬದಲು ನಾನು ಹಾಡ್ತಾ ಇರ್ತೇನೆ ಅಪ್ಪಣೆಯಾದರೆ....’’ ಎಂದು ಅತ್ಯಂತ ವಿನಯದಿಂದ ಅರಿಕೆ ಮಾಡಿಕೊಂಡ.

ಮೊದಲೇ ಮುಂಗೋಪಿಯಾದ ಗುರುಗಳಿಗೆ ಎಲ್ಲಿತ್ತೋ ಕೋಪ ಕೆಂಪಣ್ಣನನ್ನು ಎಳೆದು ನೆಲಕ್ಕೆ ಕುಕ್ಕರಿಸಿ! ‘ಎಲ್ಲಿ ಹಾಡು ನೋಡೋಣ’ ಎಂದು ಗುಡುಗಿದರು. ಕೆಂಪಣ್ಣ ಜಂಘಾಬಲ ಉಡುಗಿ ಗಡಗಡ ನಡುಗಿದ. ಸಭಿಕರು ದಿಗ್ಭ್ರಮೆಗೊಂಡರು. ಕೃಷ್ಣಯ್ಯರ್ ಕಮಾನು ಕೆಳಗಿಟ್ಟು ಪ್ರಶ್ನಾರ್ಥವಾಗಿ ನೋಡಿದರು. ಗುರುಗಳು ಸುಮ್ಮನಿರದೆ ‘ಹಾಡ್ತಿಯೋ ಇಲ್ಲವೋ’ ಎಂದು ಮತ್ತೆ ಹೂಂಕರಿಸಿದರು.

ಸುಮ್ಮನಿದ್ದರೆ ಮತ್ತೇನು ಅನಾಹುತ ಕಾದಿದೆಯೋ ಎಂದು ಹೆದರಿದ ಕೆಂಪಣ್ಣ ಚರಣದಿಂದ ಹಾಡಲಾರಂಭಿಸಿದ. ಗುರುಗಳದು ಗಡಸು ಶಾರೀರ. ಅವರು ಅದನ್ನು ಕಠಿಣ ಸಾಧನೆಯಿಂದ ಸ್ವಾಧೀನಪಡಿಸಿ ಕೊಂಡಿದ್ದರು. ಆದರೆ ಕೆಂಪಣ್ಣನದು ಗಂಧರ್ವ ಶಾರೀರ. ಆ ಶಾರೀರ ದಲ್ಲಿ ಹನ್ನೆರಡು ವರ್ಷಗಳ ಕಾಲ ತಾನು ಮಾಡಿದ ತಪಸ್ಸಿದ್ಧಿಯನ್ನೂ ತ್ರಾಣವನ್ನೂ ಒಗ್ಗೂಡಿಸಿ ಒಂದೂವರೆ ಗಂಟೆಗಳ ಕಾಲ ಹಾಡಿದ. ಸಭಿಕರು, ಕೃಷ್ಣಯ್ಯರ್ ಅವರೂ ಹಾಗಿರಲಿ. ಸ್ವತಃ ಗುರುಗಳೇ ತಮ್ಮ ಶಿಷ್ಯನ ಆ ಹಾಡುಗಾರಿಕೆಗೆ ದಂಗು ಬಡಿದು ಹೋಗಿ ತಿರುವಾಂಕೂರ್ ಮಹಾ ರಾಜರು ತಮಗೆ ಹೊದಿಸಿದ್ದ ಕಾಶ್ಮೀರಿ ಶಾಲನ್ನು ತಮ್ಮ ಹೆಗಲ ಮೇಲಿಂದ ತೆಗೆದು ಹಿಂದು ಮುಂದು ನೋಡದೆ ಕೆಂಪೇಗೌಡನಿಗೆ ಹೊದಿಸಲು, ಕೃಷ್ಣಯ್ಯರ್ ಆದಿಯಾಗಿ ಎಲ್ಲರೂ ಹರ್ಷೋದ್ಗಾರ ಮಾಡಿದರು. ಗುರುಗಳ ಎರಡು ಪಾದಗಳನ್ನೂ ಗಟ್ಟಿಯಾಗಿ ಹಿಡಿದುಕೊಂಡ ಶಿಷ್ಯನನ್ನು ವಾತ್ಸಲ್ಯದಿಂದ ಹಿಡಿದೆತ್ತಿ ಗುರುಗಳು ‘‘ಕೆಂಪೂ, ನನ್ನ ಶ್ರಮ ಸಾರ್ಥಕವಾಯಿತು. ಮಗ ತಂದೆಯನ್ನು ಮೀರಿಸಿದರೆ ತಂದೆಗೆ ಬಹು ಸಂತೋಷವಾಗುವಂತೆ, ಗುರುವನ್ನು ಮೀರಿಸಿದ ನಿನ್ನಂಥ ಶಿಷ್ಯನನ್ನು ಕಂಡು ನನಗೆ ಪರಮಾನಂದವಾಯಿತು. ಭೈರವಿ ರಾಗವು ನಿನ್ನಿಂದ ಸಂಗೀತ ಕ್ಷಿತಿಜದಲ್ಲಿ ಅಮರವಾಗಿ ಉಳಿಯಲಿ, ಯಶೋವಂತನಾಗಿ ಬಾಳು’’ ಎಂದು ಎರಡು ಕೈಗಳನ್ನೂ ಕೆಂಪೇಗೌಡನ ತಲೆಯ ಮೇಲಿಟ್ಟು ಆಶೀರ್ವದಿಸಿದರು. ಕೃಷ್ಣಯ್ಯರ್ ಅವರೂ ಕೆಂಪೇಗೌಡನ ಅಂದಿನ ಗಾಯನವನ್ನೂ, ವಿನಯವಂತಿಕೆಯನ್ನೂ ಮನಮೆಚ್ಚಿ ಶ್ಲಾಘಿಸಿದರು.

ಹೀಗೆ ಗುರುಗಳ ಮನೆಯಲ್ಲಿ ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಕೆಂಪೇಗೌಡನ ಕಲಾಪ್ರತಿಭೆ ವಿದ್ವಾಂಸರ ಸಮ್ಮುಖದಲ್ಲಿ ಬೆಳಕಿಗೆ ಬರಲು ಅವಕಾಶವಾಯಿತು. ಇದಾದ ಕೆಲವು ದಿನಗಳ ಮೇಲೆ ಗುರುಗಳು ಒಂದು ದಿನ ‘‘ಕೆಂಪೂ, ನನ್ನಲ್ಲಿದ್ದುದನ್ನೆಲ್ಲಾ ನಿನಗೆ ಧಾರೆಯೆರೆ ದಿದ್ದೇನೆ. ಇನ್ನು ನಾನು ನಿನಗೆ ಕಲಿಸುವುದೇನೂ ಉಳಿದಿಲ್ಲ. ನೀನಿನ್ನು ಹೋಗಿ ಬಾ, ಕೀರ್ತಿಶಾಲಿಯಾಗು’’ ಎಂದು ತುಂಬು ಹೃದಯದಿಂದ ಹರಸಿ ಬೀಳ್ಕೊಟ್ಟರು.

ಪಟ್ಣಂ ಸುಬ್ರಮಣ್ಯ ಅಯ್ಯರ್ ಅವರಲ್ಲಿ ಹಲವಾರು ವರ್ಷಗಳು ಸಂಗೀತಾಭ್ಯಾಸ ಮಾಡಿ, ಪುಟಕ್ಕೆ ಹಾಕಿದ ಚಿನ್ನದಂತಾಗಿದ್ದ ಕೆಂಪೇ ಗೌಡರು ಕೊಯಮತ್ತೂರಿಗೆ ಹಿಂದಿರುಗಿದಾಗ ಸಂಗೀತ ವಿದ್ವಾಂಸನೆ ಸಿಕೊಂಡ ಆತನಿಗೆ ಎಲ್ಲೆಲ್ಲಿಯೂ ಪ್ರೀತಿ ವಿಶ್ವಾಸಗಳ ಸುರಿಮಳೆಯೆ ಕಾದಿತ್ತು. ‘ಸೂಳೇರ ಸಂಗೀತ’, ‘ಹಾಳು ಸಂಗೀತ’ ಎಂದೆಲ್ಲ ಸಂಗೀತದ ಬಗೆಗೆ ಕೆಟ್ಟ ಅಭಿಪ್ರಾ ಯ ತಾಳಿ, ತಮ್ಮ ಮಗ ಅಂತಹ ಸಂಗೀತ ಕಲಿಯಲು ಅವಕಾಶ ಕೊ ಡುವುದಿಲ್ಲ ಎಂದೆಲ್ಲ ಭಾವನೆ ತಳೆದಿದ್ದ ಅವರ ತಂದೆ ದೊಡ್ಡೇಗೌಡರೂ ಸಹ ಈಗ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡರು.

ಹೀಗಿರುವಾಗ ಒಮ್ಮೆ ಸುಬ್ರಮಣ್ಯೇಶ್ವರ ಸ್ವಾಮಿ ಜಾತ್ರೆ ವೇಳೆಯಲ್ಲಿ ಊರಿನವರು ಪ್ರತಿವರ್ಷದಂತೆ ಕಛೇರಿ ಏರ್ಪಡಿಸಿದರು. ವೀಣೆ ಶೇಷಣ್ಣನವರನ್ನೂ, ತಂಜಾವೂರು ಮೃದಂಗ ವಿದ್ವಾನ್ ನಾರಾಯಣ ಸ್ವಾಮಿ ಅಪ್ಪಾ ಅವರನ್ನೂ ಆಹ್ವಾನಿಸಲಾಗಿತ್ತು. ವೀಣೆ ಶೇಷಣ್ಣನವರು ಕಾರಣಾಂತರಗಳಿಂದ ಬರಲಿಲ್ಲವಾದ್ದರಿಂದ ಕೆಂಪೇಗೌಡರಿಗೆ ಆ ಸದವಕಾಶವನ್ನು ನೀಡಲಾಯಿತು.

ಅದು ಕೆಂಪೇಗೌಡರ ಮೊದಲ ಸಾರ್ವಜನಿಕ ಕಛೇರಿಯಾದರೂ, ಮಾತಾಪಿತೃಗಳೆದುರಿಗೆ, ಅನೇಕ ಸಹೃದಯ ಕಲಾಭಿಮಾನಿಗಳೆದುರಿಗೆ ಹಾಡಿದ ಸ್ಮರಣೀಯ ಕಛೇರಿಯಾಯಿತು. ಅಂದು ಕೆಂಪೇಗೌಡರು ಮತ್ತೆ ತಮಗೆ ಪ್ರಿಯವಾದ ಭೈರವಿ ರಾಗವನ್ನೇ ಪಲ್ಲವಿಗಾಗಿ ಆರಿಸಿಕೊಂಡು ಹಾಡಿದ್ದು ಕಛೇರಿಗೆ ಕಳೆಕಟ್ಟಿತು. ಮಹಾ ವೈದ್ಯನಾಥ ಅಯ್ಯರ್, ಪಟ್ಣಂ ಸುಬ್ರಮಣ್ಯ ಅಯ್ಯರ್, ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಅವರಂತಹ ಘನತೆವೆತ್ತ ವಿದ್ವಾಂಸರಿಗೆ ಮಾತ್ರ ಮೃದಂಗ ನುಡಿಸುತ್ತಿದ್ದ ನಾರಾಯಣಸ್ವಾಮಿ ಅಪ್ಪಾ ಅವರು ಸಣ್ಣಪುಟ್ಟ ವಿದ್ವಾಂಸರಿಗೆ ಎಂದೂ ನುಡಿಸುತ್ತಿರ ಲಿಲ್ಲ. ಅವರೂ ಮೃದಂಗ ವಾದನದಲ್ಲಿ ಈ ಮೂವರು ಮಹನೀ ಯರಷ್ಟೇ ಕೀರ್ತಿಶಾಲಿಗಳಾಗಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ವ್ಯವಸ್ಥಾಪಕರು ನಾರಾಯಣ ಸ್ವಾಮಿ ಅಪ್ಪಾ ಅವರಿಗೆ ಶಾಲು ಹೊದಿಸಲು ಹೋದಾಗ ಅವರು ಅದನ್ನು ತೆಗೆದುಕೊಂಡು ‘‘ಕೆಂಪಣ್ಣನವರೇ, ನಾನು ನಿಮ್ಮ ಕಛೇರಿಗೆಂದು ಬಂದಾಗ ವಿದ್ವತ್ತು ಹಾಗೂ ಅನುಭವದ ದೃಷ್ಟಿಯಿಂದ ನೀವು ಬಹು ಚಿಕ್ಕವರೆಂದು ಭಾವಿಸಿದ್ದೆ. ನಿಮ್ಮ ಸಂಗೀತ ಕೇಳಿದ ಮೇಲೆ ನಾನು ನಿಮಗಿಂತ ಚಿಕ್ಕವನೆಂಬ ಅಭಿಪ್ರಾಯಕ್ಕೆ ಬಂದಿದ್ದೇನೆ. ಆದ್ದರಿಂದ ಈ ಶಾಲನ್ನು ಹೊದೆಯಲು ನೀವೇ ಅರ್ಹರು’’ ಎಂದು ಹೇಳಿ ಶಾಲನ್ನು ಕೆಂಪೇಗೌಡರಿಗೆ ಹೊದಿಸಿದರು.

ಸ್ವಾಮಿ ವಿವೇಕಾನಂದ

ಕೆಂಪೇಗೌಡರು ತಮ್ಮ ಪ್ರೀತಿಯ ಹೆಂಡತಿ ಚೆನ್ನಮ್ಮ ಹೆತ್ತು ಕಾಲವಾ ಗಲು, ಒಂದು ರೀತಿಯಲ್ಲಿ ನಿರಾಶರಾಗಿ ಮತ್ತೆ ತಿರುವಯ್ಯೆರಿಗೆ ಬಂದು, ಅಲ್ಲಿ ತಮ್ಮ ಗುರುಗಳು ಮದರಾಸಿಗೆ ಹೋಗಿ ನೆಲೆಸಿದ್ದಾರೆಂಬ ವಿಚಾರ ತಿಳಿದು ಯೋಚನೆಯಲ್ಲಿರುವಾಗ, ಅವರಿಗೆ ಬ್ರಹ್ಮಾನಂದ ಅವಧೂತರ ಪರಿಚಯವಾಗಿ, ಅವರು ಸಮಾಧಾನ ಹೇಳುತ್ತಾ ‘‘ನಿನ್ನನ್ನು ಚೊಕ್ಕ ಚಿನ್ನವನ್ನಾಗಿ ಮಾಡಲೆಂದೇ ಭಗವಂತ ಆ ಚೆನ್ನಮ್ಮ ಎಂಬ ಚಿನ್ನವನ್ನು ತನ್ನ ಬಳಿಗೆ ಕರೆದುಕೊಂಡ. ನಿನ್ನಿಂದ ಸಂಗೀತ ಲೋಕಕ್ಕೆ ಅಪಾರ ಸೇವೆ ಸಲ್ಲುವುದಿದೆ. ಸರ್ವಸಂಗ ಪರಿತ್ಯಾಗಿಗಳಾದ ಯೋಗಿಗಳು ಆ ಬ್ರಹ್ಮನನ್ನು ಕುರಿತು ತಪಸ್ಸು ಮಾಡುವಂತೆ, ನೀನೂ ಸಂಗೀತದ ಸಿದ್ಧಿಗಾಗಿ, ಹಗಲಿರುಳೆನ್ನದೆ, ಆಹಾರ ನಿದ್ರೆಗಳ ಪರಿವೆಯಿಲ್ಲದೆ ನಾದ ದೇವತೆಯ ಉಪಾಸನೆ ಮಾಡುತ್ತಾ ಆ ನಾದದಲ್ಲಿಯೇ ನಿನ್ನ ವ್ಯಕ್ತಿತ್ವವನ್ನು ಕರಗಿಸಿಕೊಂಡು ಸಾಕ್ಷಾತ್ಕಾರ ಪಡೆಯಬೇಕು...’’ ಎಂದು ಹೇಳಿ ‘‘ತೆಗೆದುಕೋ ಈ ತಂಬೂರಿ. ಇದು ನಿನ್ನ ಬಾಳ ಸಂಗಾತಿಯಾಗಲಿ. ಗಾನ ಗಂಧರ್ವ ನಾಗಿ ನಾದಲೋಕವನ್ನು ಬೆಳಗು ಹೋಗು’’ ಎಂದು ಆಶೀರ್ವದಿಸಿದರು. ನಲ್ಮೆಯ ನಲ್ಲೆಯನ್ನು ಕಳೆದುಕೊಂಡ ನೊಂದ ಜೀವಿಗೆ ಅವಧೂತರ ಈ ಮಾತುಗಳು ಅಮೃತವರ್ಷವನ್ನೇ ಕರೆದಷ್ಟು ನೆಮ್ಮದಿಯನ್ನು ನೀಡಿತು.

ಪಟ್ಣಂ ಸುಬ್ರಮಣ್ಯ ಅಯ್ಯರ್ ಅವರಲ್ಲಿ ಕೆಂಪೇಗೌಡರು ಶಿಷ್ಯವೃತ್ತಿ ಯನ್ನು ಕೈಗೊಂಡು ದಿನದಿನಕ್ಕೂ ಪ್ರವರ್ಧಮಾನಕ್ಕೆ ಬರುತ್ತಿದ್ದಾಗ ಒಂದೆರಡು ಬಾರಿ ಗುರುಗಳು ಮೈಸೂರು ಮಹಾರಾಜರಿಗೆ ಪತ್ರ ಬರೆದು ಅದರಲ್ಲಿ ಕೆಂಪೇಗೌಡರ ಅಸಾಧಾರಣ ಪ್ರತಿಭೆಯನ್ನು ವ್ಯಕ್ತಪಡಿಸಿ ಒಂದಲ್ಲಾ ಒಂದು ದಿನ ಪ್ರಭುಗಳ ಆಸ್ಥಾನಕ್ಕೆ ಸೇರುವ ಅರ್ಹತೆಯನ್ನು ಅವರು ಪಡೆಯುತ್ತಾರೆಂದು ತಿಳಿಸಿದ್ದರು. ಜೊತೆಗೆ ಕೆಂಪೇಗೌಡರ ಜೊತೆಯಲ್ಲಿಯೇ ಶಿಷ್ಯವೃತ್ತಿಯನ್ನು ನಡೆಸುತ್ತಿದ್ದ ಮೈಸೂರು ವಾಸುದೇವಾಚಾರ್ಯರು ಕೆಂಪೇಗೌಡರ ಬಗೆಗೆ ಪ್ರಭುಗಳ ಬಳಿಯಲ್ಲಿ ಸಮಯ ಸಿಕ್ಕಾಗಲೆಲ್ಲ ಹೇಳುತ್ತಿದ್ದರು. ಹೀಗಾಗಿ ಮೈಸೂರು ಅರಸರಾದ ಚಾಮರಾಜ ಒಡೆಯರಿಗೆ ಕೆಂಪೇಗೌಡರ ಕಲಾಪ್ರತಿಭೆ, ಹಾಗೂ ಸಂಗೀತ ವ್ಯಾಸಂಗದ ಬಗೆಗೆ ಸಾಕಷ್ಟು ವರದಿಗಳು ತಲುಪಿದ್ದವು.

ಮೈಸೂರಿಗೆ ಬಂದ ಕೆಂಪೇಗೌಡರು ಚಾಮುಂಡಿ ಬೆಟ್ಟದ ಬಳಿ ನಿರ್ಜನ ಪ್ರದೇಶದ ಗುಹೆಯೊಂದರಲ್ಲಿ ನೆಲೆಸಿ, ತಮ್ಮ ಆನಂದಕ್ಕಾಗಿ ಆಗಾಗ ಹಾಡಿಕೊಳ್ಳುತ್ತಿದ್ದರು. ಒಮ್ಮೆ ಚಾಮುಂಡೇಶ್ವರಿಯ ದಿವ್ಯ ಸನ್ನಿಧಿಯಲ್ಲಿ, ಪೂಜೆಯ ಸಮಯದಲ್ಲಿ ಹಾಡುತ್ತಿರುವಾಗ ದೇವಿಯ ದರ್ಶನಕ್ಕೆಂದು ಬಂದ ಮಹಾರಾಜರು ಆ ಸುಮಧುರ ಗಾಯನದಿಂದ ಆಕರ್ಷಿತರಾಗಿ ಅರಮನೆಗೆ ಕರೆಸಿ ಕಛೇರಿಯನ್ನು ಏರ್ಪಡಿಸಿದರು. ಆ ವೇಳೆಗೆ ಪ್ರವಾಸದಲ್ಲಿದ್ದ ಸ್ವಾಮಿ ವಿವೇಕಾನಂದರು ಅರಮನೆಯಲ್ಲಿ ಪ್ರಭುಗಳ ಜೊತೆ ಕೆಂಪೇಗೌಡರ ಗಾಯನವನ್ನು ಕೇಳುವಂತಹ ಯೋಗಾಯೋಗ ಕೂಡಿ ಬಂತು. ಆ ದಿವ್ಯ ಗಾಯನವನ್ನು ಕೇಳಿದ ಸ್ವಾಮಿಗಳು ‘ಮಹಾ ರಾಜರೇ ಈ ರತ್ನ ನಿಮ್ಮ ಅರಮನೆಯಲ್ಲಿರಬೇಕಾದದ್ದು. ಇವರ ಸಂಗೀತ ಇತರ ಲೌಕಿಕರ ಸಂಗೀತಗಳಂತಲ್ಲ. ಇದು ನಿರಪೇಕ್ಷೆ ಹಾಗೂ ಕೇವಲ ವೈರಾಗ್ಯದಿಂದ ಕೂಡಿದ ದೈವ ಪ್ರೇರಿತವಾದ ಪಾರಮಾರ್ಥಿಕ ಸಂಗೀತ’ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.

ಮುಂದೆ ಅರಮನೆಯಲ್ಲಿ ಮೇಲಿಂದ ಮೇಲೆ ಗೌಡರ ಕಛೇರಿ ಗಳು ನಡೆದು ಅವರು ಪ್ರಭುಗಳಿಗೆ ಬಹು ಆತ್ಮೀಯರಾದರು. ಮಹಾ ರಾಜರು ತಾವು ಕೈಗೊಂಡ ಕೋಲ್ಕತಾ ಪ್ರವಾಸದಲ್ಲೂ ಸಹ ಗೌಡರನ್ನು ಬಿಟ್ಟಿರಲಾರದೆ ಅವರ ಸಂಗೀತ ಸುಧೆಯನ್ನು ಸದಾ ಸವಿಯಲು ಅಪೇಕ್ಷಿಸಿ ಜೊತೆಯಲ್ಲೇ ಗೌಡರನ್ನೂ ಕರೆದೊಯ್ದರು. ಆದರೆ ದುರ್ದೈವದಿಂದ ಪ್ರಭುಗಳು ಕೋಲ್ಕತಾ ಪ್ರವಾಸದಲ್ಲಿರುವಾಗಲೇ ಅಕಾಲ ಮರಣಕ್ಕೀಡಾಗಲು, ಆ ಶೋಕವನ್ನು ಭರಿಸಲಾರದೆ ಗೌಡರುಮತ್ತೆ ಮೈಸೂರಿಗೆ ಹಿಂದಿರುಗದೆ ಮೂರು ವರ್ಷಗಳ ಕಾಲ ಹಿಮಾಲ ಯ ಯಾತ್ರೆಯನ್ನು ಕೈಗೊಂಡರು.

ಅಮೆರಿಕದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲು ಗೊಳ್ಳಲು ತೆರಳಿದ್ದ ವಿವೇಕಾನಂದರು, ಮರಳಿ ಕೋಲ್ಕತಾಗೆ ತೆರಳಿದರೆಂಬ ವಾರ್ತೆ ಕೇಳಿ ಗೌಡರು ಮತ್ತೊಮ್ಮೆ ಆ ಯೋಗಿವರ್ಯರ ದರ್ಶನ ಭಾಗ್ಯ ಪಡೆಯಲು ದಕ್ಷಿಣೇಶ್ವರಕ್ಕೆ ಧಾವಿಸಿದರು. ಸ್ವಾಮಿಗಳನ್ನು ತಮ್ಮ ಗಾನಾಮೃತದಿಂದ ತಣಿಸಿ, ದೀರ್ಘದಂಡ ನಮಸ್ಕಾರ ಮಾಡಿ ತಮಗೆ ಸನ್ಯಾಸವನ್ನು ಅನುಗ್ರಹಿಸುವಂತೆ ಬೇಡಿಕೊಂಡರು. ಸ್ವಾಮಿಗಳ ಹಿಂದೆ ತಾವು ಮೈಸೂರು ಅರಮನೆಯಲ್ಲಿ ಕೇಳಿದ ಗೌಡರ ಸ್ಮರಣೀಯ ಗಾಯನವನ್ನು ನೆನೆದುಕೊಂಡು ‘‘ಮಗು, ನಿನ್ನ ಗಾನದಿಂದ ಪಟ್ಟ ಆನಂದಕ್ಕೆ ನಾವು ಏನು ತಾನೇ ಕೊಟ್ಟೇವು. ಮೈಸೂರು ಅರಮನೆಯಲ್ಲಿ ನೀನು ಹಾಡಿದಾಗ ನಿನಗೆ ಕೊಡಲು ನಮ್ಮ ಬಳಿ ಏನೂ ಇರಲಿಲ್ಲ. ಈಗಲೂ ಏನೂ ಇಲ್ಲ... ಈ ಕಾವಿ ವಸ್ತ್ರಗಳನ್ನು ಬಿಟ್ಟರೆ’’- ಎಂದು ಹೇಳುತ್ತಾ ವಿವೇಕಾನಂದರು ಒಂದು ವಸ್ತ್ರವನ್ನು ಬಿಚ್ಚಿ ಗೌಡರಿಗೆ ಹೊದಿಸುತ್ತಾ ‘‘ಇದು ನಿನಗೆ ಮುಕ್ತಿಗೆ ದಾರಿಯೆಂದು ತಿಳಿಯಬೇಡ. ದೇವರ ಸಾನ್ನಿಧ್ಯಕ್ಕೆ ನೇರವಾಗಿ ಕೊಂಡೊಯ್ಯವ ಸುಲಭ ಸಾಧನವೆಂದರೆ ಸಂಗೀತವೊಂದೇ ! ಅದು ನಿನಗೆ ಕರಗತವಾಗಿರುವಾಗ ಇನ್ನು ಸನ್ಯಾಸದ ಮಾತೇಕೆ? ಕಡೆಯ ದಾಗಿ ಹೇಳುತ್ತಿದ್ದೇನೆ ಮಗು. ನೀನು ಸದ್ದು ಗದ್ದಲಗಳಿಗೆ ಅಂಜದ ಕೇಸರಿ ಯಂತಿರು. ನೀರಿನಲ್ಲಿದ್ದರೂ ಅದರಿಂದ ನಿರ್ಲಿಪ್ತವಾದ ಕಮಲ ಪತ್ರದಂತಿರು. ಖಡ್ಗ ಮೃಗದಂತೆ ಏಕಾಂಗಿಯಾಗಿ ಸಂಚರಿಸುತ್ತ ನಿನ್ನ ಗಾನಸುಧಾ ಪಾನದಿಂದ ಜನಮನದ ಹೃದಯವನ್ನು ತಣಿಸು, ಹೋಗಿ ಬಾ’’. ಎಂದು ಬೀಳ್ಕೊಟ್ಟರು.

 ಚಾಮರಾಜ ಒಡೆಯರ್

ಗೌಡರು ಸ್ವಾಮೀಜಿಯವರ ಪಾದಗಳನ್ನು ಕಣ್ಣಿಗೊತ್ತಿಕೊಂಡು, ಹನಿಗಣ್ಣಿನಿಂದ ಕೃತಜ್ಞತೆಯನ್ನು ಸೂಸುತ್ತಾ ಹೊರಟರು.

ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದ ಕೆಂಪೇಗೌಡರು ನಿಜಕ್ಕೂ ತಮ್ಮ ಜೀವನದುದ್ದಕ್ಕೂ ಸರ್ವಸಂಗ ಪರಿತ್ಯಾಗಿಗಳಾಗಿ ಕೇವಲ ನಾದೋ ಪಾಸನೆಯೊಂದನ್ನೇ ತಮ್ಮ ಜೀವನದ ಸರ್ವಸ್ವವನ್ನಾಗಿ ಮಾಡಿಕೊಂಡು-ಮನೆ ಮಠ ಮಕ್ಕಳು ಎಲ್ಲವನ್ನೂ ಪರಿತ್ಯಜಿಸಿ ಅಲೆಮಾರಿ ಯಾಗಿ ಜೀವಿಸಲಾರಂಭಿಸಿದರು. ಅವರು ನಡೆಸಿದ ಕಛೇರಿಗಳು, ಮಾಡಿದ ಸಂಪಾದನೆ ಲೆಕ್ಕಕ್ಕೆ ಸಿಗುವಂತಿಲ್ಲ. ಆದರೆ ಅವರ ಕೊಡುಗೈ ನೀತಿಗೆ ಅಡೆತಡೆ ಇರಲಿಲ್ಲ.

ಕೆಂಪೇಗೌಡರು ಸಂಗೀತ ಲೋಕದಲ್ಲಿ ವಿಹರಿಸುತ್ತಾ ತಂಜಾವೂರು, ತಿರುಚಿನಾಪಳ್ಳಿ, ಮಧುರೆ, ಕುಂಭಕೋಣಂ, ಕಾಂಚಿ, ಕಾರೈಕ್ಕುಡಿ ಮುಂತಾದ ಕ್ಷೇತ್ರಗಳನ್ನೆಲ್ಲಾ ಸಂದರ್ಶಿಸಿ ಹೋದೆಡೆಯಲ್ಲೆಲ್ಲಾ ತಮ್ಮ ಗಾನ ಸೇವೆಯನ್ನು ಅರ್ಪಿಸಿ ತಮ್ಮ ಹೆಸರನ್ನು ಮೆರೆಸಿದರು. ರಾಮನಾಡು ಚೆಟ್ಟಿಯಾರರು ಗೌಡರ ಕಛೇರಿಯನ್ನು ಏರ್ಪಡಿಸಿ ಆ ಆನಂದದಲ್ಲಿ ಮೈ ಮರೆತು ಸುವರ್ಣದ ಕಾಸುಗಳನ್ನೇ ಗೌಡರ ಮೇಲೆ ಮಳೆಗೆರೆದರು.

ಶೃಂಗೇರಿಯ ಶಾರದಾ ಸನ್ನಿಧಿಯಲ್ಲಿ ಶ್ರೀಗಳವರ ಮುಂದೆ ಹಾಡಿದಾ ಗವರು ‘‘ಇಂದು ಹಾಡಿದವರು ಗೌಡರಲ್ಲ, ಶ್ರೀ ಶಾರದಾಂಬೆಯೇ ಅವರ ಮೈಮನ ಬುದ್ಧಿ ಕಂಠಗಳಲ್ಲಿ ನೆಲೆಸಿ, ತನ್ನ ನಾದಲೀಲಾ ವಿಲಾಸವನ್ನು ಮೆರೆದಳು’’ ಎಂದು ತುಂಬು ಹೃದಯದಿಂದ ಪ್ರಶಂಸಿಸಿ ಗೌಡರಿಗೆ ಉಚಿತ ಉಡುಗೊರೆಯನ್ನು ನೀಡಿ ಮರ್ಯಾದೆ ಮಾಡಿ ಆಶೀರ್ವ ದಿಸಿದರು.

ಕೆಂಪೇಗೌಡರು ಎಂದೂ ಸ್ಫರ್ಧಾತ್ಮಕ ಸಂಗೀತ ಕಛೇರಿಗಳಲ್ಲಿ ಭಾಗವಹಿಸಲು ಒಪ್ಪುತ್ತಿರಲಿಲ್ಲವಾದರೂ, ಒಂದೆರಡು ಪ್ರಸಂಗಗಳಲ್ಲಿ ಅದೂ ಶ್ರೀಮನ್ ಮಹಾರಾಜರ ಮುಂದೆಯೇ, ಅವರ ನಿಕಟವರ್ತಿ ಗಳ ಬಲವಂತಕ್ಕೆ ಭಾಗವಹಿಸಲೇ ಬೇಕಾಗಿ ಬಂತು. ಆ ಎರಡೂ ಕಛೇರಿಗಳೂ ಕೆಂಪೇಗೌಡರ ಕೀರ್ತಿಯನ್ನು ಹತ್ತಾರು ಕಡೆಗಳಲ್ಲಿ ಹರಡು ವುದರಲ್ಲಿ ಹಾಗೂ ಕುಹಕಿಗಳ ಬಾಯಿ ಮುಚ್ಚಿಸುವುದರಲ್ಲಿ ಸಮರ್ಥ ಪಾತ್ರವನ್ನು ವಹಿಸಿದವು. ಅವೆರಡೂ ಸ್ಮರಣೀಯ ಕಛೇರಿಗಳು.

ಚಾಮರಾಜ ಒಡೆಯರ ಆಸ್ಥಾನದಲ್ಲಿ ಕೆಂಪೇಗೌಡರು ‘ಸಾರಂಗ ರಾಗ’ ವನ್ನು ದಿವ್ಯವಾಗಿ ಹಾಡಿದಾಗ ಸ್ಪರ್ಧೆಗೆ ಪಣವಾಗಿ ಒಡ್ಡಿದ್ದ ಸಾರಂಗವು, ಆ ರಾಗದ ನಾದ ಮಾಧುರ್ಯಕ್ಕೆ ಮನಸೋತು, ನೀರು-ಆಹಾರಗಳನ್ನು ಕೂಡ ಬಿಟ್ಟು ಕಿವಿ ನಿಮಿರಿಸಿಕೊಂಡು ನಿಂತುಬಿಟ್ಟಿತು. ಗಾನರಸವು ಮಗು, ಪಶು ಮತ್ತು ಹಾವುಗಳಿಗೂ ಅರ್ಥವಾಗುತ್ತದೆ ಎಂಬುದನ್ನು ಗೌಡರು ಪ್ರತ್ಯಕ್ಷವಾಗಿ ಪ್ರಮಾಣಿಸಿ ಪ್ರಕಟಿಸಿದರು. ಅಂದಿನ ಸಭೆಯ ನಿರ್ವಹಣೆಯಲ್ಲಿ ಆಸ್ಥಾನ ವಿದ್ವಾಂಸರಾಗಿದ್ದ ವೀಣೆ ಶೇಷಣ್ಣನವರೂ ವಾಗ್ಗೇಯಕಾರ ವಾಸುದೇವಾಚಾರ್ಯರೂ ಪ್ರಮುಖ ಪಾತ್ರವಹಿಸಿದ್ದರು. ವಾಸುದೇವಾಚಾರ್ಯರೂ ಅಂದಿನ ಸಭೆಯಲ್ಲಿ ಭಾಗವಹಿಸುವರೆಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಆಚಾರ್ಯರು ಆಗ ಹೇಳಿದ್ದು ಅರ್ಥವತ್ತಾಗಿದೆ.

‘‘ಶೇಷಣ್ಣೋರೆ! ಈ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದರೂ ಒಂದೇ, ಕೆಂಪೇಗೌಡರು ಭಾಗವಹಿಸಿದರೂ ಒಂದೇ. ಇಬ್ಬರೂ ಒಬ್ಬ ಗುರುವಿನ ಶಿಷ್ಯರು. ನಮ್ಮನಮ್ಮಲ್ಲಿ ಸ್ಪರ್ಧೆ ಸರಿಯಲ್ಲ. ಅಲ್ಲದೆ ಗೌಡರ ಯೋಗ್ಯತೆ ಏನು ಎಂಬುದು ನನಗೆ ಗೊತ್ತು. ಅವರಿಗೆ ಶಾರದೆ ಒಲಿದಿ�

Writer - ಡಾ.ಕೆ. ಶ್ರೀಕಂಠಯ್ಯ

contributor

Editor - ಡಾ.ಕೆ. ಶ್ರೀಕಂಠಯ್ಯ

contributor

Similar News