ನ್ಯೂ ವೆಲ್ಫೇರ್ ಎಸೋಸಿಯೇಷನ್: ಮದೀನಾ ಮುನವ್ವರ ಮಹಾಸಭೆ

Update: 2017-08-06 04:57 GMT

ಮದೀನಾ, ಆ.6: ನ್ಯೂ ವೆಲ್ಫೇರ್ ಎಸೋಸಿಯೇಷನ್ ಮದೀನಾ ಮುನವ್ವರ ಸಮಿತಿಯ ವಾರ್ಷಿಕ ಮಹಾಸಭೆಯು ಮದೀನಾದ ಹವಾಲಿ ಗೈಸ್ ಹಾಲ್ ನಲ್ಲಿ ನಡೆಯಿತು.

ಸಮಿತಿ ಅಧ್ಯಕ್ಷ ಅಶ್ರಫ್ ತ್ವೈಬಾ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಹಂಝ ಉಸ್ತಾದ್ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ನಾಸಿರ್ ಬಾಂಬಿಲ ವಾರ್ಷಿಕ ವರದಿ ವಾಚಿಸಿದರು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಅಶ್ರಫ್ ತ್ವೈಬಾ, ಅಧ್ಯಕ್ಷರಾಗಿ ಶಂಸುದ್ದೀನ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಬಾಂಬಿಲ, ಕೋಶಾಧಿಕಾರಿಯಾಗಿ ಬಶೀರ್ ಉಪ್ಪಿನಂಗಡಿ ಇವರು ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಮುಬೀನ್ ಮುಲ್ಕಿ ಮತ್ತು ಅಝೀಝ್ ತ್ವೈಬಾ,  ಜೊತೆಕಾರ್ಯದರ್ಶಿಗಳಾಗಿ ಹಬೀಬ್ ಅಳಕೆ ಮತ್ತು ಹಸೈನಾರ್ ಫರಂಗಿಪೇಟೆ, ಸಲಹೆಗಾರರಾಗಿ ಹಂಝ ಉಸ್ತಾದ್ ಮತ್ತು ಇಬ್ರಾಹೀಂ ಮಚ್ಚಂಪಾಡಿ ಇವರನ್ನು ಆಯ್ಕೆಮಾಡಲಾಯಿತು.

ಸಭೆಯಲ್ಲಿ ದಾರುನ್ನೂರ್ ಸಮಿತಿ ಅಧ್ಯಕ್ಷ ಇಬ್ರಾಹೀಂ ಮಚ್ಚಂಪಾಡಿ, ಪ್ರೆಂಡ್ಸ್ ಮದೀನಾ ಹೆಲ್ಫ್ ಲೈನ್ ಅಧ್ಯಕ್ಷ ಶಂಸು ಕೂರ್ಗ್, ಉದ್ಯಮಿ ಮುಹಮ್ಮದ್ ಬೈತಡ್ಕ ಉಪಸ್ಥಿತಿರಿದ್ದರು.

ಹಬೀಬ್ ಅಳಕೆ ಸ್ವಾಗತಿಸಿ, ವಂದಿಸಿದರು. ರಯ್ಯಾನ್ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News