ನವೀಕರಣಕ್ಕಾಗಿ ಬಂದ್ ಆಗಲಿದೆ ಬಾಂಬೆ ಹೌಸ್

Update: 2017-08-06 07:45 GMT

ಮುಂಬೈ, ಆ.6: ವಾಣಿಜ್ಯ ನಗರದ ಪ್ರತಿಷ್ಠಿತ, ಐತಿಹಾಸಿಕ ಕಟ್ಟಡಗಳ ಪೈಕಿ ಒಂದಾಗಿರುವ ಬಾಂಬೆ ಹೌಸ್ ನವೀಕರಣ ಕಾರ್ಯಕ್ಕಾಗಿ ಒಂದು ವರ್ಷಗಳ ಕಾಲ ಬಂದ್ ಆಗಲಿದೆ.

 ಸುಮಾರು 90 ವರ್ಷಗಳ ಇತಿಹಾಸವಿರುವ ಈ ಕಟ್ಟಡ ಇದೇ ಮೊದಲ ಬಾರಿ ಬಂದ್ ಆಗುತ್ತಿದೆ. ಟಾಟಾ ಸಮೂಹ ಸಂಸ್ಥೆಯ ಮುಖ್ಯ ಕಚೇರಿಯು ಈ ಕಟ್ಟಡದಲ್ಲಿದೆ. ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅಧಿಕಾರವಹಿಸಿಕೊಂಡ ಐದು ತಿಂಗಳಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

ಮುಂಬೈನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಬಾಂಬೆ ಹೌಸ್‌ನಲ್ಲಿ 600ಕ್ಕೂ ಅಧಿಕ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ನೌಕರರಿಗೆ ಟಾಟಾದ ಮುಂಬೈನ ಇತರೆ ಕಚೇರಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವ ಸಾಧ್ಯತೆಯಿದೆ.

ಕಟ್ಟಡದ ಹೊರಭಾಗವನ್ನು ಈಗಿನಂತೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಒಳಭಾಗವನ್ನು ಅತ್ಯಾಧುನಿಕ ಶೈಲಿಯಲ್ಲಿ ಸುಮಾರು 80ಕೋ.ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ.

 1924ರಲ್ಲಿ ಸ್ಕಾಟ್ಲೆಂಡ್‌ನ ಇಂಜಿನಿಯರ್ ಜಾರ್ಜ್ ವಿಟ್ಟೆಜ್ ಈ ಕಟ್ಟಡವನ್ನು ನಿರ್ಮಿಸಿದ್ದರು. ಗೇಟ್‌ವೇ ಆಫ್ ಇಂಡಿಯಾ, ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂನಂತೆ ಈ ಕಟ್ಟಡವನ್ನು ಐತಿಹಾಸಿಕವಾಗಿ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News