ಕೆನ್ ವಾನ್ ಸಿಕಲ್

Update: 2017-08-06 10:59 GMT

ಫೋಟೊಗ್ರಫಿಯನ್ನು ಒಂದು ಅದ್ಭುತ ಕಲೆ ಹಾಗೂ ಅಭಿವ್ಯಕ್ತಿಯ ಮಟ್ಟಕ್ಕೆ ಎತ್ತರಿಸಿದ ಹಲವು ಜಗತ್‌ಪ್ರಸಿದ್ಧ ಫೋಟೊಗ್ರಾಫರ್‌ಗಳ ಕಿರುಪರಿಚಯ ಇದು.ಕರ್ನಾಟಕದ ಹೆಸರಾಂತ ಫೋಟೊಗ್ರಾಫರ್ ಉಷಾ .ಬಿ.ಎನ್. ಈ ಅಂಕಣ ಬರೆಯುತ್ತಾರೆ.

ಕೆನ್ ವಾನ್ ಸಿಕಲ್ ಕಳೆದ 6 ದಶಕಗಳಿಂದ ಸದ್ದಿಲ್ಲದೆ ಫೋಟೊಗಳನ್ನು ತೆಗೆಯುತ್ತಾ, ತನ್ನ ಮನೆಯ ಸಣ್ಣ ಕೋಣೆಯಲ್ಲಿ ಅದನ್ನು ಡೆವೆಲಪ್ ಮಾಡುತ್ತಾ ಬಂದಿದ್ದಾರೆ. ಕೆನ್ ಅಮೆರಿಕೆಯ ಮಾನ್‌ಹಾಟನ್ ನಿವಾಸಿ, 1950 ಹಾಗೂ 1960 ದಶಕಗಳ ನ್ಯೂಯಾರ್ಕ್ ಹಾಗೂ ಪ್ಯಾರಿಸ್‌ನ ದಿನನಿತ್ಯದ ಬದುಕಿನ ವಿವರಗಳನ್ನು ಆಪ್ತವಾಗಿ ತನ್ನ ಫೋಟೊಗ್ರಫಿಯಲ್ಲಿ ದಾಖಲಿಸಿದ್ದಾರೆ. 83 ವಸಂತಗಳನ್ನು ಕಂಡ ಇವರು ಇತ್ತೀಚಿನ ಟಿ.ವಿ. ಸಂದರ್ಶನದಲ್ಲಿ ತನ್ನ ಫೋಟೊಗ್ರಫಿಯ ಬಗ್ಗೆ ಮಾತನಾಡುತ್ತಾ,
‘‘ಇವತ್ತಿಗೂ ನನಗೆ ಫೋಟೊ ತೆಗೆಯಲು ಇಷ್ಟವಾದ ಒಂದು ಸ್ಥಳವೆಂಬುದೆಲ್ಲ, ಕ್ಯಾಮರ ಸದಾ ನನ್ನೊಡನೆ ಇರುತ್ತದೆ. ರಾಜಕೀಯವಾಗಲಿ ಅಥವಾ ಇನ್ಯಾವುದೇ ವಿಚಾರದಲ್ಲಾಗಲಿ ನಾನು ಯಾರಿಗೂ ಏನೂ ಸಾಬೀತು ಪಡಿಸಬೇಕಿಲ್ಲ. ನನ್ನ ಸಿಟಿಯ ಜನಸಾಮಾನ್ಯರ, ನಿತ್ಯಜೀವನದ ಸೂಕ್ಷ್ಮ ಕ್ಷಣಗಳಲ್ಲಿರುವ ಸೊಬಗು ನನ್ನನ್ನು ಆಕರ್ಷಿಸುತ್ತದೆ.’’

ಇಂದು ತಂತ್ರಜ್ಞಾನ ಬಹಳ ಮುಂದುವರಿದಿದೆ ಸರಿ. ಹೆಚ್ಚು ಜನಕ್ಕೆ ಫೋಟೊಗ್ರಫಿ ಲಭ್ಯವಾಗುವಂತೆ ಮಾಡಿದೆ. ಇದರರ್ಥ ಕೆಟ್ಟ ಫೋಟೊಗಳೂ ಸಹ ಹೆಚ್ಚಿವೆ ಎಂದು ಅರ್ಥ. ಏನೇ ಆದರೂ ತಂತ್ರಜ್ಞಾನ ಫೋಟೊಗ್ರಫಿಯ ಮೂಲವನ್ನು ಬದಲಾಯಿಸಲು ಸಾಧ್ಯವಿಲ್ಲ.

(jazz out of focues ‘‘ಪ್ಯಾರಿಸ್‌ನಲ್ಲಿದಾಗ ನನಗೆ 23 ವರ್ಷಗಳ ವಯಸ್ಸು. ನೋಡಿದ್ದೆಲ್ಲಾ ಕ್ಲಿಕ್ಕಿಸಬೇಕೆಂಬ ಆಸೆ. ಅದರೆ ಒಂದು ಫಿಲಿಮ್ ರೋಲ್‌ಗಿಂತ ಹೆಚ್ಚು ರೋಲ್ ಅನ್ನು ಖರೀದಿಸುವ ಶಕ್ತಿ ನನಗೆ ಆಗಿರಲಿಲ್ಲ. ಚೆಟ್ ಬೇಕರ್ ಸಂಗೀತಗಾರ) ಯಾವುದೋ ಕ್ಲಬ್‌ಲ್ಲಿ ಹಾಡುತ್ತಿದ್ದಾನೆ ಎಂದು ಯಾರೋ ಹೇಳಿದರೆಂದು, ಅಲ್ಲಿ ಹೋಗಿ ಎರಡು ಫೋಟೊ ತೆಗೆದೆ. ಒಂದು ಆಯಿತು. ಇನ್ನೊಂದು ಅತ್ಯುತ್ತಮ ಚಿತ್ರವೆನಿಸಿಕೊಂಡಿತು!

sharpness ಒಬ್ಬ ಶ್ರೇಷ್ಠ ಫೋಟೊಗ್ರಾಫರ್ ತನ್ನದೇ ಶೈಲಿಯನ್ನು ಕಂಡುಕೊಳ್ಳುತ್ತಾನೆ. ನನ್ನ ಫೋಟೊಗಳು ಕರಾರುವಾಕ್ಕಾದ (ತಾಂತ್ರಿಕವಾಗಿ ಸ್ಪಷ್ಟ ಚಿತ್ರ)ನ ಮೇಲೆ ಅವಲಂಬಿತವಾಗಿರುವುದಿಲ್ಲ. ಒಂದು ಚಿತ್ರವನ್ನು ಸಂಯೋಜಿಸುವ, ಒಂದು ಜಾಗವನ್ನು ನೋಡುವ ಪರಿ ನನಗೆ ಬಹಳ ಮುಖ್ಯವೆನಿಸುತ್ತದೆ’’ ಎಂಬುದು ಸಿಕಲ್‌ರ ಅನಿಸಿಕೆ.

Writer - ಉಷಾ .ಬಿ.ಎನ್.

contributor

Editor - ಉಷಾ .ಬಿ.ಎನ್.

contributor

Similar News