×
Ad

ಜೂನಿಯರ್ ವಿಶ್ವ ಕುಸ್ತಿ ಟೂರ್ನಿಸಾಜನ್‌ಗೆ ಕಂಚು

Update: 2017-08-06 23:53 IST

ಹೊಸದಿಲ್ಲಿ, ಆ.6: ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಟರ್ಕಿಯ ಅಲಿ ಒಸ್ಮಾನ್‌ರನ್ನು ಮಣಿಸಿದ ಭಾರತದ ಸಾಜನ್ ಕಂಚಿನ ಪದಕ ಗೆದ್ದುಕೊಂಡರು. ಗ್ರೀಕೊ-ರೊಮನ್ 74 ಕೆಜಿ ತೂಕ ವಿಭಾಗದಲ್ಲಿ ಮೂರನೆ ಹಾಗೂ ನಾಲ್ಕನೆ ಸ್ಥಾನಕ್ಕಾಗಿ ಫಿನ್‌ಲ್ಯಾಂಡ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಾಜನ್ ಟರ್ಕಿಯ ಕುಸ್ತಿಪಟುವನ್ನು 6-1 ರಿಂದ ಮಣಿಸಿದರು. ಸಾಜನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋತಿದ್ದರು. ಸಾಜನ್ ಎದುರಾಳಿ ಕಿರ್ಗಿಸ್ತಾನದ ಕುಸ್ತಿಪಟು ಫೈನಲ್‌ಗೆ ತಲುಪಿದ ಹಿನ್ನೆಲೆಯಲ್ಲಿ ಸಾಜನ್‌ಗೆ 3-4ನೆ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿತ್ತು. ಭಾರತದ ಇನ್ನೋರ್ವ ಕುಸ್ತಿಪಟು ಮನೀಶ್(60ಕೆಜಿ) ಕಂಚಿನ ಪದಕ ಸುತ್ತಿನಲ್ಲಿ ಈಜಿಪ್ಟ್‌ನ ಹಸನ್ ಅಹ್ಮದ್ ಮುಹಮ್ಮದ್ ವಿರುದ್ಧ ಸೋಲುವ ಮೂಲಕ ಪದಕ ವಂಚಿತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News