ಅಭಿವೃದ್ಧಿ ಕೆಲಸಗಳಿಂದಾಗಿ ಸಮಸ್ಯೆಗಳ ಉಲ್ಬಣ

Update: 2017-08-06 18:34 GMT

ಮಾನ್ಯರೆ,

ಉದ್ಯಾನ ನಗರಿ ಬೆಂಗಳೂರು ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಮುಂಚೂಣಿಯಲ್ಲಿದೆ. ಅಲ್ಲದೆ ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಐಟಿ ಕಂಪೆನಿಗಳ ಬೆಳವಣಿಗೆಯು ಹಿಂದೆಂದಿಗಿಂತಲೂ ಅಧಿಕವಾಗಿದೆ. ಆದರೆ ಸವಲತ್ತುಗಳು ಹೆಚ್ಚಿದಂತೆ ಇಲ್ಲಿ ಸಮಸ್ಯೆಗಳು ಕೂಡಾ ಜಾಸ್ತಿಯಾಗುತ್ತಿವೆ. ಒಂದು ಕಡೆ ಬೃಹತ್ ಕಾರ್ಖಾನೆಗಳು ನಿರ್ಮಾಣಗೊಳ್ಳುತ್ತಿದ್ದರೆ, ಮತ್ತೊಂದೆಡೆ ಆ ಕಾರ್ಖಾನೆಗಳಿಂದ ಹೊರಡುವ ವಿಷಕಾರಿ ಹೊಗೆ ಹಾಗೂ ಮಾಲಿನ್ಯವು ಇಡೀ ನಗರದ ವಾತಾವರಣವನ್ನೇ ಕಲುಷಿತಗೊಳಿಸಿದೆ. ರಸ್ತೆಗಳ ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಇದರ ದುಷ್ಪರಿಣಾಮದಿಂದಾಗಿ ಮಳೆಯ ತೀವ್ರ ಅಭಾವವನ್ನು ನಾವು ಎದುರಿಸುತ್ತಿದ್ದೇವೆ. ಕಳೆದ ಒಂದೆರಡು ವರ್ಷಗಳ ಹಿಂದೆ ಜುಲೈಯಿಂದ ಜನವರಿ ತಿಂಗಳವರೆಗೆ ಚಳಿ ಮತ್ತು ಮಳೆಯ ಅಬ್ಬರ ಇರುತ್ತಿತ್ತು. ಆದರೆ ಕ್ರಮೇಣ ಇದು ಮಾಯವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನಾವೆಲ್ಲರು ಪ್ರಾಕೃತಿಕ ಗಂಡಾಂತರ ಎದುರಿಸಬೇಕಾದೀತು. ಆದ್ದರಿಂದ ಸರಕಾರ ಈ ಕಡೆ ಗಮನಹರಿಸಿ ಪ್ರಕೃತಿಯನ್ನು ಉಳಿಸಿ ಬೆಳೆಯುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

Writer - -ರಿಯಾಝ್ ಅಹ್ಮದ್, ರೋಣ, ಗದಗ

contributor

Editor - -ರಿಯಾಝ್ ಅಹ್ಮದ್, ರೋಣ, ಗದಗ

contributor

Similar News