×
Ad

7 ಅಕಾಡಮಿ, 2 ಪ್ರಾಧಿಕಾರಗಳಿಗೆ ನೇಮಕವಾದ ಅಧ್ಯಕ್ಷರ ಹಾಗೂ ಸದಸ್ಯರ ಪಟ್ಟಿ

Update: 2017-08-07 21:09 IST

ಬೆಂಗಳೂರು, ಆ. 7: ಸಾಹಿತ್ಯ ಅಕಾಡೆಮಿಗೆ ಲೇಖಕ ಡಾ.ಅರವಿಂದ ಮಾಲಗತ್ತಿ, ನಾಟಕ ಅಕಾಡೆಮಿಗೆ ಜೆ.ಲೋಕೇಶ್, ಸಂಗೀತ-ನೃತ್ಯ ಅಕಾಡೆಮಿಗೆ ಪಂ.ಫಯಾಝ್ ಖಾನ್, ಪುಸ್ತಕ ಪ್ರಾಧಿಕಾರಕ್ಕೆ ಡಾ.ವಸುಂಧರಾ ಭೂಪತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಡಾ.ಕೆ.ಮರುಳಸಿದ್ದಪ್ಪ ಅವರುಗಳನ್ನು ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಏಳು ಅಕಾಡೆಮಿ, ಎರಡು ಪ್ರಾಧಿಕಾರಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಶಿಲ್ಪಕಲಾ ಅಕಾಡೆಮಿ ಸದಸ್ಯರ ಸಂಖ್ಯೆ 10ರಿಂದ 15ಕ್ಕೆ ಹಾಗೂ ತುಳು ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರ ಸಂಖ್ಯೆ 10ರಿಂದ 12ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಸಾಹಿತ್ಯ ಅಕಾಡೆಮಿ: ಡಾ.ಅರವಿಂದ ಮಾಲಗತ್ತಿ-ಅಧ್ಯಕ್ಷ, ಸದಸ್ಯರನ್ನಾಗಿ ಡಾ. ಶಿವಗಂಗಾ ರುಮ್ಮ, ಸಾವಿತ್ರಿ ಮುಜುಮದಾರ್, ಕವಿತಾ ಕುಸುಗಲ್, ಬಿ.ಎಂ. ಹರಪನಹಳ್ಳಿ, ಅಶೋಕ ಬ ಹಳ್ಳಿಯವರ್, ಸಿದ್ಧಲಿಂಗಪ್ಪ ಬೀಳಗಿ, ಸ. ರಘುನಾಥ್, ಡಾ.ರಂಗನಾಥ ಕಂಟನಕುಂಟೆ, ಡಾ. ರಾಜಶೇಖರ ಮಠಪತಿ, ಸಂಗಮೇಶ ಬಾದವಾಡಗಿ, ಕೆ.ವಿ.ರಾಜೇಶ್ವರಿ, ಡಾ. ಬೈರಮಂಗಲ ರಾಮೇಗೌಡ, ಡಾ.ಸಿ.ನಾಗಣ್ಣ, ಡಾ.ಪ್ರಶಾಂತ ನಾಯಕ, ಮುಮ್ತಾಜ್ ಬೇಗಂ ಇವರನ್ನು ನೇಮಿಸಲಾಗಿದೆ.

ನಾಟಕ ಅಕಾಡೆಮಿ:  ಜೆ.ಲೋಕೇಶ್-ಅಧ್ಯಕ್ಷ,ವೆಂಕಟರಾಜು, ಬಲವಂತ ರಾವ್ ವಿಠ್ಠಲ, ಬಿ.ಎಸ್.ವಿದ್ಯಾರಣ್ಯ, ರಾಮಕೃಷ್ಣ ಬೇಳ್ತೂರು, ಮೈಲಾರಪ್ಪ, ಹೊನ್ನ ನಾಯಕ, ಬೇಲೂರು ರಘುನಂದನ್, ಬಾಸುಮಾ ಕೊಡಗು, ಸಂದೀಪ್ ಬಿ., ಶಿವಕುಮಾರಿ, ಶಾಂತಾ ಕುಲಕರ್ಣಿ, ಕೇದಾರಸ್ವಾಮಿ ಶೇಖರಯ್ಯ, ಗಣೇಶ್ ಅಮೀನಗಡ, ಬಸವರಾಜಪ್ಪ ಶಿವಪ್ಪ ದೊಡ್ಡಮನಿ ಹಾಗೂ ಪ್ರೇಮಾ ತಾಳಿಕೋಟೆ ಉರ್ಫ್ ಫರ್ವಿನ್ ಅವರನ್ನು ಸದಸ್ಯರನ್ನಾಗಿ ನಿಯೋಜನೆ ಮಾಡಲಾಗಿದೆ.

ಸಂಗೀತ-ನೃತ್ಯ ಅಕಾಡೆಮಿ: ಪಂ. ಫಯಾಜ್ ಖಾನ್-ಅಧ್ಯಕ್ಷ, ನಿರುಪಮಾ ರಾಜೇಂದ್ರ, ರತ್ನಮಾಲಾ ಪ್ರಕಾಶ್, ವಿ.ರಮೇಶ್, ರೂಪಾ ರಾಜೇಶ್, ಡಾ.ಆರ್. ಎನ್.ಶ್ರೀಲತಾ, ಎಂ.ವಿ.ಗೋಪಾಲ, ಆನಂದ ಮಾದಲಗೆರೆ, ಅರವಿಂದ ಹೆಬ್ಬಾರ, ಶಿವಣ್ಣ ಹೂಗಾರ ದೇಸಾಯಿ ಕಲ್ಲೂರ, ನಾಗರಾಜ ಶ್ಯಾವಿ, ಎಸ್.ವಿ.ಕಲ್ಮಟ, ಅಶೋಕ ಹುಗ್ಗಣ್ಣನವರ, ಸಿದ್ಧೇಶ್ವರ ಶಾಸ್ತ್ರಿ ತೆಲ್ಲೂರ, ಎಸ್.ಬಾಳೇಶ್, ಹನುಮಂತಪ್ಪ ಮೇತ್ರಿ ಇವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಜಾನಪ: ಬಿ.ಟಾಕಪ್ಪ-ಅಧ್ಯಕ್ಷ, ಬಿ.ಎಸ್.ತಳವಾಡಿ, ನಿರ್ಮಲಾ, ಡಿ.ರಾಜಪ್ಪ, ಚಂದ್ರಪ್ಪ ಕಾಲ್ಕೆರೆ, ಕಾಳಯ್ಯ, ಮಹದೇವು, ವೆಂಕಟೇಶ ಹಿಂದ್ವಾಡಿ, ಸವಿತಾ ಚಿರಕುನ್ನಯ್ಯ, ಸಿ.ರಂಗಸ್ವಾಮಿ, ಹನುಮಂತ ಬರಗಾಲ, ಕೆ.ಸಿ.ನಾಗರಜ್ಜಿ, ಪುರುಶೋತ್ತಮ ಪಿ.ಗೌಡ, ವಿಜಯಕುಮಾರ ಸೋನಾರೆ, ಮಂಜಮ್ಮ ಜೋಗತಿ ಪ್ರಕಾಶ್ ಎಸ್.ಅಂಗಡಿ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಶಿಲ್ಪಕಲಾ: ಕಾಳಾಚಾರ್-ಅಧ್ಯಕ್ಷ, ಕೃಷ್ಣಾ ನಾಯಕ, ಎಂ.ರಘು ಶಿಲ್ಪಿ, ಲಕ್ಷ್ಮೀಪತಿ, ಎಸ್.ಜಿ.ಅರುಣಕುಮಾರ, ಸಿ.ಪಿ.ವಿಶ್ವನಾಥ್, ಭರತರಾಜ್ ಎಚ್.ಎಚ್., ಪಿ.ಬಾಬು, ಸುಕೇಶ್ ಬಿ.ಸಿ., ಬಸವರಾಜ ಪಾಂಡುರಂಗ ಕಂಬಾರ, ಅಲಿಬಾಬ ಸೈ ನಧಾಫ, ವಿಠ್ಠಲ ಮನೋಹರ ಬಡಿಗೇರ, ಸುಮಲತಾ ಕವಲೂರು, ವಿರುಪಾಕ್ಷಪ್ಪ ಶಿಲ್ಪಿ, ನಿಂಗಪ್ಪ ದೇವೀಂದ್ರಪ್ಪ ಕೇರಿ, ಗಾಯಿತ್ರಿ ಎ.ಶಿಲ್ಪಿ ಅವರನ್ನು ಸದಸ್ಯರನ್ನಾಗಿ ನೇಮಿಸಿದೆ.

ಕೊಂಕಣಿ ಸಾಹಿತ್ಯ: ಸದಸ್ಯರನ್ನಾಗಿ-ಮೋಹನ ವರ್ಣೇಕರ್, ಜೋಕಿಂ ಸ್ಟ್ಯಾನ್ಲಿ, ಪಾವ್ಲ ಮೋರಾಸ್, ದಾಮೋದರ್ ಬಂಡಾರಕರ್, ಲಿಂಗಪ್ಪ ಗೌಡ, ಉಲ್ಲಾಸ್ ಲಕ್ಷ್ಮಿ ನಾರಾಯಣ, ಸುಮಂಗಲಾ ಸದಾನಂದ ನಾಯಕ, ನಾಗೇಶ ಅಣ್ವೇಕರ್, ರಾಮ ಎ. ಮೇಸ್ತ್ರ, ಪೂರ್ಣಿಮಾ ಸುರೇಶ್, ಓಂ ಗಣೇಶ ಉಪ್ಪುಂದ, ಸಂತೊಷ ಮಹಾಲೆ ಅವರನ್ನು ನೇಮಿಸಲಾಗಿದೆ.

ತುಳು ಸಾಹಿತ್ಯ: ಎ.ಸಿ.ಭಂಡಾರಿ-ಅಧ್ಯಕ್ಷ, ಸುಧಾ ನಾಗೇಶ್, ವಿಜಯಾ ಶೆಟ್ಟಿ, ತಾರಾನಾಥ ಗಟ್ಟಿ ಕಾಪಿಕಾಡು, ಗೋಪಾಲ್ ಅಂಚನ್, ವಿದ್ಯಾಶ್ರಿ ಎಸ್, ದುರ್ಗಾ ಮೆನನ್, ಶಿವಾನಂದ ಕರ್ಕೆರಾ, ಬೆನೆಟ್ ಅಮ್ಮಣ್ಣ, ಚಂದ್ರಶೇಖರ ಗಟ್ಟಿ ಬೋಳೂರು, ಡಾ.ವಾಸುದೇವ ಬೆಳ್ಳೆ, ನಿರಂಜನ ರೈ ಮಠಂತಬೆಟ್ಟು, ಡಾ.ವೈ.ಎನ್.ಶೆಟ್ಟಿ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಡಾ.ಕೆ.ಮರುಳಸಿದ್ಧಪ್ಪ-ಅಧ್ಯಕ್ಷ, ಡಾ.ಎಂ. ಜಿ.ಹೆಗಡೆ, ಡಾ.ಟಿ.ಎಸ್.ವಿವೇಕಾನಂದ, ದೇವರಾಜ ಕುರುಬ, ಎಂ.ಎಸ್. ಶಶಿಕಲಾ ಗೌಡ, ಡಾ.ತಾರಿಣಿ ಶುಭದಾಯಿನಿ, ಡಾ.ಮೋಹನ ಕುಂಟಾರ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಆರೀಫ್ ರಾಜಾ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ.

ಪುಸ್ತಕ ಪ್ರಾಧಿಕಾರ:  ಡಾ.ವಸುಂಧರಾ ಭೂಪತಿ-ಅಧ್ಯಕ್ಷೆ, ಡಾ.ಸಿದ್ಧಣ್ಣ ಉಕ್ಕನಾಳ, ಡಾ.ಜಯದೇವಿ ಗಾಯಕವಾಡ, ಪ್ರಕಾಶ ಕಂಬತ್ತಹಳ್ಳಿ, ದ್ವಾರನಕುಂಟೆ ಪಾತಣ್ಣ, ಡಾ.ಕವಿತಾ ರೈ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News