ಹಜ್‌ನಲ್ಲಿ ಸೌದಿ ಪಾತ್ರ ಕಡಿತಗೊಳಿಸಲು ಸಾಧ್ಯವಿಲ್ಲ: ಮದೀನಾ ಗವರ್ನರ್

Update: 2017-08-08 16:31 GMT

ಜಿದ್ದಾ (ಸೌದಿ ಅರೇಬಿಯ), ಆ. 8: ಹಜ್ಜನ್ನು ರಾಜಕೀಕರಣ ಮತ್ತು ಅಂತಾರಾಷ್ಟ್ರೀಕರಣಗೊಳಿಸುವ ಎಲ್ಲ ಪ್ರಯತ್ನಗಳನ್ನು ಸೌದಿ ಅರೇಬಿಯ ತಿರಸ್ಕರಿಸುತ್ತದೆ ಎಂದು ಕೇಂದ್ರೀಯ ಹಜ್ ಸಮಿತಿಯ ಅಧ್ಯಕ್ಷ ರಾಜಕುಮಾರ ಖಾಲಿದ್ ಅಲ್-ಫೈಸಲ್ ಸೋಮವಾರ ಹೇಳಿದರು.

‘ಹಜ್ ಒಂದು ಪೂಜೆ ಮತ್ತು ನಾಗರಿಕ ನಡವಳಿಕೆ’ ಎಂಬ ಅಭಿಯಾನವನ್ನು ಉದ್ಘಾಟಿಸಿದ ಬಳಿಕ ಮಕ್ಕಾ ಗವರ್ನರ್ ಮತ್ತು ದೊರೆ ಸಲ್ಮಾನ್‌ರ ಸಲಹಾಕಾರರೂ ಆಗಿರುವ ರಾಜಕುಮಾರ ಖಾಲಿದ್ ಮಾತನಾಡುತ್ತಿದ್ದರು.

‘‘ಹಜ್ ಎನ್ನುವುದು ಶಾಂತಿಯ ಸಂದೇಶವಾಗಿದೆ’’ ಎಂದರು.

ಹಜ್ ಯಾತ್ರಿಗಳಿಗೆ ಸೇವೆಗಳನ್ನು ನೀಡುವಲ್ಲಿ ಸೌದಿ ಅರೇಬಿಯದ ಪಾತ್ರವನ್ನು ಕಡಿಮೆಗೊಳಿಸಬೇಕೆಂದು ಕೋರಿ ಕತರ್ ನಡೆಸುತ್ತಿರುವ ಅಭಿಯಾನದ ಬಗ್ಗೆ ಮಾತನಾಡಿದ ರಾಜಕುಮಾರ ಖಾಲಿದ್, ‘‘ಅದಕ್ಕೆ ಉತ್ತರ ಈ ಅಭಿಯಾನದ ಶಿರೋನಾಮೆಯಲ್ಲಿದೆ. ಧಾರ್ಮಿಕ ಯಾತ್ರೆಯೊಂದನ್ನು ರಾಜಕೀಕರಣಗೊಳಿಸಲು ಸಾಧ್ಯವಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News